ಡಿಸೆಂಬರ್ 1 ರಂದು ಕೊಯಮತ್ತೂರಿನಲ್ಲಿ, ವೋಯ್ಸ್ ಆಫ್ ಕೋವೈ ಸಂಘಟಿಸಿದ A3 (Awake, Arise, Assert) ಸಮಾವೇಶದ 2ನೇ ದಿನದ ಭಾಷಣದಲ್ಲಿ, ಆಚಾರ್ಯ ಶ್ರೀ ಕೆ. ಆರ್. ಮನೋಜ್ ಜಿರವರು 2030ರ ಹೊತ್ತಿಗೆ ಸನಾತನ ಧರ್ಮವು ಪ್ರಮುಖ ಭಾರತೀಯ ಮತ್ತು ಜಾಗತಿಕ ಭಾಷೆಗಳಲ್ಲಿ ವಿಶ್ವದ ಎಲ್ಲಾ ದೇಶಗಳಲ್ಲಿ ವ್ಯಾಪಿಸಲಿದೆ ಎಂದು ತಿಳಿಸಿದರು.
ಈ ಗುರಿಯನ್ನು, ಸನಾತನ ಧರ್ಮದ ಪಂಚ ಮಹಾ ಕರ್ತವ್ಯಗಳನ್ನು ಸರಿಯಾಗಿ ಪೂರೈಸುವುದರಿಂದ ಸಾಧಿಸಲ್ಪಡುತ್ತದೆ. ಈ ಗುರಿಯನ್ನು ಸಾಧಿಸಲು, ಆರ್ಷ ವಿದ್ಯಾ ಸಮಾಜಂ (AVS) 10 ಹಂತದ ಸಮಗ್ರ ಕರ್ಮಯೋಜನೆಯನ್ನು, ಧರ್ಮ ಪ್ರಚಾರಕ ಪದ್ದತಿ ಮತ್ತು ಇತರೆ ಸಮರ್ಥವಾದ ಯೋಜನೆಗಳನ್ನು ಅಭಿವೃದ್ಧಿಪಡಿಸಿದೆ.
ಭಾಷಣದ ವೇಳೆ, ಆಚಾರ್ಯ ಜಿವರು ಇಂದು ಸಮಾಜದ ಮೇಲೆ ದುಷ್ಟಪ್ರಭಾವ ಬೀರುತ್ತಿರುವ ಆರು ರೀತಿಯ ಬ್ರೈನ್ ವಾಷಿಂಗ್ ದುಷ್ಟ ಶಕ್ತಿಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ತಡೆದು ಎದುರಿಸಬಹುದು ಎನ್ನುವುದರ ಕುರಿತು ಮಾಹಿತಿ ನೀಡಿದರು ಮತ್ತು ಆರ್ಷ ವಿದ್ಯಾ ಸಮಾಜದ ಗುರಿ ಮತ್ತು ಚಟುವಟಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶ್ರೀ ಜೆರೋಮ್ ಆಂಟೋ ಜಿರವರು ಆಚಾರ್ಯ ಜಿರವರನ್ನು ಸನ್ಮಾನಿಸಿದರು.