ಆರ್ಷ ವಿದ್ಯಾ ಸಮಾಜದ ಸಂಸ್ಥಾಪನಾ ದಿನ – ಜುಲೈ 8
ಇಂದು (ಜುಲೈ 8):
ಆರ್ಷ ವಿದ್ಯಾ ಸಮಾಜಕ್ಕೆ 27 ವರ್ಷಗಳು ಪೂರ್ಣಗೊಂಡಿವೆ…!
ಆಧುನಿಕ ಕಾಲದ ಸವಾಲುಗಳನ್ನು ಮತ್ತು ಸಾಧ್ಯತೆಗಳನ್ನು ಅರಿತು, ಪಂಚಮಹಾಕರ್ತವ್ಯಗಳನ್ನು ವೈಜ್ಞಾನಿಕ ಹಾಗೂ ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಿ, ಶ್ರೀಪರಮೇಶ್ವರ ಮತ್ತು ಆರ್ಷಗುರುಪರಂಪರೆಗಳು ನೀಡಿದ “ಕೃಣ್ವಂತೋ ವಿಶ್ವಮಾರ್ಯಂ” (ಮಾನವನನ್ನೂ- ಲೋಕವನ್ನೂ ಶ್ರೇಷ್ಠಗೊಳಿಸಿರಿ) ಎಂಬ ಮಹಾದೌತ್ಯವನ್ನು ನೆರವೇರಿಸಲು 1999ರ ಜುಲೈ 8ರಂದು ಆಚಾರ್ಯಶ್ರೀ ಮನೋಜ್ ಜಿರವರು ಸ್ಥಾಪಿಸಿದ ಆಧ್ಯಾತ್ಮಿಕ–ದಾರ್ಶನಿಕ–ಶೈಕ್ಷಣಿಕ–ಸಾಂಸ್ಕೃತಿಕ–ನವೋತ್ಥಾನ ಸಂಸ್ಥೆಯೇ ಆರ್ಷವಿದ್ಯಾಸಮಾಜಂ (AVS).
ಈ ಲಕ್ಷ್ಯಯನ್ನು ಸಾಧಿಸಲು AVS ಎರಡು ರೀತಿಯ ಕಾರ್ಯವಿಧಾನಗಳನ್ನು ಉದ್ದೇಶಿಸಿದೆ.
ಭಾವಾತ್ಮಕ: ಯಥಾರ್ಥ ಸನಾತನಧರ್ಮ ಹಾಗೂ ಆ ದಿವ್ಯಶಾಸ್ತ್ರದ ಪ್ರಯೋಜನಗಳನ್ನು – (ಅಂದರೆ ಸಂಪೂರ್ಣ ಆರೋಗ್ಯ, ಸಮಗ್ರ ವ್ಯಕ್ತಿತ್ವ ವಿಕಾಸ, ಮಾನವ ಪರಿವರ್ತನೆ, ಸಂಪೂರ್ಣ ಜೀವನ ವಿಜಯ, ಶ್ರೇಷ್ಠ ಸಮಾಜ ನಿರ್ಮಾಣ, ಸರ್ವ ದುಃಖಗಳ ಮೂಲ ನಿರ್ಮೂಲನೆ ಇತ್ಯಾದಿ) – ವಿಶ್ವದಾದ್ಯಂತ ತಲುಪಿಸುವುದು.
ಸಂರಕ್ಷಣಾತ್ಮಕ: ಇಂದು ಸಮಾಜ ಎದುರಿಸುತ್ತಿರುವ ಆರು ವಿಧದ ಆಸುರಿಕ ಶಕ್ತಿಗಳಿಂದ ಜನತೆಯನ್ನು ಸಂರಕ್ಷಿಸುವುದು.
ಈ ಗುರಿಗಳನ್ನು ಸಾಧಿಸಲು “ದಶತಲ ಕಾರ್ಯಯೋಜನೆ” ಎಂಬ ಅದ್ವಿತೀಯ ಸಂಘಟನಾ ಯೋಜನೆಯನ್ನು ಸದ್ಗುರುಗಳು ರೂಪಿಸಿದ್ದಾರೆ.

ಸರಳವಾಗಿ ಹೇಳುವುದಾದರೆ, ಆರ್ಷವಿದ್ಯಾಸಮಾಜದ ಕಾರ್ಯಗಳು ಮೂರು ಹಂತಗಳಲ್ಲಿ ನಡೆಯುತ್ತವೆ.
1) Intervention, Recovery & Rehabilitation (ತುರ್ತು ಸಂರಕ್ಷಣಾ ಯೋಜನೆ / Rescue Operation)
ಸಮಾಜದಲ್ಲಿರುವ ಎಲ್ಲರೂ, ಬಾಲ್ಯದಿಂದಲೇ ವಿವಿಧ ರೀತಿಯ ಪ್ರಭಾವಗಳಿಗೆ ಒಳಗಾಗಿ, ಆರು ವಿಧದ ಬ್ರೇನ್‌ವಾಶಿಂಗ್‌ಗೆ ಸಿಲುಕಿ ತಮಗೂ, ತಮ್ಮ ಕುಟುಂಬಕ್ಕೂ, ಸಮಾಜಕ್ಕೂ, ರಾಷ್ಟ್ರಕ್ಕೂ ಹಾಗೂ ಜಗತ್ತಿಗೂ ವಿರುದ್ಧವಾಗಿ ಸಾಗುತ್ತಿರುವವರನ್ನು ಮರಳಿ ಸರಿದಾರಿಗೆ ತರುವುದು ಈ ತುರ್ತು ಚಿಕಿತ್ಸಾ ಕ್ರಮ (Rescue Operation) ಆಗಿದೆ.
ಸುದರ್ಶನಂ ಡೀ-ರ್ಯಾಡಿಕಲೈಸೇಶನ್ ಮಾರ್ಗದರ್ಶನದ ಮೂಲಕ ಆರ್ಷ ವಿದ್ಯಾ ಸಮಾಜಂ ಈ ಕಾರ್ಯವನ್ನು ನಿರ್ವಹಿಸುತ್ತದೆ.
ಸಾಮಾನ್ಯ ಬುದ್ಧಿ, ಚರ್ಚೆಗೆ ಸಿದ್ಧತೆ, ಸತ್ಯವನ್ನು ಅರಿತರೆ ಅದನ್ನು ಒಪ್ಪಿಕೊಳ್ಳುವ ಬೌದ್ಧಿಕ ಪ್ರಾಮಾಣಿಕತೆ – ಈ ಮೂರು ಷರತ್ತುಗಳನ್ನು ಹೊಂದಿರುವ ಯಾರನ್ನಾದರೂ ಸರಿಯಾದ ದಿಕ್ಕಿಗೆ ತರುವ ಚಿಂತನಾ ಸಾಮರ್ಥ್ಯ ಹೊಂದಿದ ಡೀ-ರ್ಯಾಡಿಕಲೈಸೇಶನ್ ಕೌನ್ಸೆಲಿಂಗ್ ಕಾರ್ಯಕ್ರಮಗಳು!!!
ರ್ಯಾಡಿಕಲೈಸೇಶನ್‌ಗೆ ಒಳಗಾದವರನ್ನು ಮಾತ್ರವಲ್ಲ, ಈ ಆಸುರಿಕ ಶಕ್ತಿಗಳ ಮಿಷನರಿ ವಕ್ತಾರರಾಗಿ ಮಾರ್ಪಟ್ಟವರನ್ನೂ ಮರಳಿ ಕರೆತಂದು ಸನಾತನಧರ್ಮದ ಪ್ರಚಾರಕರನ್ನಾಗಿ ರೂಪಿಸಿದ ಹೆಮ್ಮೆಯ ಇತಿಹಾಸ ಆರ್ಷ ವಿದ್ಯಾ ಸಮಾಜಕ್ಕಿದೆ.
ರಾಷ್ಟ್ರವಿರೋಧಿ ಮತಾಂತರ ಸೇರಿದಂತೆ ತಪ್ಪು ಸಿದ್ಧಾಂತಗಳ ಕಡೆಗೆ ಹೋಗುತ್ತಿದ್ದ ಹತ್ತಾರು ಸಾವಿರಾರು ಜನರನ್ನು ಸರಿದಾರಿಗೆ ತಂದ ಮಹಾತ್ಮರು ಆಚಾರ್ಯಶ್ರೀ ಮನೋಜ್ ಜಿ.
ಅಜ್ಞಾನ, ತಪ್ಪು ಕಲ್ಪನೆಗಳು ಹಾಗೂ ಬ್ರೇನ್‌ವಾಶಿಂಗ್‌ನಿಂದ ರಾಷ್ಟ್ರವಿರೋಧಿ ಚಿಂತನೆಗಳಿಗೆ ಒಳಗಾಗಿದ್ದ 8,500ಕ್ಕೂ ಹೆಚ್ಚು ಯುವಕ-ಯುವತಿಯರನ್ನು ಆಚಾರ್ಯರು ಈಗಾಗಲೇ ಮರಳಿ ಕರೆತಂದಿದ್ದಾರೆ!! ಇವರಲ್ಲಿ ಸುಮಾರು ಸಾವಿರ ಮಂದಿಗೆ ರ್ಯಾಡಿಕಲೈಸೇಶನ್‌ನನ್ನು ಎದುರಿಸುವ ಸಾಮರ್ಥ್ಯ ದೊರೆತಿದೆ. ಮರಳಿ ಬಂದವರಲ್ಲಿ ನೂರಕ್ಕೂ ಹೆಚ್ಚು ಮಂದಿ ತಮ್ಮ ಅನುಭವಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಮಂದಿ ಸನಾತನಧರ್ಮದ ಪ್ರಚಾರಕ- ಪ್ರಚಾರಕಿಯರಾಗಿಯೂ ರೂಪುಗೊಂಡಿದ್ದಾರೆ. ನಾಲ್ವರು ತಮ್ಮ ಅನುಭವಗಳನ್ನು ವಿವರಿಸಿ ಪುಸ್ತಕಗಳನ್ನೂ ರಚಿಸಿದ್ದಾರೆ.
2) ಜಾಗೃತಿ ಮೂಡಿಸುವುದು ಅಥವಾ ತಡೆಗಟ್ಟುವುದು (PREVENTION):
ತಪ್ಪು ಚಿಂತನೆಗಳ ಕಡೆಗೆ ಹೋಗದಂತೆ ತಡೆಯುವುದೇ ಈ ಕ್ಷೇತ್ರದ ಕಾರ್ಯವಾಗಿದೆ. ದರ್ಶನ, ಇತಿಹಾಸ ಹಾಗೂ ವರ್ತಮಾನವನ್ನು ಆಧಾರವಾಗಿಟ್ಟುಕೊಂಡು ಸಮಾಜವನ್ನು ಕಾಡುತ್ತಿರುವ ಅಪಾಯವನ್ನು ನಿವಾರಿಸುವ ಕಾರ್ಯಯೋಜನೆಯಿದು. ಸಮರ್ಪಕ ಜಾಗೃತಿಯ ಮೂಲಕ ಲಕ್ಷಾಂತರ ಜನರಿಗೆ ಸರಿಯಾದ ಮಾರ್ಗದರ್ಶನ ನೀಡಿ ರ್ಯಾಡಿಕಲೈಸೇಶನ್‌ನನ್ನು ತಡೆಯಲು ಸಾಧ್ಯವಾಗಿದೆ. ಡೀ-ರ್ಯಾಡಿಕಲೈಸೇಶನ್ ಕೌನ್ಸೆಲಿಂಗ್‌ನಲ್ಲಿ ವಿವಿಧ ಸಂಘಟನೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ.
3) ಸಮೂಲ ಸಮಸ್ಯೆ ಪರಿಹಾರ (ಶಾಶ್ವತ ಯೋಜನೆ)
ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ (ಮೂಲ ಕಾರಣವನ್ನು ಕಂಡುಹಿಡಿದು ಸಮೂಲವಾಗಿ ಪರಿಹರಿಸುವುದು) ಮಾತ್ರವಲ್ಲದೆ “ಲೋಕಾಃ ಸಮಸ್ತಾಃ ಸುಖಿನೋ ಭವಂತು” ಎಂಬ ಗುರಿಯನ್ನು ಸಾಧಿಸುವ ಉದ್ದೇಶದಿಂದ AVS ನಾಲ್ಕು ವಿಧದ ಅದ್ವಿತೀಯ ಕಾರ್ಯಗಳನ್ನು ರೂಪಿಸಿದೆ!
(a) ಸಮಗ್ರ ಮತ್ತು ವೈಜ್ಞಾನಿಕ ಅನುಷ್ಠಾನ–ಸಂಶೋಧನೆ–ತರಬೇತಿ ಯೋಜನೆ ಕೋರ್ಸ್‌ಗಳು (ಶಿವಶಕ್ತಿ ಯೋಗವಿದ್ಯೆ, ಆಧ್ಯಾತ್ಮಿಕ ಶಾಸ್ತ್ರಂ, ಭಾರತೀಯ ಸಂಸ್ಕೃತಿ, ವಿದ್ಯಾರ್ಥಿ ನೈಪುಣ್ಯ ವರ್ಗ (SEP: Students Excellence Program), ಸುದರ್ಶನಂ, ಮೃತ್ಯುಂಜಯಂ, ಸಂಘಟನಾ ಶಾಸ್ತ್ರ, ವ್ಯಾಯಾಮಕೀ ವಿಜ್ಞಾನ), ತರಗತಿಗಳು, ಶಿಬಿರಗಳು ಇತ್ಯಾದಿ.
(b) ಧರ್ಮಪ್ರಚಾರಕ ಪದ್ಧತಿ (ಸಂಘಟನಾ ಯೋಜನೆ): ಸನಾತನಧರ್ಮದ ಪ್ರಚಾರಕರನ್ನು ಗುರುತಿಸಿ ತರಬೇತಿ ನೀಡಿ ವಿವಿಧ ಸ್ಥಳಗಳಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನಿಯೋಜಿಸುವುದು.
(c) ಸಂಸ್ಥಾ ಯೋಜನೆ: ಸಾಧನಾ ಶಕ್ತಿಕೇಂದ್ರಗಳು, ವಿಜ್ಞಾನಭಾರತಿ ಅಂತರರಾಷ್ಟ್ರೀಯ ಅಧ್ಯಯನ–ಸಂಶೋಧನಾ ಪ್ರತಿಷ್ಠಾನ, ವಿಜ್ಞಾನಭಾರತಿ ವಿದ್ಯಾಕೇಂದ್ರಗಳು, ವಿಜ್ಞಾನಭಾರತಿ ಲರ್ನಿಂಗ್ ಸೆಂಟರ್‌ಗಳು.
(d) ವ್ಯಾಪಕ ಮತ್ತು ಸಮಗ್ರವಾದ ನಿಜವಾದ ಸೇವೆ–ಸಶಕ್ತೀಕರಣ–ಸಂರಕ್ಷಣಾ ಕಾರ್ಯಗಳು
ಸನಾತನಧರ್ಮವನ್ನು ವಿಶ್ವದಾದ್ಯಂತ ಹರಡುವ ಮಹೋನ್ನತ ಲಕ್ಷ್ಯದ ಭಾಗವಾಗಿ, ಆರ್ಷ ವಿದ್ಯಾ ಸಮಾಜವು ಕೇರಳದ ತಿರುವನಂತಪುರಂ, ಎರ್ನಾಕುಲಂ, ತ್ರಿಶೂರ್ ಜಿಲ್ಲೆಗಳಲ್ಲಿಯೂ, ಚೆನ್ನೈ, ಬೆಂಗಳೂರು, ಮಹಾರಾಷ್ಟ್ರ, ದೆಹಲಿ ಹಾಗೂ ಪಶ್ಚಿಮ ಬಂಗಾಳದಲ್ಲಿಯೂ ಕೇಂದ್ರಗಳನ್ನು ಆರಂಭಿಸಿದೆ. 2026ರಲ್ಲಿ ಭಾರತದ ಇತರ ರಾಜ್ಯಗಳಿಗೂ ಹಾಗೂ ವಿದೇಶಗಳಿಗೂ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವುದು ಗುರಿಯಾಗಿದೆ.
ಆದರೆ, ಕಳೆದ ಪಯಣವನ್ನು ಒಮ್ಮೆ ಹಿಂತಿರುಗಿ ನೋಡಿದರೆ, ಆರ್ಷ ವಿದ್ಯಾ ಸಮಾಜದ ಪಯಣ ಸುಗಮವೂ ಸುಂದರವೂ ಆಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ!
ಬೆಳವಣಿಗೆಗೂ ಅಡ್ಡಿಯಾಗುವ ಆರ್ಥಿಕ ಸಂಕಷ್ಟಗಳು ಒಂದು ಕಡೆ…! ಮತ್ತೊಂದು ಕಡೆ, ಮತಾಂತರ ಮಾಫಿಯಾಗಳ ಹಾಗೂ ಮತಬ್ಯಾಂಕ್ ರಾಜಕೀಯದ ಬೆದರಿಕೆಗಳು ಮತ್ತು ಸವಾಲುಗಳು…!! ಅನೇಕ ಸುಳ್ಳು ಪ್ರಕರಣಗಳು…! ಅಪಪ್ರಚಾರಗಳು…!! ನಿರಂತರವಾಗಿ ನಡೆದವು…!!!
ಆದರೆ ಇವೆಲ್ಲವನ್ನೂ ಎದುರಿಸಲು ಸಾಧ್ಯವಾದದ್ದು ಪರಮೇಶ್ವರನ ಕೃಪೆ, ಆರ್ಷಗುರುಪರಂಪರೆಯ ಅನುಗ್ರಹ, ಸನಾತನಧರ್ಮಶಾಸ್ತ್ರದ ಕೃಪೆ ಹಾಗೂ ಆರ್ಷ ವಿದ್ಯಾ ಸಮಾಜದ ಗುರುದೇವರಾದ ಆಚಾರ್ಯಶ್ರೀ ಅವರ ದೃಢ ಸಾನ್ನಿಧ್ಯ ಮತ್ತು ಮಾರ್ಗದರ್ಶನದಿಂದಲೇ…!
ನಿಂದೆ–ಸ್ತುತಿ, ಮಾನ–ಅಪಮಾನ, ಸುಖ–ದುಃಖ, ಜಯ–ಪರಾಜಯ, ಲಾಭ–ನಷ್ಟ ಯಾವುದರಲ್ಲಿಯೂ ತತ್ತರಿಸದೆ ಸ್ಥಿತಪ್ರಜ್ಞರಾಗಿ ನಿಂತಿರುವ ಆ ಸದ್ಗುರುವೇ ನಮಗೆ ಆದರ್ಶ.
ಜೀವನದ ಕೊನೆಯ ಉಸಿರಿನವರೆಗೂ ಈ ಸತ್ಕಾರ್ಯದ ಮಾರ್ಗದಲ್ಲಿ ಧೈರ್ಯದಿಂದ ಮುನ್ನಡೆಯುವ ದೃಢ ಸಂಕಲ್ಪದೊಂದಿಗೆ, ರಾಷ್ಟ್ರೀಯ ಜನತೆಗೆ ಆರೋಗ್ಯ–ಶೈಕ್ಷಣಿಕ ಸೇವೆಗಳು, ಸಂಪೂರ್ಣ ಸಶಕ್ತೀಕರಣ ಹಾಗೂ ಸಂರಕ್ಷಣಾ ಕಾರ್ಯಗಳನ್ನು ನೀಡುತ್ತಾ ಟೀಮ್ AVS ದಣಿಯದೆ, ಕುಗ್ಗದೆ, ಒಗ್ಗಟ್ಟಿನಿಂದ ಮುನ್ನಡೆಯುತ್ತಿದೆ..!!
ಆರ್ಷ ವಿದ್ಯಾ ಸಮಾಜದ (AVS) ಇಂದಿನವರೆಗಿನ ಬೆಳವಣಿಗೆಯಲ್ಲಿ ಬೆಂಬಲ ನೀಡಿದ, ಸಂಕಷ್ಟಗಳಲ್ಲಿ ಜೊತೆ ನಿಂತು ಸಹಕರಿಸಿದ ಎಲ್ಲಾ ಸಜ್ಜನರಿಗೂ ನಮ್ಮ ಆತ್ಮಾರ್ಥವಾದ ಪ್ರೀತಿ ಮತ್ತು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ…! ಮುಂದೆಯೂ ನಿಮ್ಮಿಂದ ಎಲ್ಲ ರೀತಿಯ ಸಹಕಾರ ದೊರಕಲಿ ಎಂದು ಜಗದೀಶ್ವರನ ನಾಮದಲ್ಲಿ ವಿನಂತಿಸುತ್ತೇವೆ..!
ಪ್ರೀತಿ ಮತ್ತು ಗೌರವಗಳೊಂದಿಗೆ,
ಆರ್ಷ ವಿದ್ಯಾ ಸಮಾಜಂ