ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕರಾದ ಆಚಾರ್ಯ ಶ್ರೀ ಕೆ.ಆರ್.ಮನೋಜ್ ಜಿರವರ ಶಿವರಾತ್ರಿದಿನ ಸಂದೇಶ – 2
AVS
February 15, 2026
•
No Comments
ಆರ್ಷ ವಿದ್ಯಾ ಸಮಾಜದ ಸಂಸ್ಥಾಪಕರಾದ ಆಚಾರ್ಯ ಶ್ರೀ ಕೆ.ಆರ್.ಮನೋಜ್ ಜಿರವರ ಶಿವರಾತ್ರಿದಿನ ಸಂದೇಶ – 2
ಶ್ರೀ ಪರಮೇಶ್ವರನ ತತ್ವನಾಮ ಪರಮಶಿವ
ಶ್ರೀ ಪರಮೇಶ್ವರನ ಅನಂತ ಪರ್ಯಾಯಗಳನ್ನೆಲ್ಲಾ ತತ್ವನಾಮ, ಅನನ್ಯನಾಮ, ಅವ್ಯಯನಾಮ, ವಿಭೂತಿನಾಮ ಹೀಗೆ ನಾಲ್ಕು ತರಹದ ನಾಮಗಳಲ್ಲಿ ಸಂಕ್ಷಿಪ್ತಗೊಳಿಸಬಹುದು.
ಶ್ರೀ ಪರಮೇಶ್ವರನ ತತ್ವನಾಮವೇ ಪರಮಶಿವ, ಶಿವ, ಶಿವಂ ಎಂಬ ವಿಶಿಷ್ಟ ಪದ. ಪ್ರಪಂಚ, ಕಾಲ, ಜೀವಿಗಳು, ದೇವತೆಗಳು, ಭಗವಂತರು ಉಂಟಾಗುವುದಕ್ಕೆ ಮುಂಚಿನ ನಿರ್ಗುಣಬ್ರಹ್ಮವನ್ನೂ ಮತ್ತು ವಿಶ್ವೋತ್ಪತ್ತಿಗೆ ಕಾರಣಭೂತನಾದ ಸಗುಣಬ್ರಹ್ಮವನ್ನೂ ಪ್ರತಿನಿಧಿಸುವ ತತ್ವನಾಮವೇ ಪರಮಶಿವಶಬ್ದ.
ಯಾರು ಪರಮಶಿವ?
ಏನು ಶಿವಶಬ್ದದ ಅರ್ಥ?
ಹಲವು ನಿರ್ವಚನಗಳಲ್ಲಿ ಕೆಲವು ಮಾತ್ರ ನೀಡಬಹುದು.
1. “ಶುದ್ಧತ್ವಾತ್ತು ಶಿವಃ ಪ್ರೋಕ್ತಃ” – ಪರಿಶುದ್ಧತೆಯ ನಿಮಿತ್ತ ಶಿವ ಎಂದು ವಿಶೇಷವಾಗಿ ಹೇಳಲಾಗುತ್ತದೆ.
2. “ಶೋಭನತ್ವಾತ್ ಶಿವಃ” – ಪ್ರಕಾಶಸ್ವರೂಪನಾದ್ದರಿಂದ ಶಿವ,
3. “ಶಾಮ್ಯತೀತಿ ಶಿವಃ” ಶಾಂತಿಸ್ವರೂಪನಾದ್ದರಿಂದ ಶಿವ,
4. “ವಷ್ಟೀತಿ ಶಿವಃ” ಸರ್ವವ್ಯಾಪಿಯಾದ್ದರಿಂದ ಶಿವ,
5. ಶೇತೇ ഽ”ಸ್ಮಿನ್ ಸರ್ವಮಿತಿ ಶಿವಃ” ಎಲ್ಲವನ್ನೂ ಒಳಗೊಂಡಿರುವುದರಿಂದ ಶಿವ
6. ಮಂಗಳಕಾರಿಯಾದ್ದರಿಂದ ಶಿವ ಶಿವಶಬ್ದ ಮಂಗಳವಾಚಕವಾಗಿದೆ.
ಹೀಗೆ ಎಷ್ಟೋ ನಿರ್ವಚನಗಳು?!
ಋಷಿಗಳು ನೀಡುವ ಪರಮಶಿವ ನಿರ್ವಚನ
ನಮ್ಮ ಶಿವ ಎಂದು ಶ್ರೀನಾರಾಯಣ ಗುರುದೇವರು ವಿಶೇಷವಾಗಿ ಹೇಳಿದ – ಆರ್ಷಗುರುಪರಂಪರೆಗಳ ಪರಮಶಿವ, ಸನಾತನಧರ್ಮದ ಪರಮಶಿವ ಯಾರು?
ವೇದಾಂತ, ಯೋಗ, ತಂತ್ರ, ಸಿದ್ಧಾಂತ ಮುಂತಾದ ಎಲ್ಲಾ ಪರಾವಿದ್ಯೆಗಳಲ್ಲಿ (ಅಧ್ಯಾತ್ಮಿಕ ವಿದ್ಯೆಗಳು) ಪರಮಶಿವನೇ ಪರಮತತ್ವ. ಯೋಗದಲ್ಲಿ ಸಹಸ್ರಾರ ಪದ್ಮದಲ್ಲಿ ವಿರಾಜಿಸುವ ಪರಮಶಿವನ ಸಾಕ್ಷಾತ್ಕಾರ ಉಂಟಾದಾಗ ಮೋಕ್ಷ ಲಭಿಸುತ್ತದೆ. (“ಪಡಿಯಾರುಂ ಕಡಂದವಿಡೆ ಚೆಲ್ಲುಂಬೋಳ್ (ಷಡ್ ಚಕ್ರಗಳು ಭೇದಿಸಿ) ಶಿವನೆ ಕಾಣಾಕುಂ ಶಿವ ಶಂಭೋ!”) ತಂತ್ರವಿದ್ಯೆಯ 36 ತತ್ವಗಳಲ್ಲಿ ಒಂದನೇ ತತ್ವ ಶಿವತತ್ವವಾಗಿದೆ. ಸಿದ್ಧಾಂತ ಮಾರ್ಗದಲ್ಲೂ ಪರಮತತ್ವ ಶಿವನೇ. ವೇದಾಂತದಲ್ಲೂ ಶಿವೋಹ ಪ್ರಾಪ್ತಿಯೇ ಮೋಕ್ಷ.
ಪರಮೇಶ್ವರತತ್ವವಾಗಿಯೇ ಇದರಲ್ಲಿ ಪರಮಶಿವನನ್ನು ವಿಶೇಷವಾಗಿ ಹೇಳಲಾಗಿದೆ ಎಂಬುದು ಗಮನಾರ್ಹ. ಆದರೆ ನಂತರ ಕೆಲವು ಮಾಮೂಲ್ವಾದಿಗಳು ಮತ್ತು ಅವರು ಬರೆದ ಅಬದ್ಧ ಕೃತಿಗಳು ಪರಮೇಶ್ವರನ ಈ ತತ್ವನಾಮವನ್ನು ತ್ರಿಮೂರ್ತಿಗಳಲ್ಲಿ ಒಬ್ಬನೆಂಬ ರೀತಿಯಲ್ಲಿ ಸೀಮಿತಗೊಳಿಸಿ ಪ್ರಚಾರ ಮಾಡಿದರು. ಒಂದೇ ಈಶ್ವರನ ಪರ್ಯಾಯಗಳಾದ ಈಶ್ವರನಾಮಗಳನ್ನು (ಶಿವ, ದೇವಿ, ವಿಷ್ಣು, ಬ್ರಹ್ಮ etc) ಮನುಷ್ಯಶರೀರವುಳ್ಳವರನ್ನಾಗಿ ಮಾಡಿದ್ದಲ್ಲದೆ, ಅವರ ವಿಕಲ ಭಾವನೆಗಳಲ್ಲಿ ಅರಳಿದ ಬಾಲಿಶ ಕಥೆಗಳನ್ನೂ ಇವುಗಳೊಂದಿಗೆ ಸೇರಿಸಿ ಪ್ರಚಾರ ಮಾಡಿದರು. ಮನುಷ್ಯನಿಗಿಂತ ಕೆಲವೊಮ್ಮೆ ಪ್ರಾಣಿಗಿಂತಲೂ ಅಧಮವಾಗಿ ಅವರನ್ನು ಚಿತ್ರಿಸಿದರು. ಪುರಾಣಗಳು ಇದರಲ್ಲಿ ಒಂದು ದೊಡ್ಡ ಪಾತ್ರ ವಹಿಸಿವೆ ಎಂಬುದು ವಾಸ್ತವ. ಅದನ್ನೇ ನಿಮ್ಮ (ಸಂಕಲ್ಪದಲ್ಲಿರುವ) ಶಿವನನ್ನಲ್ಲ ನಮ್ಮ (ಸಿದ್ಧಪರಂಪರೆಯ) ಶಿವನನ್ನು ನಾನು ಪ್ರತಿಷ್ಠಾಪಿಸಿದ್ದೇನೆ ಎಂದು ಶ್ರೀನಾರಾಯಣ ಗುರು ಅರ್ಥಗರ್ಭಿತವಾದ ಚಿಕ್ಕ ವಾಕ್ಯದ ಮೂಲಕ ಉಲ್ಲೇಖಿಸಿದರು.
ಸಿದ್ಧಮಹರ್ಷಿಗಳು ನೀಡುವ ನಿರ್ವಚನ ಹೀಗಿದೆ
को वा परमशिव:?
यस्य आत्मनो अन्य: ईश्वरो नास्ति, निराश्रय: निरामयश्च भूत्वा समस्तलोकाय सदा शिवं (मङ्गलं, परमश्रेय:) दत्वा प्रशोभितो परमज्योति:, सच्चिदानन्दस्वरूप: सनातन: परमेश्वर: एक एव परं ब्रह्म तत्वम्। परमशिव:।
ಯಸ್ಯ ಆತ್ಮನೋ ಅನ್ಯ : ಈಶ್ವರೋ ನಾಸ್ತಿ, ನಿರಾಶ್ರಯ: ನಿರಾಮಯಶ್ಚ ಭೂತ್ವಾ
ಸಮಸ್ತ ಲೋಕಾಯ ಸದಾಶಿವಂ (ಮಂಗಳಂ, ಪರಮಶ್ರೇಯಂ) ದತ್ವಾ ಪ್ರಶೋಭಿತೋ
ಪರಮ ಜ್ಯೋತಿ: ಸಚ್ಚಿದಾನಂದ ಸ್ವರೂಪ: ಸನಾತನ: ಪರಮೇಶ್ವರ: ಏಕ ಏವ ಪರಂ ಬ್ರಹ್ಮ ತತ್ವಂ ಪರಮಶಿವ:
ನಿರಾಶ್ರಯನೂ (ತನಗೆ ತಾನಲ್ಲದೆ ಮತ್ತಾರ ಆಶ್ರಯವೂ ಇಲ್ಲದವನು) ನಿರೀಶ್ವರನೂ (ತನಗೆ ತಾನಲ್ಲದೆ ಮತ್ತೊಬ್ಬ ಈಶ್ವರನೋ ಪತಿಯೋ ನಾಥನೋ ಇಲ್ಲದವನು – ನಿರೀಶನು, ಅನೀಶ್ವರನು, ಅನೀಶನು) ನಿರಾಮಯನೂ ವಿಶ್ವೋತ್ಪತ್ತಿಗೆ ಮುಂಚೆಯೂ ಮತ್ತು ನಂತರವೂ ಸದಾ ಶಿವಂ ಸುರಿಸಿ ಪ್ರಕಾಶಿಸುವ ಸದಾಶಿವನೂ (ಶಿವಂ – ಲೋಕವೇನೂ ಇಲ್ಲದಿರುವಾಗಲೂ ಪರಂಜ್ಯೋತಿ ಸಚ್ಚಿದಾನಂದಸ್ವರೂಪಿಯಾಗಿ ಎಲ್ಲದಕ್ಕೂ ಆದಿಕಾರಣವಾಗಿ ವರ್ತಿಸುವ ಪರಬ್ರಹ್ಮಚೈತನ್ಯವೇ ಶಿವಂ. (ಸದಾಶಿವನ್, ಶಿವ ಕೇವಲಂ, ರುದ್ರತ್ವಂ ಆಸೀತ್ – ನಿರ್ಗುಣಬ್ರಹ್ಮ) ಲೋಕಗಳು, ಕಾಲ, ಜೀವಿಗಳು ಉಂಟಾದಾಗ ಸಮಸ್ತ ಲೋಕಗಳಿಗೂ ಜೀವಿಗಳಿಗೂ ಸದಾ ಮಂಗಳ, ಕಲ್ಯಾಣ, ಪರಒಳಿತು, ಶುಭ, ಹಿತ ಸುರಿಸಿ (ನೀಡಿ) ಪ್ರಕಾಶಿಸುವ ಸಗುಣಬ್ರಹ್ಮ – ಮೂರ್ತಿಯೇ, ಸಾಂಬಶಿವನ್). ನಿತ್ಯಶುದ್ಧಬುದ್ಧಮುಕ್ತನೂ (ನಿತ್ಯ ಶುದ್ಧ, ನಿತ್ಯ ಬುದ್ಧ, ನಿತ್ಯ ಮುಕ್ತನಾದ (ಮುಂಡಕ ಭಾಷ್ಯಂ ಪುಟ 84 ಶಂಕರಾಚಾರ್ಯರು – ನಿತ್ಯ ಶುದ್ಧ ಬುದ್ಧ ಮುಕ್ತನ್), ಸ ಚ ಭಗವನ್ ನಿತ್ಯ ಶುದ್ಧ ಬುದ್ಧ ಮುಕ್ತ ಸ್ವಭಾವ ಅಪಿ ಸನ್ ಗೀತಾಭಾಷ್ಯಂ ಪುಟ 14 ಶಂಕರಾಚಾರ್ಯರು)
– ಪರಂಜ್ಯೋತಿ ಸಚ್ಚಿದಾನಂದಸ್ವರೂಪಿಯೂ ಸನಾತನನೂ ಪರಮೇಶ್ವರನೂ ಆದ ಏಕ ಪರಬ್ರಹ್ಮ ತತ್ವವೇ ಪರಮಶಿವ.
ಶಿವಲಿಂಗೋಪಾಸನ ಎಂಬ ಪ್ರತೀಕ
ಅಕಾಯನೂ, ನಿರಾಕಾರನೂ, ನಿರವಯವನೂ, ನಿರಾಮಯನೂ, ಅನೀಶ್ವರನೂ, ನಿರಾಶ್ರಯನೂ ಆದವನೇ ಪರಮೇಶ್ವರತತ್ವ. ಅವನನ್ನು ಆರಾಧಿಸಲು ಅವಯವಗಳಿಲ್ಲದ ಶಿವಲಿಂಗ ಎಂಬ ಪ್ರತೀಕದ ಮೂಲಕ ಪ್ರಯತ್ನಿಸಲಾಗುತ್ತದೆ.
ಎಲ್ಲಾ ಈಶ್ವರಪ್ರತೀಕಗಳೂ ದೇವಿ-ದೇವತೆಗಳೂ ಪರಮೇಶ್ವರನನ್ನೇ ಉಪಾಸಿಸುತ್ತವೆ ಎಂದು ಋಷಿಗಳು ಸಾಕ್ಷ್ಯ ನೀಡುತ್ತಾರೆ. ಶ್ರೀ ಪದ್ಮನಾಭನ ಅನಂತಶಯನದಲ್ಲಿನ ಮೊದಲ ಪ್ರತಿಷ್ಠೆಗಳಲ್ಲಿ ಶಿವಲಿಂಗೋಪಾಸನೆ ಮಾಡುವ ರೀತಿಯಲ್ಲಿ ಚಿತ್ರಿಸಲಾಗಿದೆ. ಅವತಾರ ಪುರುಷರಾದ ಬದರಿನಾಥ (ಬದರಿ ನಾರಾಯಣ) ಮತ್ತು ಶ್ರೀರಾಮ, ಶ್ರೀಕೃಷ್ಣ ಪರಮೇಶ್ವರ ಭಕ್ತರಾಗಿದ್ದರು ಎಂದು ವಾಲ್ಮೀಕಿ ರಾಮಾಯಣ ಮತ್ತು ವ್ಯಾಸ ಮಹಾಭಾರತ ಸ್ಪಷ್ಟಪಡಿಸುತ್ತದೆ! ರಾಮೇಶ್ವರ, ರಾಮನಾಥ, ಗೋಪೇಶ್ವರ ಮತ್ತು ಕೃಷ್ಣೇಶ್ವರ ಎಂದು ಪರಮಶಿವನನ್ನು ಕರೆಯುವುದು ಅದಕ್ಕಾಗಿಯೇ. ಶ್ರೀ ಶಂಕರಾಚಾರ್ಯರು ಮತ್ತು ಶ್ರೀ ನಾರಾಯಣ ಗುರುಗಳು ಲಿಂಗಾಷ್ಟಕವನ್ನು ಬರೆದಿದ್ದಾರೆ.
ಶಿವರಾತ್ರಿಯ ಹಿಂದಿನ ಕಥೆ:
ವಿಶ್ವಾತೀತನಾದ ಪರಮೇಶ್ವರನು ಲೋಕಗಳಲ್ಲಿ ಮಾಯೆಯನ್ನು ನಿವಾರಿಸಿ ಜ್ಞಾನವನ್ನು ನೀಡಲು ಜೀವಿಗಳ ಮುಂದೆ ಪ್ರತ್ಯಕ್ಷನಾದ ಸಂದರ್ಭಗಳನ್ನು ಸ್ಮರಿಸುವ ದಿನವೇ ಶಿವರಾತ್ರಿ ಎಂದು ಹೇಳಿದೆವಲ್ಲವೇ? ಭುವನತ್ರಯಗಳಲ್ಲಿ (ಕಾರಣ – ಸೂಕ್ಷ್ಮ – ಸ್ಥೂಲ ಲೋಕಗಳು) ಅತ್ಯಂತ ಉನ್ನತ ಲೋಕವಾದ ಕಾರಣಲೋಕದಲ್ಲಿನ ಭಗವಂತರಿಗೆ ಪರಮೇಶ್ವರನಾದ ಪರಮಶಿವನು ಕಾರಣಜ್ಯೋತಿರ್ಲಿಂಗ ಸ್ವರೂಪನಾಗಿ (ದಿವ್ಯ ತೇಜಸ್ಸು) ಮೊದಲ ಬಾರಿಗೆ ಆವಿರ್ಭವಿಸಿದ್ದು ಇದರಲ್ಲಿ ಮೊದಲನೆಯದು. ಲೋಕದ ಮಾಯೆಯನ್ನು ನಿವಾರಿಸಿ ಜ್ಞಾನ ಪ್ರಕಾಶವನ್ನು ನೀಡಲಾಗಿತ್ತು ಈ ಪ್ರತ್ಯಕ್ಷ ಜ್ಯೋತಿರ್ದರ್ಶನ.
ಸ್ಥೂಲ – ಸೂಕ್ಷ್ಮ – ಕಾರಣ ಲೋಕಗಳಿಗತೀತನಾದ ಪರಮೇಶ್ವರನು ಕಾರಣಲೋಕದಲ್ಲಿನ ಬ್ರಹ್ಮರ್ಷಿಗಳಾದ ನಾರಾಯಣ ಋಷಿ ಮತ್ತು ಬ್ರಹ್ಮ ಋಷಿಗಳ ಮುಂದೆ ಪ್ರತ್ಯಕ್ಷನಾದ ಬಗ್ಗೆ ಅನೇಕ ಋಷಿಗಳು ಸೂಚಿಸಿದ್ದಾರೆ. ಪ್ರಕೃತಿಯ ಮಾಯೆಯನ್ನು ನಿವಾರಿಸಿ ಅವರಿಗೆ ಪೂರ್ಣ ಜ್ಞಾನವನ್ನು ನೀಡಿ ಮೋಕ್ಷವನ್ನು ನೀಡಲು, ಮೊದಲು ಅಗ್ನಿಶೈಲವಾಗಿ ಕಾರಣಜ್ಯೋತಿರ್ಲಿಂಗವಾಗಿ ಶ್ರೀ ಪರಮೇಶ್ವರನು ಆವಿರ್ಭವಿಸಿದನು ಎಂದು ಋಷಿಗಳು ಸೂಚಿಸುತ್ತಾರೆ. (ಶ್ರೀ ಶಂಕರಾಚಾರ್ಯರು ಮತ್ತು ಶ್ರೀ ನಾರಾಯಣ ಗುರುಗಳು ಸೇರಿದಂತೆ ಋಷಿಮುನಿಗಳು ಅನೇಕ ದಿವ್ಯ ಸ್ತೋತ್ರಗಳ ಮೂಲಕ ಈ ವಿಷಯವನ್ನು ಉಲ್ಲೇಖಿಸಿದ್ದಾರೆ!) ಈ ಶುಭ ಮುಹೂರ್ತದ ಸ್ಮರಣಾರ್ಥವಾಗಿ ಭಕ್ತರು ಶಿವರಾತ್ರಿಯನ್ನು ಆಚರಿಸುತ್ತಾರೆ ಎಂಬುದು ಪ್ರಬಲವಾದ ಅಭಿಪ್ರಾಯ.
ದಿವ್ಯ ಶರೀರಗಳನ್ನು ಸ್ವೀಕರಿಸುತ್ತಾನೆ
ಜ್ಯೋತಿರ್ಲಿಂಗ ಸ್ವರೂಪದಲ್ಲಿ ಆವಿರ್ಭವಿಸಿದ ನಂತರ ಕಾರಣ ಶರೀರವನ್ನು ಸ್ವೀಕರಿಸಿಯೂ ಅವನು ಪ್ರತ್ಯಕ್ಷನಾದನು. ಕಾರಣಲೋಕದಲ್ಲಿ ಮಹಾರುದ್ರನಾಗಿಯೂ, ಸೂಕ್ಷ್ಮಲೋಕದಲ್ಲಿ ಶಿವಶಂಕರ ಋಷಿಯಾಗಿಯೂ, ಸ್ಥೂಲಲೋಕದ ಭೂಮಿಯಲ್ಲಿ ಆದಿಯೋಗಿಯಾದ ಆದಿನಾಥನಾಗಿಯೂ (ದಕ್ಷಿಣಾಮೂರ್ತಿ) ದಿವ್ಯ ದೇಹಗಳನ್ನು ಸ್ವೀಕರಿಸಿಕೊಂಡು ಅವನು ಸನಾತನ ಧರ್ಮವನ್ನು ನೀಡಿದನು ಎಂದು ಸನಾತನ ಧರ್ಮದ ಪ್ರಾಮಾಣಿಕವಾದ ವಿವಿಧ ಗುರುಪರಂಪರೆಗಳು ಹೇಳುತ್ತವೆ. ತಂದೆ-ತಾಯಿಗಳಿಲ್ಲದೆ, ಶರೀರದ ಮಿತಿಗಳಾಗಲಿ, ಲೋಕ ನಿಯಮಗಳಾಗಲಿ ಬಾಧಿಸದವನಾಗಿ ಶ್ರೀ ಪರಮೇಶ್ವರನು ಸ್ವ ಶಕ್ತಿಯಿಂದ ಶರೀರಗಳನ್ನು ಸ್ವೀಕರಿಸುವುದು (ಉದಾಹರಣೆಗೆ ನರಸಿಂಹ, ಗಣಪತಿ ಇತ್ಯಾದಿ) ದಿವ್ಯ ದೇಹಗಳು. ಈ ಮಾಯಾ ಶರೀರಗಳನ್ನು ದಿವ್ಯ ದೇಹ, ಪ್ರತ್ಯಕ್ಷ ರೂಪ, ಭವ ಶರೀರ, ವಿಭೂತಿ ಕಾಯ, ಲಿಂಗ ಶರೀರ, ವಿಳಯಾಡಲ್ (ವಿಳಯಾಟ್ಟರೂಪಂ) ಎಂದೆಲ್ಲಾ ವಿಶೇಷವಾಗಿ ಹೇಳಬಹುದು.
ಭೂಮಿಯಲ್ಲಿ ಆರ್ಷ ಗುರುಪರಂಪರೆಗಳ ಮೂಲಕ ಮಾನವ ರಾಶಿಗೆ ಲೋಕ ಕಲ್ಯಾಣಕ್ಕಾಗಿ ಸನಾತನ ಧರ್ಮವನ್ನು (ವೇದ) ನೀಡಲು ಶ್ರೀ ಪರಮೇಶ್ವರನು ಆದಿನಾಥ (ದಕ್ಷಿಣಾಮೂರ್ತಿ ಇತ್ಯಾದಿ ಹೆಸರುಗಳಲ್ಲಿ) ಮಾನವ ಪ್ರತ್ಯಕ್ಷ ರೂಪವನ್ನು ತಾಳಿದ ದಿನವೇ ಶಿವರಾತ್ರಿ ಎಂದು ಅವರು ಘೋಷಿಸುತ್ತಾರೆ. ಇದೇ ಧ್ಯಾನ ಶ್ಲೋಕಗಳ ಪ್ರಕಾರ ಚಿತ್ರಿಸುವ ಶಿವ ರೂಪ.
(ಪರಮೇಶ್ವರ ಪ್ರತೀಕವು ನಿರವಯವಿಯಾದ ಶಿವಲಿಂಗವಾಗಿದೆ. ಮರದ ತೊಗಟೆ ಮತ್ತು ಹುಲಿ ಚರ್ಮವನ್ನು ಜಟಾಧಾರಿಯಾಗಿ ಧರಿಸಿ ಋಷಿಗಳ ಮುಂದೆ ಪ್ರತ್ಯಕ್ಷನಾದದ್ದು ಶ್ರೀ ಪರಮೇಶ್ವರನ ಮಾನವ ಪ್ರತ್ಯಕ್ಷ ರೂಪ ಮತ್ತು ಪರಮ ಗುರು ದಕ್ಷಿಣಾಮೂರ್ತಿ ಎಂಬ ಸದಾಶಿವ ಋಷಿ.)
ಶಾಂತಂ ಪದ್ಮಾಸನಸ್ಥಂ
ಶಶಿಧರಮಕುಟಂ
ಪಂಚವಕ್ತ್ರಂ ತ್ರಿನೇತ್ರಂ
ಶೂಲಂ ವಜ್ರಂ ಚ ಖಡ್ಗಂ
ಪರಶುಮಭಯದಂ ದಕ್ಷಭಾಗೇ ವಹಂತಂ
ನಾಗಂ ಪಾಶಂ ಚ ಘಂಟಾಂ
ಪ್ರಳಯಹುತವಹಂ ಸಾಂಕುಶಂ ವಾಮಭಾಗೇ
ಸರ್ವಾಲಂಕಾರದೀಪ್ತಂ (ನಾನಾಲಂಕಾರ ದೀಪ್ತಂ)
ಸ್ಫಟಿಕಮಣಿ ನಿಭಂ ಪಾರ್ವತೀಶಂ ನಮಾಮಿ.
शान्तं पद्मासनस्थं शशधरमकुटं पञ्चवक्त्रं त्रिनेत्रं ।
शूलं वज्रम च खड्गं परसुमभयदं दक्षिणाङ्गे वहन्तम् ।
नागं पाशं च घण्टां डमरुसहितं साङ्कशं वामभागे ।
नानालङ्गकारयुक्तं स्पटिकमणिनिभं पार्वतीशं नमामि ।।
ಹೀಗೆಯೂ ಪಾಠಭೇದವಿದೆ.
ಎಂಬ ಧ್ಯಾನ ಶ್ಲೋಕದಲ್ಲಿ ಸೂಚಿಸುವುದು ಅಕಾಯನೂ (ಶರೀರಗಳಿಲ್ಲದವನು) ನಿರಾಕಾರನೂ (ಆಕೃತಿಯಿಲ್ಲದವನು) ನಿರವಯವನೂ (ಅವಯವರಹಿತನು) ಆದ ಪರಮೇಶ್ವರ ತತ್ವದ ಈ ಮಾನವ ಪ್ರತ್ಯಕ್ಷ ರೂಪವನ್ನು.
ಯೋಗ ಪರಂಪರೆ ಆದಿನಾಥನಾಗಿಯೂ (ಆದಿಯೋಗಿ), ವೇದಾಂತ ಪರಂಪರೆ ದಕ್ಷಿಣಾಮೂರ್ತಿಯಾಗಿಯೂ (ಜ್ಞಾನಮೂರ್ತಿ), ತಂತ್ರ ಪರಂಪರೆ ಸದಾಶಿವ ಋಷಿ, ಶಿವ ಋಷಿ, ಶಿವಶಂಕರ ಋಷಿ ಎಂಬ ಹೆಸರುಗಳಲ್ಲಿಯೂ, ಸಿದ್ಧಾಂತ ಪರಂಪರೆ ಸ್ವಚ್ಛಂದನಾಥ, ಶ್ರೀಕಂಠರುದ್ರ, ನೀಲಕಂಠರುದ್ರ ಎಂದೂ ಶ್ರೀ ಪರಮೇಶ್ವರನ ಈ ಪ್ರತ್ಯಕ್ಷ ಮಾನವ ರೂಪವನ್ನು ಕೊಂಡಾಡುತ್ತದೆ. ಶ್ವೇತಾಶ್ವತರೋಪನಿಷತ್ತು ರುದ್ರಮಹರ್ಷಿಯಾಗಿಯೂ, ಭಕ್ತರು ಕೈಲಾಸನಾಥನಾಗಿಯೂ ಇವನನ್ನು ಸ್ತುತಿಸುತ್ತಾರೆ. ಶ್ರೀ ಪರಮೇಶ್ವರನು ಪ್ರತ್ಯಕ್ಷ ಮಾನವ ರೂಪದಲ್ಲಿ ಬಂದು ಭೂಮಿಯ ಮಾನವ ರಾಶಿಗೆ ಮಾರ್ಗದರ್ಶನ ನೀಡಿದ ದಿವ್ಯ ಸ್ಥಳ ಎಂಬ ಹೆಸರಿನಲ್ಲಿಯೇ ಕೈಲಾಸ ತೀರ್ಥಯಾತ್ರೆ ಕೂಡ ಉಂಟಾಯಿತು.
ಸದಾಶಿವ ಸಮಾರಂಭಾಂ
ಶಂಕರಾಚಾರ್ಯ ಮಧ್ಯಮಾಂ
ಅಸ್ಮದಾಚಾರ್ಯ ಪರ್ಯಂತಾಂ
ವಂದೇ ಗುರುಪರಂಪರಾಂ
ಎಂಬ ಗುರುಪರಂಪರಾ ವಂದನ ಶ್ಲೋಕವನ್ನು ಗಮನಿಸಿ.
ಶಂಕರಾಚಾರ್ಯರು ಬರೆದ ದಕ್ಷಿಣಾಮೂರ್ತಿ ಸ್ತೋತ್ರ ಪ್ರಸಿದ್ಧವಾಗಿದೆ. ಮಾತುಗಳಿಂದಲೂ, ಮೌನದಿಂದಲೂ ಶಿಷ್ಯರಿಗೆ ಕಲಿಸಿ ಪರಾವಿದ್ಯೆಯನ್ನು ನೀಡಿದ ಪರಮ ಗುರು. ಆದಿನಾಥನೆಂಬ ಆದಿಯೋಗಿಯನ್ನು ಸ್ತುತಿಸುವುದರೊಂದಿಗೆ ‘ಹಠಯೋಗಪ್ರದೀಪಿಕಾ ಪ್ರಾರಂಭವಾಗುತ್ತದೆ.
ಶ್ರೀ ಆದಿನಾಥ ನಮೋfಸ್ತು ತಸ್ಮೈ
ಯೇನೋಪದಿಷ್ಟಾ ಹಠಯೋಗವಿದ್ಯಾ
ವಿಭ್ರಾಜತೇ ಪ್ರೋನ್ನತ ರಾಜಯೋಗ
ಮಾರೋಢುಮಿಚ್ಚೋರಧಿರೋಹಿಣೀ ವ (ಹಠಯೋಗಪ್ರದೀಪಿಕಾ 1: 1)
ಸದಾಶಿವಮೂರ್ತಿಯಿಂದ ಪಂಚಮುಖಸಾಧನಾಸಂಪ್ರದಾಯ (ತತ್ಪುರುಷಂ, ಅಘೋರಂ, ಸದ್ಯೋಜಾತಂ, ವಾಮದೇವಂ, ಈಶಾನಂ) ಹುಟ್ಟಿಕೊಂಡಿತು ಎಂದು ಸಂಪ್ರದಾಯ.
ಸ ಏಷ ಪೂರ್ವೇಶಾಮಪಿ ಗುರು:
ಕಾಲೇನಾನವಚ್ಛೇದಾತ್
(ಪತಂಜಲಿ – ಯೋಗಸೂತ್ರ 1:26)
ಕಾಲೇನ – ಕಾಲದಿಂದ
ಅನವಚ್ಛೇದಾತ್ – ಮಿತಿಯಿಲ್ಲದಿರುವಿಕೆಯಲ್ಲಿ – ವಿಚ್ಛೇದಿಸಲ್ಪಟ್ಟಿಲ್ಲ – ದೇಶಕಾಲಪರಿಮಿತಿಯಿಲ್ಲದವನು – ಸನಾತನನು – ನಿತ್ಯನೂತನನು – ಅಜನು – ಅಜೈಕಪಾತ್, ಅಕಾಯನು, ನಿರಾಕಾರನು, ನಿರವಯವನು
ಸ – ಅವನು (ಈಶ್ವರನು)
ಅಪಿ – ಕೂಡ
ಪೂರ್ವೇಶಾಂ (ಹಿಂದಿನವರ)
ಗುರು – ಗುರು ಆಗಿದ್ದಾನೆ.
ಪರಾವಿದ್ಯೆಯ ಪರಮಗುರು, ಅಪರಾವಿದ್ಯೆಗಳ ಪರಮಾಚಾರ್ಯ
ಪರಾವಿದ್ಯೆ ಮತ್ತು ಅಪರಾವಿದ್ಯೆಗಳ ಪರಮಶ್ರೋತಸ್ ಇವರೇ. ವೈದ್ಯನಾಥನ್/ವೈದ್ಯೇಶ್ವರನ್/ವೈತ್ತೀಶ್ವರನ್ – 18 ಸಿದ್ಧರಲ್ಲಿ ಸೇರಿರುವ ಧನ್ವಂತರಿಯನ್ನೂ ಅಗಸ್ತ್ಯಮಹರ್ಷಿಯನ್ನೂ ಪ್ರೇರೇಪಿಸಿದವರು.
ಪರಶುರಾಮನಿಗೆ ಧನುರ್ವೇದವನ್ನೂ ಅಗಸ್ತ್ಯಮಹರ್ಷಿಗೆ ಮರ್ಮವಿದ್ಯೆಯನ್ನೂ ನೀಡಿದ ಪರಮಾಚಾರ್ಯ. (ಕೇರಳದ ದಕ್ಷಿಣ ಕಳರಿ – ಅಗಸ್ತ್ಯ ಸಂಪ್ರದಾಯ ಮತ್ತು ಉತ್ತರ ಕಳರಿ – ಪರಶುರಾಮ ಸಂಪ್ರದಾಯ. – ಕಳರಿತ್ತರೆಯಲ್ಲಿ ಷಡಾಧಾರಗಳ ಮೇಲೆ ಶಿವಲಿಂಗವನ್ನು ಪ್ರತಿಷ್ಠಾಪಿಸುವ ಪದ್ಧತಿಯಿದೆ)
ನಟರಾಜನ್ – ನೃತ್ಯ, ವಾದ್ಯ, ನಾಟ್ಯ, ಸಂಗೀತ ಎಂಬ ಕಲೆಗಳ ನಾಥನಾದ ಕಲಾನಾಥನ್
ಸಂಸ್ಕೃತವ್ಯಾಕರಣಗ್ರಂಥರಚನಾಸಂಭಾವನೆಗಳಿಗೆ ಮಾಹೇಶ್ವರಸೂತ್ರದ ಮೂಲಕ ಪಾಣಿನಿಯನ್ನೂ ತಮಿಳು ಭಾಷಾಗವೇಷಣೆಗೆ ಅಗಸ್ತ್ಯರನ್ನೂ ಪ್ರೇರೇಪಿಸಿದ ವೈಜ್ಞಾನಿಕ.
ಶಿವರಾತ್ರಿ:
ಮಾಯೆಯ ಕಾಳರಾತ್ರಿಯನ್ನು ನಾಶಮಾಡಿ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಲು ಶ್ರೀಪರಮೇಶ್ವರನು ಜ್ಯೋತಿರ್ಲಿಂಗರೂಪದಲ್ಲಿ ಮತ್ತು ಸ್ಥೂಲ – ಸೂಕ್ಷ್ಮ – ಕಾರಣ ಶರೀರಗಳಲ್ಲಿ ಪ್ರತ್ಯಕ್ಷ ಶರೀರ (ದಿವ್ಯದೇಹ) ಸ್ವೀಕರಿಸಿ ಆವಿರ್ಭವಿಸಿದ ಈ ಸಂದರ್ಭಗಳನ್ನು ಸ್ಮರಿಸಲು ನಾವು ಮಹಾಶಿವರಾತ್ರಿಯನ್ನು ಆಚರಿಸುತ್ತೇವೆ ಎಂಬುದು ಸ್ಪಷ್ಟ. ತ್ರಿಭುವನಗಳಲ್ಲಿ ಸನಾತನಧರ್ಮ (ವೇದ) ನೀಡಲ್ಪಟ್ಟ ನಿರ್ಣಾಯಕ ಸಮಯಗಳನ್ನು ಸ್ಮರಿಸಿ ಕಾರುಣ್ಯಮೂರ್ತಿಯಾದ ಪರಮಶಿವನನ್ನು ಉಪಾಸಿಸುವ ದಿವ್ಯದಿನ!
ಪರಮಪ್ರೇಮಮೂರ್ತಿಯೂ ಕಾರುಣ್ಯವಾರಿಧಿಯೂ ಭೋಲೇನಾಥನೂ ಆದ ಮೃತ್ಯುಂಜಯನ ಮಹಿಮೆಯನ್ನು ಜನರಿಗೆ ತಿಳಿಸಲು, ಅವರು ನೀಡಿದ ಸನಾತನಧರ್ಮಶಾಸ್ತ್ರದ ಬಗ್ಗೆ ಅರಿವು ಮತ್ತು ಕರ್ತವ್ಯ ಮನೋಭಾವವನ್ನು ಸೃಷ್ಟಿಸಲು ಹೆಚ್ಚು ಆಳವಾಗಿ ಅವರನ್ನು ಉಪಾಸಿಸಲು ಋಷಿಗಳು ಆರಿಸಿದ ದಿನವೇ ಶಿವರಾತ್ರಿ.
ಶಿವರಾತ್ರಿಯ ಪ್ರಾಮುಖ್ಯತೆ:
ಪ್ರಕೃತಿಯ ಮಾಯೆ, ಅವಿದ್ಯೆ ಮತ್ತು ಅಜ್ಞಾನಾಂಧಕಾರವನ್ನು ಹೋಗಲಾಡಿಸಲು ಜ್ಞಾನಜ್ಯೋತಿಪ್ರದಾಯಕನಾಗಿ ವಿಶ್ವದಲ್ಲಿ ಜ್ಯೋತಿರ್ಲಿಂಗರೂಪದಲ್ಲಿ ಮತ್ತು ದಿವ್ಯ ರೂಪಗಳಲ್ಲಿ ಪರಮೇಶ್ವರನು ಪ್ರತ್ಯಕ್ಷನಾದ ಸಂದರ್ಭಗಳನ್ನು ಸ್ಮರಿಸುವ ದಿನವೇ ಶಿವರಾತ್ರಿ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅಂದರೆ ಗುರುಪರಂಪರೆಗಳ ಮತ್ತು ಸನಾತನಧರ್ಮವಿದ್ಯೆಯ ಸ್ಥಾಪನಾ ದಿನವೇ ಮಹಾಶಿವರಾತ್ರಿ.
ಶ್ರೀಪರಮೇಶ್ವರ, ಗುರುಪರಂಪರೆಗಳು, ಸನಾತನಧರ್ಮ – ಇವೆಲ್ಲವನ್ನೂ ಉಪಾಸಿಸಲು ಇದಕ್ಕಿಂತ ಶ್ರೇಷ್ಠವಾದ ಮತ್ತೊಂದು ದಿನವಿಲ್ಲ.
ಈ ದಿನದ ಆಚರಣೆಯು ಸಾಧಕಜೀವನದಲ್ಲಿ ಮಹತ್ವಪೂರ್ಣವಾಗಿದೆ. ಸನಾತನಧರ್ಮಿಗಳು ಆಚರಿಸುವ ಪುಣ್ಯದಿನಗಳಲ್ಲಿ ಶಿವರಾತ್ರಿಗೆ ಅತ್ಯಂತ ಮಹತ್ವವಿದೆ. ಮಹಾಶಿವರಾತ್ರಿ ವ್ರತಕ್ಕೆ ವ್ರತಗಳ ರಾಜಾಧಿರಾಜಸ್ಥಾನ (ಚಕ್ರವರ್ತಿಪದ) ಇದೆ ಎಂದು ಋಷಿಗಳು ಸಾಕ್ಷ್ಯ ನೀಡುತ್ತಾರೆ.
1. ಮಾಯೆಯನ್ನು ಸಂಪೂರ್ಣವಾಗಿ ನಾಶಮಾಡಲು (ಮುಗಿಸಲು) ಮಾಯಾತೀತನಾದ ಮಹೇಶ್ವರನಿಗೆ ಮಾತ್ರ ಸಾಧ್ಯ ಎಂದು ಜೀವಿಗಳಿಗೆ ನೆನಪಿಸುತ್ತದೆ.
ಮಾಯಾಂ ತು ಪ್ರಕೃತಿಂ ವಿದ್ಯಾನ್ಮಾಯಿನಂ ಚ ಮಹೇಶ್ವರಂ – (ಶ್ವೇತಾಶ್ವತರೋಪನಿಷತ್ ಅಧ್ಯಾಯ 4 ಮಂತ್ರ 10)
2. ಸನಾತನಧರ್ಮದಲ್ಲಿ ಏಕೇಶ್ವರ ದರ್ಶನವನ್ನು (ಏಕಂ ಸತ್ ವಿಪ್ರಾ ಬಹುಧಾ ವದಂತಿ) ದೃಢಪಡಿಸುವ ಪುಣ್ಯದಿನವೇ ಶಿವರಾತ್ರಿ.
3. ಅಜ್ಞಾನವನ್ನು ಹೋಗಲಾಡಿಸುವ ಜ್ಞಾನವನ್ನು ನೀಡಿ ಎಲ್ಲರನ್ನೂ ಆತ್ಮಬೋಧವುಳ್ಳವರನ್ನಾಗಿ ಮಾಡುವುದು ಅಥವಾ ಜೀವಿಗಳೆಲ್ಲವನ್ನೂ ಭಗವಂತನಾಗಿ ಏರಿಸುವುದು ಪರಮೇಶ್ವರನ ಮಹತ್ತರ ಕಾರುಣ್ಯದ ಅತಿ ದೊಡ್ಡ ಪುರಾವೆಯಾಗಿದೆ. ಈಶ್ವರನ ಈ ಕೃಪೆ/ಪ್ರೀತಿಯನ್ನು ಸ್ಮರಿಸುವ ದಿನವೂ ಶಿವರಾತ್ರಿ.
4. ಪ್ರೇಮಮೂರ್ತಿಯೂ, ಮಂಗಳದಾಯಕನೂ, ಕರುಣಾವಾರಿಧಿಯೂ ಆದ ಪರಮಶಿವನು ಜ್ಞಾನವನ್ನು ನೀಡುವುದಲ್ಲದೆ, ಸನಾತನಧರ್ಮದ ಮಹತ್ತರ ಆರ್ಷಗುರುಪರಂಪರಾಸಂಪ್ರದಾಯದ ಸಂಸ್ಥಾಪಕನೂ ಆದನು! ಕಾರಣಲೋಕಗಳಲ್ಲಿ ಮಹಾರುದ್ರನಾಗಿಯೂ ಸೂಕ್ಷ್ಮಲೋಕಗಳಲ್ಲಿ ಶಿವಶಂಕರ ಋಷಿಯಾಗಿಯೂ ಸ್ಥೂಲಲೋಕದ ಭೂಮಿಯಲ್ಲಿ ದಕ್ಷಿಣಾಮೂರ್ತಿ ಅಥವಾ ಆದಿನಾಥ (ಆದಿಯೋಗಿ) ಆಗಿಯೂ ಅವರು ಸನಾತನಧರ್ಮ (ವೇದ) ನೀಡಿದರು. ಸದಾಶಿವನಾದ ಅವರಲ್ಲಿಂದಲೇ ಗುರುಪರಂಪರೆಯ ಆರಂಭವೂ ಆಯಿತು. ಆದಿಗುರುವಾದ ಅವರು ಎಲ್ಲಾ ಲೋಕಗಳಲ್ಲಿರುವ ಗುರುಪರಂಪರೆಯ ಮೂಲಕ ತಮ್ಮ ದೌತ್ಯವನ್ನು ನಿರ್ವಹಿಸುತ್ತಿದ್ದಾರೆ. ನಂತರ ಯೋಗಿಗಳ ಅಂತರ್ದರ್ಶನ (ಪ್ರಕಟಣೆ, Intuition) ಮೂಲಕವೂ ಅವರು ಜ್ಞಾನವನ್ನು ನೀಡಿದರು, ನಿರಂತರವಾಗಿ ಈಗಲೂ ನೀಡುತ್ತಿದ್ದಾರೆ! ಶ್ರೀಪರಮೇಶ್ವರನನ್ನೂ ಅವರ ಮಹಾಕಾರುಣ್ಯವನ್ನೂ,”ಅವರು ಸ್ಥಾಪಿಸಿದ ಆರ್ಷಗುರುಪರಂಪರೆಗಳು ಎಂಬ ಸಂಪ್ರದಾಯವನ್ನೂ ಸನಾತನಧರ್ಮಜ್ಞಾನ ಲಾಭವನ್ನೂ ಸ್ಮರಿಸುವ ದಿನವೂ ಮಹಾಶಿವರಾತ್ರಿ! ಮತ್ತೊಂದು ಪುಣ್ಯದಿನಕ್ಕೂ ಇಷ್ಟೊಂದು ವಿಶೇಷತೆಗಳಿಲ್ಲ.
5. ಶ್ರೀಪರಮೇಶ್ವರನು ಮೊದಲ ಬಾರಿಗೆ ಕಾರಣಲೋಕದಲ್ಲಿ ಕಾರಣಾಗ್ನಿಪರ್ವತದಂತೆ ಪ್ರತ್ಯಕ್ಷನಾದ ಸಂದರ್ಭವನ್ನು ಅನುಸ್ಮರಿಸಿಕೊಂಡೇ ನಂತರ ಶಿವಲಿಂಗಾರಾಧನೆಯೂ, ಆಂತರಿಕವೂ ಬಾಹ್ಯವೂ ಆದ ಜ್ಯೋತಿಸ್ಸಿನಲ್ಲಿ ಮತ್ತು ಅಗ್ನಿಯಲ್ಲಿ ಈಶ್ವರನನ್ನು ಉಪಾಸಿಸುವ ಮತ್ತು ಆರಾಧಿಸುವ ಸಂಪ್ರದಾಯಗಳು ಉಂಟಾದವು! (ಮುಂದುವರಿಯುವುದು)