Skip to content

2024 ರ ಸನಾತನ ಧರ್ಮ ಉತ್ಕೃಷ್ಟತಾ ಪುರಸ್ಕಾರವನ್ನು ಆರ್ಷ ವಿದ್ಯಾ ಸಮಾಜದ ವಿಶಾಲಿ ಶೆಟ್ಟಿ ಜೀ ಅವರಿಗೆ ನೀಡಲಾಯಿತು!

  • by

ಮುಂಬೈ ಮೂಲದ ಸನಾತನ ಧರ್ಮ ಉತ್ಕೃಷ್ಟತಾ ಸಂಘಟನಾ ಸಮಿತಿಯು ನೀಡುವ ಈ ಪ್ರಶಸ್ತಿಯನ್ನು ವಿಶಾಲಿ ಜಿ ಸ್ವೀಕರಿಸಿದರು.

ಸಂಪೂಜ್ಯ ಸ್ವಾಮಿ ಗೋವಿಂದದೇವ್ ಗಿರಿ ಜಿ ಮಹಾರಾಜ್ (ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಮತ್ತು ಮಹರ್ಷಿ ವೇದವ್ಯಾಸ ಪ್ರತಿಷ್ಠಾನ, ಅಲಂದಿ, ಪುಣೆಯ ಸಂಸ್ಥಾಪಕರು) ರವರು 29 ಸೆಪ್ಟೆಂಬರ್ 2024 ರಂದು ಹೋಟೆಲ್ ತಾಜ್, ಸಾಂತಾ ಕ್ರೂಜ್, ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

sanathana-dharma-uthkrushta-puraskar-2
sanathana-dharma-uthkrushta-puraskar-3

ವಿಶಾಲಿ ಜಿ ರವರು ಸನಾತನ ಧರ್ಮ, ಧರ್ಮ ಜಾಗರಣ ಚಟುವಟಿಕೆಗಳ ಕ್ಷೇತ್ರದಲ್ಲಿ ಗಮನಾರ್ಹ ಮತ್ತು ನಿಸ್ವಾರ್ಥ ಕೊಡುಗೆಗಳಿಗಾಗಿ ಪ್ರಶಸ್ತಿಗೆ ಅರ್ಹರಾಗಿದ್ದಾರೆ.

sanathana-dharma-uthkrushta-puraskar-5
sanathana-dharma-uthkrushta-puraskar-6

ಆಚಾರ್ಯಶ್ರೀ ಕೆ.ಆರ್ .ಮನೋಜ್ ಜಿಯವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ವಿಶಾಲಿ ಶೆಟ್ಟಿ ರವರು ಬಹುಭಾಷಾ ಅನುವಾದ ಕೃತಿಗಳಲ್ಲಿ (ಪುಸ್ತಕಗಳು, ಕೋರ್ಸ್‌ಗಳು, ಭಾಷಣಗಳು, ಚರ್ಚೆಗಳು, ಕೌನ್ಸಿಲಿಂಗ್, ಸಾರ್ವಜನಿಕ ಸಂಪರ್ಕ ಇತ್ಯಾದಿ) ಪ್ರಕಾಶನ ಮಿಷನ್, ಐಟಿ ಮಿಷನ್, ಪ್ರವಾಸ ಮತ್ತು ವಿಶೇಷ ಸಾರ್ವಜನಿಕ ಸಂಪರ್ಕ ಕಾರ್ಯಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಬ್ಯಾಚುಲರ್ ಆಫ್ ಇಂಜಿನಿಯರಿಂಗ್‌ನಲ್ಲಿ (ಮೆಡಿಕಲ್ ಎಲೆಕ್ಟ್ರಾನಿಕ್ಸ್ – ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕರ್ನಾಟಕ) ರ್ಯಾಂಕ್‌ ಹೋಲ್ಡರ್ ಕೂಡ ಆಗಿರುವ ವಿಶಾಲಿ ರವರು ಕಾಸರಗೋಡು ಮೂಲದ ಶ್ರೀ ಬಾಲಗೋಪಾಲ ಶೆಟ್ಟಿ ಮತ್ತು ಜಯಂತಿ ಶೆಟ್ಟಿ (ಪುನರ್ನವ, ನುಳ್ಳಿಪಾಡಿ) ದಂಪತಿಯ ಪುತ್ರಿ.

sanathana-dharma-uthkrushta-puraskar-Acharya-KR-Manoj-Ji
ಶ್ರೀ ಅಶ್ವಿನಿ ಉಪಾಧ್ಯಾಯ (ಅಡ್ವೊಕೇಟ್, ಸುಪ್ರೀಂ ಕೋರ್ಟ್ ಆಫ್ ಇಂಡಿಯಾ) ರವರು ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳ ಕುರಿತು ಉಪನ್ಯಾಸ ನೀಡಿದರು.
ಶ್ರೀ ಮನೋಜ್ ಶಂಭು ಸಿಂಹ ಜಿ (ಹಿಂದೂ ಜಾಗರಣ ಮಂಚ್, ಕೊಂಕಣ ಪ್ರಾಂತ ಸಂಯೋಜಕ್), ಶ್ರೀ ರಂಜಿತ್ ಜಾಧವ್ ಜಿ (ಬಜರಂಗದಳ, ಕೊಂಕಣ ಪ್ರಾಂತ ಸಂಯೋಜಕ್) ಮತ್ತು ಶ್ರೀ ಮೋಹನ್ ಕೃಷ್ಣ ಸಾಲೇಕರ್ ಜಿ (ವಿಎಚ್‌ಪಿ, ಕೊಂಕಣ ಪ್ರಾಂತ ಕಾರ್ಯದರ್ಶಿ) ಸಹ ಉಪಸ್ಥಿತರಿದ್ದರು.
ಕಾರ್ಯಕ್ರಮವು ಒ.ಶ್ರುತಿ ಜಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು ಮತ್ತು ಭಕ್ತಿ ಜೀ ರವರು ನಿರೂಪಣೆಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಆರ್ಷ ವಿದ್ಯಾ ಸಮಾಜದ ಕಾರ್ಯ ಮತ್ತು ಯೋಜನೆಗಳನ್ನು ಪರಿಚಯಿಸುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
O Sruthi - Hindi Book Launch
ಸ್ವಾಮಿ ಗೋವಿಂದದೇವ್ ಗಿರಿ ಜಿ ಮಹಾರಾಜ್ ರವರು AVS ನ ಮೊದಲ ಮಹಿಳಾ ಪ್ರಚಾರಕಿಯಾದ ಒ.ಶ್ರುತಿ ಜಿ ರವರ “ಏಕ್ ಪ್ರತ್ಯಾವರ್ತನ್ ಕಿ ಕಹಾನಿ (ಮೈ ಕೈಸೆ ಇಸ್ಲಾಂ ಮೇ ಮತಾಂತರಿತ್ ಹುಯಿ ಔರ್ ಸನಾತನ್ ಧರ್ಮ ಮೇ ವಾಪಾಸ್ ಲೌಟಿ)” ಪುಸ್ತಕವನ್ನು ಬಿಡುಗಡೆ ಮಾಡಿದರು.
ಒ.ಶ್ರುತಿ ಜಿ ತಮ್ಮ ಪುಸ್ತಕ ಮತ್ತು ತಮ್ಮ ಅನುಭವದ ಬಗ್ಗೆ ಮಾತನಾಡಿದರು.
ಈ ಪುಸ್ತಕವನ್ನು ದೀಪ್ತಿ ವಿ ಕುಶ್ವಾಹ್ ಮತ್ತು ವಿಶಾಲಿ ಶೆಟ್ಟಿ ಹಿಂದಿಗೆ ಅನುವಾದಿಸಿದ್ದಾರೆ.
ಸನಾತನ ಧರ್ಮದ ಸೇವೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುವ ವಿಶಾಲಿ ಜೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು…!!!

ಆರ್ಷ ವಿದ್ಯಾ ಸಮಾಜಂ