ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆ?
AVS
ಖನ ಸರಣಿ - 1
ಪೀಠಿಕೆ:
ಆರ್ಷವಿದ್ಯಾಸಮಾಜದ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬರು ಇತ್ತೀಚೆಗೆ ಕೆಲವು ವೀಡಿಯೊಗಳು, ಪೋಸ್ಟ್‌ಗಳು ಮತ್ತು ಫೇಸ್‌ಬುಕ್ ಲಿಂಕ್‌ಗಳನ್ನು ನನಗೆ ಕಳುಹಿಸಿದ್ದರು. ಇವೆಲ್ಲವೂ ಕೇರಳದ ಕೆಲವು ಮತಮೂಲಭೂತವಾದಿಗಳು, ಜಾತಿ ತೀವ್ರವಾದಿಗಳು ಮತ್ತು ರಾಜಕೀಯ ನಾಯಕರ ಸನಾತನ ಧರ್ಮ ವಿರೋಧಿ ಭಾಷಣಗಳು ಮತ್ತು ಪೋಸ್ಟ್‌ಗಳಾಗಿದ್ದವು. ಅವರ ಟೀಕೆಗಳಿಗೆ ಫೇಸ್‌ಬುಕ್ ಮೂಲಕ ಸೂಕ್ತ ಉತ್ತರ ನೀಡಬೇಕೆಂದು ಅವರು ನನ್ನನ್ನು ವಿನಂತಿಸಿದ್ದರು.
ನಾನು ಆ ಎಲ್ಲಾ ಯೂಟ್ಯೂಬ್ ಭಾಷಣಗಳು ಮತ್ತು ಲೇಖನಗಳನ್ನು ಸಂಪೂರ್ಣವಾಗಿ ಗಮನಿಸಿದೆ. ಅವುಗಳಲ್ಲಿ ಹಲವು, ಸನಾತನ ಧರ್ಮವನ್ನು ಅತ್ಯಂತ ಹೀನಾಯವಾಗಿ ನಿಂದಿಸುವ ಟೀಕೆಗಳನ್ನು ಒಳಗೊಂಡಿರುವುದನ್ನು ನಾನು ನೋಡಿದೆ. ಹೀಗೆ ಅಪಪ್ರಚಾರ ಮಾಡುವ ಎಲ್ಲರಿಗೂ ಈ ಲೇಖನ ಸರಣಿಯು ಉತ್ತರವಾಗಿದೆ. ಈ ಫೇಸ್‌ಬುಕ್ ಪೋಸ್ಟ್‌ಗಳು ವೈಯಕ್ತಿಕವಲ್ಲದ ಕಾರಣ ನಾನು ಯಾರ ಹೆಸರನ್ನೂ ಹೇಳುತ್ತಿಲ್ಲ. ಆದರೆ, ನಮ್ಮ ಸಮಾಜವು ನೀಡುವ ಅಭಿಪ್ರಾಯ ಪ್ರಚಾರ ಸ್ವಾತಂತ್ರ್ಯ, ಧಾರ್ಮಿಕ ಪ್ರಚಾರದ ಹಕ್ಕು, ಸಹಿಷ್ಣುತೆ ಮತ್ತು ಜಾತ್ಯತೀತತೆಗಳ ನೆರಳಿನಲ್ಲಿ ಸನಾತನ ಧರ್ಮ ಬಗ್ಗೆ ದ್ವೇಷದಿಂದ ಕೂಡಿದ ಸುಳ್ಳು ಪ್ರಚಾರವನ್ನು ಅತ್ಯಂತ ಕೀಳು ಭಾಷೆಯಲ್ಲಿ ಹೇಳುವವರಿಗೆ ಮಿತವಾದ ರೀತಿಯಲ್ಲಾದರೂ ಪ್ರತಿಕ್ರಿಯಿಸಬೇಕಾಗಿದೆ.
ಕೇರಳದಲ್ಲಿ ಬೆಳೆಯುತ್ತಿರುವ “ಹಿಂದೂ-ಕ್ರಿಶ್ಚಿಯನ್ ಸ್ನೇಹ ಸಂಬಂಧ”ವನ್ನು ಹಾಳುಮಾಡಬೇಕೆನ್ನುವ ಉದ್ದೇಶದಿಂದ “ನಿನ್ನ ಕಣ್ಣಲ್ಲೇ ಮರದ ಕಂಬ ಇಟ್ಟುಕೊಂಡು ನಿನ್ನ ಸಹೋದರನಿಗೆ ‘ಬಾ, ನಿನ್ನ ಕಣ್ಣಿಂದ ಮರದ ಚೂರನ್ನ ತೆಗಿತೀನಿ’ ಅಂತ ಹೇಗೆ ಹೇಳ್ತೀಯಾ?” (ಮತ್ತಾಯ 7:4) ಕೆಲವು ಮತಾಂಧರಿಗೆ ಅವರು ಅರ್ಹರಾಗಿರುವ ಮತ್ತು ಅವರಿಗೆ ಅರ್ಥವಾಗುವ ರೀತಿಯಲ್ಲಿ ಉತ್ತರ ನೀಡಲು ನಾವು ಬದ್ಧರಾಗಿದ್ದೇವೆ.
ಕೆಲವರು ಮತಾಂತರಗಳನ್ನು ಮಾಡಲು ಇವೆಲ್ಲವನ್ನೂ ಮಾಡುತ್ತಾರೆ. ಯೇಸುವೆ ನೀಡಿದ ಉಪದೇಶ-ಶಕಾರಗಳನ್ನು ಮಾತ್ರ ನಮಗೂ ನೀಡಲು ಸಾಧ್ಯ. “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಒಬ್ಬನನ್ನು ನಿಮ್ಮ ಮತದಲ್ಲಿ ಸೇರಿಸಿಕೊಳ್ಳುವದಕ್ಕಾಗಿ ಭೂವಿುಯನ್ನೂ ಸಮುದ್ರವನ್ನೂ ಸುತ್ತಿಕೊಂಡು ಬರುತ್ತೀರಿ; ಅವನು ಸೇರಿದ ಮೇಲೆ ಅವನನ್ನು ನಿಮಗಿಂತ ಎರಡರಷ್ಟಾಗಿ ನರಕ ಪಾತ್ರನಾಗಮಾಡುತ್ತೀರಿ.” (ಮತ್ತಾಯ: 23:14,15).
ಕ್ರಿಶ್ಚಿಯನ್ ಸಹೋದರರಿಗೆ:
ಹಮಾಸ್ ಇಸ್ರೇಲ್‌ನಲ್ಲಿ ಮಾಡಿದಂತೆ “ಚಿಕ್ಕದನ್ನು ಕೊಟ್ಟು ದೊಡ್ಡದನ್ನು ಪಡೆಯಲು” ಇವರ ಪ್ರಯತ್ನ. ಹಿಂದೆ ಕೇರಳದಲ್ಲಿ, ಇದೇ ರೀತಿಯ ಪರಿಸ್ಥಿತಿಯಲ್ಲಿ ಶ್ರೀಮದ್ ಚಟ್ಟಂಬಿಸ್ವಾಮಿಗಳು ಇವರಿಗೆ ಸೂಕ್ತ ಉತ್ತರ ನೀಡಿದ್ದಾರೆ. ಹಿಂದೂ ಗ್ರಂಥಗಳನ್ನು ಹಾಸ್ಯ ಮಾಡುವುದರಲ್ಲಿ ತೋರಿಸುವ ನ್ಯಾಯವನ್ನು ತಮ್ಮ ಮತಗ್ರಂಥಗಳಲ್ಲಿ ಕೆಲವರು ತೋರಿಸಲು ಸಿದ್ಧರಿಲ್ಲ. “ಅವರದ್ದು ಓಹೋ, ನಮ್ಮದು ಆಹಾ ಇಷ್ಟೆಯೇ” ಎಂಬ ಧೋರಣೆ! ಡಬಲ್ ಸ್ಟ್ಯಾಂಡರ್ಡ್, “ಅವರಿಗೊಂದು ನ್ಯಾಯ ನಮಗೊಂದು ನ್ಯಾಯ”. ಬೈಬಲ್‌ನ “ದೈವವಾಕ್ಯಗಳನ್ನು” ತೆಗೆದು ಕೂಲಂಕುಷವಾಗಿ ಪರಿಶೀಲಿಸಿದರೆ ಇವರೆಲ್ಲರೂ ಮುಖ ಮುಚ್ಚಿ ಓಡಬೇಕಾಗುತ್ತದೆ. ಹಾಗೆ ಟೀಕೆಗೆ ಒಳಗಾಗದಿರಬೇಕಾದರೆ ಮೊದಲು ಕ್ರಿಶ್ಚಿಯನ್ನರು ಇಂತಹವರನ್ನು ತಿದ್ದಲು ಅಥವಾ ನಿಯಂತ್ರಿಸಲು ಸಿದ್ಧರಾಗಿ.
“ಕ್ರಿಶ್ಚಿಯನ್ ಮತವನ್ನು ಅವಮಾನಿಸುತ್ತಿದ್ದಾರೆ” ಎಂದು ಕೂಗುವವರಿಗೆ, “ತೀರ್ಪುಮಾಡಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ. ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು” (ಮತ್ತಾಯ 7:1-3) ಎಂಬ ಯೇಸುವಿನ ಮಾತುಗಳನ್ನು ಉಪದೇಶಿಸಲು ಸಿದ್ಧರಾಗಿ. ಸಾಧ್ಯವಾಗದಿದ್ದರೆ ದಯವಿಟ್ಟು ನಮ್ಮನ್ನು ಕ್ಷಮಿಸಿ, ಸುಳ್ಳು ವಿಮರ್ಶಗಳಿಗೆ ಪ್ರತಿಕ್ರಿಯಿಸದೆ ಬೇರೆ ಆಯ್ಕೆಯಿಲ್ಲ.
(ಮುಂದುವರಿಯುವುದು)