Member   Donate   Books   0

ಇಂದು (19-05-2026) ಸದ್ಗುರು ಆಚಾರ್ಯಶ್ರೀ ಕೆ. ಆರ್ ಮನೋಜ್ ಜಿರವರ ಜನ್ಮದಿನ.

AVS

“ಮಾನಸ ಭಜರೇ ಗುರುಚರಣಂ
ದುಸ್ತರಭವಸಾಗರತರಣಂ”
 
ಇಂದು (19-05-2026) ಸದ್ಗುರು ಆಚಾರ್ಯಶ್ರೀ ಕೆ. ಆರ್ ಮನೋಜ್ ಜಿರವರ ಜನ್ಮದಿನ. ಸಂಪೂಜ್ಯರಾದ ಆಚಾರ್ಯಜಿಯವರಿಗೆ ಹೃದಯತುಂಬಿದ ಜನ್ಮದಿನದ ಶುಭಾಶಯಗಳು….!
 
ಆರ್ಷ ವಿದ್ಯಾ ಸಮಾಜಂ, ಶಿವಶಕ್ತಿ ಯೋಗವಿದ್ಯಾ ಕೇಂದ್ರ, ಮನೀಷಾ ಸಾಂಸ್ಕಾರಿಕ ವೇದಿ, ವಿಜ್ಞಾನಭಾರತಿ ವಿದ್ಯಾ ಕೇಂದ್ರ ಸೇರಿದಂತೆ ಹಲವು ಮಹಾ ಸಂಸ್ಥೆಗಳ ಸಂಸ್ಥಾಪಕರು.
 
ಅತಿ ಶ್ರೇಷ್ಠವಾದ ಮೂರು ಆರ್ಷ ಗುರು ಪರಂಪರೆಗಳಿಗೆ ಸೇರಿರುವ ಅಪರೂಪದ ವ್ಯಕ್ತಿತ್ವ ಸದ್ಗುರು ಆಚಾರ್ಯಶ್ರೀ ಕೆ. ಆರ್ ಮನೋಜ್ ಜಿ.

ಶ್ರೀ ಶಂಕರಗುರುದೇವ್ ಜಿ ಎಂಬ ಅವಧೂತ ಮಹಾಸಿದ್ಧರ ಅನುಗ್ರಹ, ದೀಕ್ಷೆ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನಗಳನ್ನು ಬಾಲ್ಯದಿಂದಲೇ ಪಡೆಯುವ ಅಪರೂಪದ ಸೌಭಾಗ್ಯ ಅವರಿಗೆ ಲಭಿಸಿದೆ. ಜೊತೆಗೆ ಶ್ರೀ ನಿಖಿಲೇಶ್ವರಾನಂದ ಪರಮಹಂಸ ಜಿ, ಮಹಾವತಾರ ಬಾಬಾಜಿಯವರ ಕ್ರಿಯಾಯೋಗ ಪರಂಪರೆ (ಪರಮಹಂಸ ಯೋಗಾನಂದ ಜಿ) ಗಳ ಭಾಗವಾಗಿ ಸನಾತನ ಧರ್ಮದ ಗೂಢ ವಿದ್ಯೆಗಳನ್ನು ಮತ್ತು ಕ್ರಿಯಾಯೋಗವನ್ನು ಅಭ್ಯಾಸ ಮಾಡುವ ಅವಕಾಶವೂ ದೊರೆತಿದೆ. ವಿವಿಧ ಸಂಸ್ಥೆಗಳ ಯೋಗವಿದ್ಯಾ ಕೋರ್ಸ್‌ಗಳೊಂದಿಗೂ ಅವರು ಗುರುತಿಸಿಕೊಂಡಿದ್ದಾರೆ.

ಆಧುನಿಕ ಕಾಲದ ಸವಾಲುಗಳು ಮತ್ತು ಸಾಧ್ಯತೆಗಳನ್ನು ಗುರುತಿಸಿ, ಪಂಚಮಹಾ ಕರ್ತವ್ಯಗಳನ್ನು ವೈಜ್ಞಾನಿಕವಾಗಿ ಹಾಗೂ ವ್ಯವಸ್ಥಿತವಾಗಿ ನಿರ್ವಹಿಸಿ, ಶ್ರೀಪರಮೇಶ್ವರ ಮತ್ತು ಆರ್ಷ ಗುರು ಪರಂಪರೆಗಳು ನೀಡಿದ “ಕೃಣ್ವಂತೋ ವಿಶ್ವಮಾರ್ಯಂ” (ಮಾನವನನ್ನೂ ಜಗತ್ತನ್ನೂ ಶ್ರೇಷ್ಠವಾಗಿಸುವುದು) ಎಂಬ ಮಹಾ ದೌತ್ಯವನ್ನು ಈಡೇರಿಸುವುದಕ್ಕಾಗಿ 1999 ಜುಲೈ 8 ರಂದು ಸದ್ಗುರು ಆಚಾರ್ಯಶ್ರೀ ಮನೋಜ್ ಜಿಯವರು ಸ್ಥಾಪಿಸಿರುವ ಆಧ್ಯಾತ್ಮಿಕ-ದಾರ್ಶನಿಕ-ಶೈಕ್ಷಣಿಕ-ಸಾಂಸ್ಕೃತಿಕ-ನವೋತ್ಥಾನ ಸಂಸ್ಥೆಯೇ ಆರ್ಷ ವಿದ್ಯಾ ಸಮಾಜಂ (AVS).

ಭಾವಾತ್ಮಕ ಮತ್ತು ಸಂರಕ್ಷಣಾತ್ಮಕ ಎಂಬ ಎರಡು ರೀತಿಯಲ್ಲಿ AVS ಈ ಗುರಿಯನ್ನು ಪೂರ್ಣಗೊಳಿಸಲು ಉದ್ದೇಶಿಸಿದೆ.

ಭಾವಾತ್ಮಕ:-
ಯಥಾರ್ಥ ಸನಾತನ ಧರ್ಮ ಮತ್ತು ಆ ದಿವ್ಯ ವಿಜ್ಞಾನದ ಪ್ರಯೋಜನಗಳನ್ನು – (ಅಂದರೆ ಪೂರ್ಣ ಸ್ವಾಸ್ಥ್ಯ, ಸಮಗ್ರ ವ್ಯಕ್ತಿ ವಿಕಸನ, ಮಾನವ ವಿಕಾಸ, ಸಂಪೂರ್ಣ ಜೀವನ ವಿಜಯ, ಶ್ರೇಷ್ಠ ಸಮಾಜ ನಿರ್ಮಾಣ, ಸರ್ವದುಃಖಗಳ ಸಮೂಲ ಪರಿಹಾರ ಮುಂತಾದವುಗಳನ್ನು) ಜಗತ್ತಿನಾದ್ಯಂತ ತಲುಪಿಸುವುದು.
 
ಸಂರಕ್ಷಣಾತ್ಮಕ:-
ಇಂದು ಸಮಾಜ ಎದುರಿಸುತ್ತಿರುವ ಆರು ರೀತಿಯ ದುಷ್ಟಶಕ್ತಿಗಳಿಂದ ಜನರನ್ನು ಮುಕ್ತಗೊಳಿಸುವುದು.
ಈ ಗುರಿಗಳನ್ನು ಸಾಧಿಸಲು ಅವರು ‘ದಶತಲ ಪ್ರವರ್ತನ ಪದ್ಧತಿ’ (ಹತ್ತು ಹಂತಗಳ ಕಾರ್ಯಯೋಜನೆ) ಎಂಬ ವಿಶಿಷ್ಟ ಸಂಘಟನಾ ಯೋಜನೆಯನ್ನು ರೂಪಿಸಿದ್ದಾರೆ.

ಸರಳವಾಗಿ ಹೇಳುವುದಾದರೆ ಆರ್ಷ ವಿದ್ಯಾ ಸಮಾಜದ ಚಟುವಟಿಕೆಗಳು ಮೂರು ಹಂತಗಳಲ್ಲಿವೆ.

1) Intervention, Recovery & Rehabilitation (ತುರ್ತು ರಕ್ಷಣಾ ಯೋಜನೆ / Rescue Operation)
ಸಮಾಜದಲ್ಲಿ ಪ್ರತಿಯೊಬ್ಬರನ್ನೂ ಬಾಲ್ಯದಿಂದಲೇ ಹಲವು ವಿಧಗಳಲ್ಲಿ ಪ್ರಭಾವಿಸುವ ಆರು ರೀತಿಯ ಬ್ರೈನ್ ವಾಷಿಂಗ್‌ಗಳಿಗೆ ಒಳಗಾಗಿ ತಮಗೆ ತಮ್ಮ ಕುಟುಂಬಕ್ಕೆ, ಸಮಾಜಕ್ಕೆ, ರಾಷ್ಟ್ರಕ್ಕೆ ಹಾಗೂ ಜಗತ್ತಿಗೆ ವಿರುದ್ಧವಾಗಿ ತಿರುಗಿದವರನ್ನು ಮರಳಿ ಕರೆತರುವ ತುರ್ತು ಚಿಕಿತ್ಸಾ ಕ್ರಮ (ರೆಸ್ಕ್ಯೂ ಆಪರೇಷನ್) ಇದಾಗಿದೆ. ‘ಸುದರ್ಶನಂ ಡಿ-ರಾಡಿಕಲೈಸೇಶನ್’ ಮಾರ್ಗದರ್ಶನದ ಮೂಲಕ ಆರ್ಷ ವಿದ್ಯಾ ಸಮಾಜವು ಈ ಕಾರ್ಯವನ್ನು ನಿರ್ವಹಿಸುತ್ತಿದೆ.
 
ಸಾಮಾನ್ಯ ಜ್ಞಾನ, ಚರ್ಚೆಗೆ ಸಿದ್ಧತೆ ಮತ್ತು ಸತ್ಯವನ್ನು ಮನಗಂಡಾಗ ಅದನ್ನು ಒಪ್ಪಿಕೊಳ್ಳುವ ಬೌದ್ಧಿಕ ಪ್ರಾಮಾಣಿಕತೆ – ಈ ಮೂರು ಷರತ್ತುಗಳನ್ನು ಒಪ್ಪುವ ಯಾರನ್ನಾದರೂ ಸರಿಯಾದ ಹಾದಿಗೆ ತರಬಲ್ಲ ವೈಚಾರಿಕ ಶಕ್ತಿಯುಳ್ಳ ಡಿ-ರಾಡಿಕಲೈಸೇಶನ್ ಕೌನ್ಸೆಲಿಂಗ್ ಕಾರ್ಯಕ್ರಮಗಳು!!!
 
ರಾಡಿಕಲೈಸೇಶನ್‌ಗೆ ಒಳಗಾದವರನ್ನು ಮಾತ್ರವಲ್ಲದೆ, ಈ ದುಷ್ಟಶಕ್ತಿಗಳ ಮಿಷನರಿ ವಕ್ತಾರರಾಗಿ ಬದಲಾದ್ದವರನ್ನೂ ಸಹ ಮರಳಿ ಕರೆತಂದು ಸನಾತನ ಧರ್ಮದ ಪ್ರಚಾರಕರನ್ನಾಗಿ ಮಾಡಿದ ಹೆಮ್ಮೆಯ ಇತಿಹಾಸ ಆರ್ಷ ವಿದ್ಯಾ ಸಮಾಜಕ್ಕಿದೆ.
 
ರಾಷ್ಟ್ರವಿರೋಧಿ ಮತಾಂತರ ಸೇರಿದಂತೆ ತಪ್ಪು ಸಿದ್ಧಾಂತಗಳಿಂದ ದಾರಿ ತಪ್ಪಿ ಹೋಗುತ್ತಿದ್ದ ಹತ್ತಾರು ಸಾವಿರ ಜನರನ್ನು ಸನ್ಮಾರ್ಗಕ್ಕೆ ನಡೆಸಿರುವ ಮಹಾತ್ಮರು ಸದ್ಗುರು ಆಚಾರ್ಯಶ್ರೀ ಮನೋಜ್ ಜಿ.
 
ಅಜ್ಞಾನ, ತಪ್ಪುಗ್ರಹಿಕೆ ಮತ್ತು ಬ್ರೈನ್ ವಾಷಿಂಗ್ ಕಾರಣದಿಂದ ರಾಷ್ಟ್ರವಿರೋಧಿ ಚಿಂತನೆಗಳೆಡೆಗೆ ಪ್ರಭಾವಿತರಾಗಿದ್ದ 8,500 ಕ್ಕೂ ಹೆಚ್ಚು ಯುವಕ-ಯುವತಿಯರನ್ನು ಆಚಾರ್ಯ ಜಿಯವರು ಈಗಾಗಲೇ ಮರಳಿ ಕರೆತಂದಿದ್ದಾರೆ!! ಇದರಲ್ಲಿ ಸುಮಾರು ಸಾವಿರದಷ್ಟು ಜನರಿಗೆ ರಾಡಿಕಲೈಸೇಶನ್ ಅನ್ನು ಎದುರಿಸುವ ಸಾಮರ್ಥ್ಯ ಲಭಿಸಿದೆ. ಮರಳಿ ಬಂದ ನೂರಕ್ಕೂ ಹೆಚ್ಚು ಜನರು ತಮ್ಮ ಅನುಭವಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಜನರು ಸನಾತನ ಧರ್ಮದ ಪ್ರಚಾರಕ ಮತ್ತು ಪ್ರಚಾರಕಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 4 ಜನರು ತಮ್ಮ ಅನುಭವಗಳನ್ನು ವಿವರಿಸಿ ಪುಸ್ತಕಗಳನ್ನು ರಚಿಸಿದ್ದಾರೆ.
2) ಜಾಗೃತಿ ಅಥವಾ ಪ್ರತಿರೋಧ (PREVENTION):
ತಪ್ಪು ಚಿಂತನೆಗಳತ್ತ ಸಾಗದಂತೆ ತಡೆಯುವುದು ಈ ಕ್ಷೇತ್ರದ ಕಾರ್ಯವಾಗಿದೆ. ದರ್ಶನ, ಇತಿಹಾಸ ಮತ್ತು ವರ್ತಮಾನ ಕಾಲವನ್ನು ಎತ್ತಿ ತೋರಿಸುವ ಮೂಲಕ ಸಮಾಜವನ್ನು ಬಾಧಿಸಿರುವ ಭ್ರಮೆಯನ್ನು ನೀಗಿಸುವ ಕಾರ್ಯಕ್ರಮ ಇದಾಗಿದೆ. ನಿಖರವಾದ ಜಾಗೃತಿಯ ಮೂಲಕ ಲಕ್ಷಾಂತರ ಜನರಿಗೆ ಸರಿಯಾದ ಮಾರ್ಗದರ್ಶನ ನೀಡಿ ರಾಡಿಕಲೈಸೇಶನ್ ತಡೆಯಲು ಸಾಧ್ಯವಾಗಿದೆ. ವಿವಿಧ ಸಂಸ್ಥೆಗಳಿಗೆ ಡಿ-ರಾಡಿಕಲೈಸೇಶನ್ ಕೌನ್ಸೆಲಿಂಗ್‌ನಲ್ಲಿ ತರಬೇತಿಯನ್ನು ಸಹ ನೀಡಲಾಗುತ್ತಿದೆ.
 
3) ಮೂಲಭೂತ ಸಮಸ್ಯೆ ಪರಿಹಾರ (ಶಾಶ್ವತ ಯೋಜನೆ):
ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು (ಕಾರಣವನ್ನು ಪತ್ತೆಹಚ್ಚಿ ಮೂಲಸಹಿತ ಸಮಸ್ಯೆ ಪರಿಹರಿಸುವುದು) ಮಾತ್ರವಲ್ಲದೆ ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಎಂಬ ಗುರಿಯನ್ನು ಸಾಧಿಸಲು AVS ನಾಲ್ಕು ವಿಧದ ವಿಶಿಷ್ಟ ಚಟುವಟಿಕೆಗಳನ್ನು ರೂಪಿಸಿದೆ!
  1. ಸಮಗ್ರ ಮತ್ತು ವೈಜ್ಞಾನಿಕ ಅನುಷ್ಠಾನ – ಸಂಶೋಧನೆ – ತರಬೇತಿ ಯೋಜನೆ:

ಕೋರ್ಸ್(ಶಿವಶಕ್ತಿ ಯೋಗವಿದ್ಯೆ, ಆಧ್ಯಾತ್ಮಿಕ ಶಾಸ್ತ್ರಂ, ಭಾರತೀಯ ಸಂಸ್ಕೃತಿ, ವಿದ್ಯಾರ್ಥಿ ನೈಪುಣ್ಯ ವರ್ಗ್ (SEP: ಸ್ಟೂಡೆಂಟ್ಸ್ ಎಕ್ಸಲೆನ್ಸ್ ಪ್ರೋಗ್ರಾಂ), ಸುದರ್ಶನಂ, ಮೃತ್ಯುಂಜಯಂ, ಸಂಘಟನಾ ಶಾಸ್ತ್ರ, ವ್ಯಾಯಾಮಕೀ ವಿಜ್ಞಾನ) ತರಗತಿಗಳು, ಶಿಬಿರಗಳು ಇತ್ಯಾದಿ.

  1. ಧರ್ಮ ಪ್ರಚಾರಕ ಪದ್ಧತಿ (ಸಂಘಟನಾ ಯೋಜನೆ):

ಸನಾತನ ಧರ್ಮ ಪ್ರಚಾರಕರನ್ನು ಪತ್ತೆಹಚ್ಚಿ, ತರಬೇತಿ ನೀಡಿ ವಿವಿಧ ಸ್ಥಳಗಳಲ್ಲಿ, ವಿಭಿನ್ನ ಕ್ಷೇತ್ರಗಳಲ್ಲಿ ನಿಯೋಜಿಸುವುದು.

  1. ಸಂಸ್ಥೆಗಳ ಯೋಜನೆ:

ಸಾಧನಾ ಶಕ್ತಿ ಕೇಂದ್ರಗಳು, ವಿಜ್ಞಾನಭಾರತಿ ಅಂತರಾಷ್ಟ್ರೀಯ ಅಧ್ಯಯನ ಸಂಶೋಧನಾ ಪ್ರತಿಷ್ಠಾನ, ವಿಜ್ಞಾನಭಾರತಿ ವಿದ್ಯಾಕೇಂದ್ರಗಳು, ವಿಜ್ಞಾನಭಾರತಿ ಲರ್ನಿಂಗ್ ಸೆಂಟರ್‌ಗಳು.

  1. ವ್ಯಾಪಕ ಮತ್ತು ಸಮಗ್ರವಾದ ಯಥಾರ್ಥ ಸೇವೆ-ಸಬಲೀಕರಣ-ಸಂರಕ್ಷಣಾ ಚಟುವಟಿಕೆಗಳು.

ಸನಾತನ ಧರ್ಮವನ್ನು ಜಗತ್ತಿನಾದ್ಯಂತ ತಲುಪಿಸುವ ಮಹತ್ತರ ಗುರಿಯ ಭಾಗವಾಗಿ ಆರ್ಷ ವಿದ್ಯಾ ಸಮಾಜವು ಕೇರಳದ ತಿರುವನಂತಪುರಂ, ಎರ್ನಾಕುಲಂ, ತೃಶೂರ್ ಜಿಲ್ಲೆಗಳಲ್ಲಿ ಹಾಗೂ ಚೆನ್ನೈ, ಬೆಂಗಳೂರು, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕೇಂದ್ರಗಳನ್ನು ಪ್ರಾರಂಭಿಸಿದೆ. 2026 ರಲ್ಲಿ ಭಾರತದ ಇತರ ರಾಜ್ಯಗಳಿಗೂ ಮತ್ತು ವಿದೇಶಗಳಿಗೂ ತನ್ನ ಚಟುವಟಿಕೆಗಳನ್ನು ವಿಸ್ತರಿಸುವುದು ಇದರ ಗುರಿಯಾಗಿದೆ.

ಲಭಿಸಿರುವ ಪ್ರಶಸ್ತಿಗಳು

ಹಿಂದೂ ಪಾರ್ಲಿಮೆಂಟ್‌ನ ಆಧ್ಯಾತ್ಮಿಕ ಸಭೆ ನೀಡಿದ 2019 ರ ‘ಕರ್ಮರತ್ನ’ ಪ್ರಶಸ್ತಿ, ಎಟರ್ನಲ್ ಹಿಂದೂ ಫೌಂಡೇಶನ್‌ನ 2023 ರ ‘ಮಹರ್ಷಿ ಅರವಿಂದ ಸಮ್ಮಾನ್’ ರಾಷ್ಟ್ರೀಯ ಪ್ರಶಸ್ತಿ, ಚಿನ್ಮಯ ಮಿಷನ್ ಆಶ್ರಯದಲ್ಲಿ ಆಯೋಜಿಸಲಾದ ‘ಸಂಸ್ಕಾರ’ ಆಧ್ಯಾತ್ಮಿಕ ಸಮ್ಮೇಳನದಲ್ಲಿ 2024 ರ ‘ಸಮೂಹಶ್ರೀ ಪ್ರಶಸ್ತಿ’, ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ 2024 ರ ‘ಮಾಧವ್ ಜಿ ಪ್ರಶಸ್ತಿ’, 2024 ರ ‘ಸ್ವಾಮಿ ಮೃಡಾನಂದ ಸ್ಮಾರಕ ಆಧ್ಯಾತ್ಮಿಕ ಪ್ರಶಸ್ತಿ’, 10 ನೇ ‘ಶ್ರೀ ಚಟ್ಟಂಪಿ ಸ್ವಾಮಿ – ಶ್ರೀ ನಾರಾಯಣ ಗುರು ಪ್ರಥಮ ಸಂಗಮ ಸ್ಮೃತಿ ಪ್ರಶಸ್ತಿ’, ಮಹಾರಾಷ್ಟ್ರ ಮೂಲದ ಅಕ್ಷಯ ಹಿಂದೂ ಪ್ರಶಸ್ತಿ ಸಂಘಟನಾ ಸಮಿತಿಯ 2024 ರ ‘ಅಕ್ಷಯ ಹಿಂದೂ ಪ್ರಶಸ್ತಿ’, 2024 ರ ‘ಗುರುಶ್ರೇಷ್ಠ ಪ್ರಶಸ್ತಿ’, 2025 ರ ‘ಶ್ರೀ ವೆಳ್ಳಕ್ಕಾಟ್ಟು ಗೋಪಾಲಕುರುಪ್ ಕೀರ್ತಿ ಪ್ರಶಸ್ತಿ’, ಡಾ. ಮಂಗಳಂ ಸ್ವಾಮಿನಾಥನ್ ಫೌಂಡೇಶನ್ ನೀಡುವ ‘ಶ್ರೀ ದತ್ತೋಪಂತ್ ಠೇಂಗಡಿ ಸೇವಾ ಸಮ್ಮಾನ್ 2025’ ರಾಷ್ಟ್ರೀಯ ಪ್ರಶಸ್ತಿ, ‘HRDS INDIA’ ನೀಡಿದ ‘ವೀರ ಸಾವರ್ಕರ್ ಇಂಟರ್ನ್ಯಾಷನಲ್ ಇಂಪ್ಯಾಕ್ಟ್ ಅವಾರ್ಡ್ 2025’ ಅಂತರರಾಷ್ಟ್ರೀಯ ಪ್ರಶಸ್ತಿ, ಸುಕೃತಂ ಭಾಗವತ ಯಜ್ಞ ಸಮಿತಿ ನೀಡಿದ ‘ಸುಕೃತಂ ಭಾಗವತ ಪ್ರಶಸ್ತಿ – 2025’, ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ ಅಧೀನದಲ್ಲಿರುವ ‘ತಳಿಯಾದಿಚ್ಚಪುರತ್ತಪ್ಪನ್ ಶಾಖಾ ಸಮಿತಿ’ ನೀಡಿದ 8 ನೇ “ತಳಿಯಾದಿಚ್ಚಪುರತ್ತಪ್ಪನ್ ಪ್ರಶಸ್ತಿ- 2026” ಇವುಗಳು ಅವರಿಗೆ ಲಭಿಸಿವೆ.

ಆಚಾರ್ಯರ ಶ್ಲಾಘನೀಯ ಧರ್ಮ ಸೇವಾ ಚಟುವಟಿಕೆಗಳನ್ನು 2023 ನವೆಂಬರ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ‘ವರ್ಲ್ಡ್ ಹಿಂದೂ ಕಾಂಗ್ರೆಸ್’ ಮತ್ತು ಉತ್ರಾಡಂ ತಿರುನಾಳ್ ಇನ್‌ಸ್ಟಿಟ್ಯೂಟ್ ಆಫ್ ಕಲ್ಚರ್ 2023 ರಲ್ಲಿ ಆಯೋಜಿಸಿದ್ದ 10 ನೇ ಉತ್ರಾಡಂ ತಿರುನಾಳ್ ಸ್ಮರಣಾರ್ಥ ಸಮ್ಮೇಳನದಲ್ಲಿ ವಿಶೇಷವಾಗಿ ಗೌರವಿಸಲಾಗಿದೆ.

ಆಚಾರ್ಯ ಜಿಯವರು ‘ಭಾರತಪ್ರಭಾವಂ’ ಎಂಬ ಗ್ರಂಥವನ್ನು ರಚಿಸಿದ್ದಾರೆ.

ತಮ್ಮನ್ನು ಸುತ್ತುವರೆದಿರುವ ಅಪಾಯದ ಅರಿವಿಲ್ಲದೆ ನಿದ್ರಿಸುತ್ತಿರುವ ಹಿಂದೂ ಸಮಾಜದ ಆತ್ಮಹತ್ಯಾತ್ಮಕ ಉದಾಸೀನತೆಯಿಂದ ಧೃತಿಗೆಡದೆ, ಮಾನ-ಅಪಮಾನಗಳನ್ನಾಗಲಿ, ನಿಂದೆ-ಸ್ತುತಿಗಳನ್ನಾಗಲಿ ಲೆಕ್ಕಿಸದೆ, ಪ್ರಶಂಸೆ, ಸಹಾನುಭೂತಿ ಅಥವಾ ಅಂಗೀಕಾರವನ್ನು ಬಯಸದೆ, ತಮ್ಮ ಪ್ರಾಣಕ್ಕೆ ಎದುರಾಗುವ ತೀವ್ರ ಸವಾಲುಗಳನ್ನು ಪರಿಗಣಿಸದೆ, ಸನಾತನ ಧರ್ಮ ವಿರೋಧಿಗಳ ವಿರುದ್ಧ ಧೀರರಾಗಿ ಹೋರಾಡುತ್ತಿರುವ ಕರ್ಮಯೋಗಿಗೆ ಸಾವಿರಸಾವಿರ ಜನ್ಮದಿನದ ಶುಭಾಶಯಗಳು!

ನಿಮ್ಮ ದೌತ್ಯವನ್ನು ಪೂರೈಸಲು ನಮ್ಮ ಪ್ರಾಣದ ಕೊನೆಯ ಉಸಿರಿರುವವರೆಗೂ ಸಮರ್ಪಿತರಾಗಿ ಈ ಶಿಷ್ಯವೃಂದ ನಿಮ್ಮೊಂದಿಗಿರುತ್ತದೆ ಎಂದು ಈ ಶುಭ ದಿನದಂದು ಪ್ರತಿಜ್ಞೆ ಮಾಡುತ್ತೇವೆ. ಇದನ್ನು ನಮ್ಮ ಗುರುದಕ್ಷಿಣೆಯಾಗಿ ಸ್ವೀಕರಿಸಬೇಕಾಗಿ ವಿನಂತಿಸುತ್ತೇವೆ!

“ಮನ್ನಾಥಃ ಶ್ರೀಕೃಪಾನಾಥೋ ಮದ್ಗುರುಃ ಶ್ರೀಜಗದ್ಗುರುಃ

ಮದಾತ್ಮಾ ಸರ್ವಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ”

ನಮ್ಮ ಸದ್ಗುರು ಹಾಗೂ ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕರು ಮತ್ತು ಮಾರ್ಗದರ್ಶಕರಾದ ಆಚಾರ್ಯಶ್ರೀ ಮನೋಜ್ ಜಿರವರ ಪಾದಕಮಲಗಳಲ್ಲಿ ಸರ್ವಸ್ವವನ್ನೂ ಸಮರ್ಪಿಸುತ್ತೇವೆ…!!!

ಓಂ ಶ್ರೀ ಗುರುಭ್ಯೋ ನಮಃ

ಪ್ರೇಮನಿಧಿಯಾದ ಗುರುದೇವರಿಗೆ ಹೃದಯತುಂಬಿದ ಜನ್ಮದಿನದ ಶುಭಾಶಯಗಳು..!

ಆರ್ಷವಿದ್ಯಾಸಮಾಜಂ