Skip to content

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು CPM ಕೇರಳ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಎಂ.ವಿ. ಗೋವಿಂದನ್ ಅವರ ಗಮನಕ್ಕೆ!

  • by

ಶಿವಗಿರಿ ಮಠದಲ್ಲಿ ವಾರ್ಷಿಕ ಯಾತ್ರೆ ಸಂದರ್ಭದಲ್ಲಿ ನಡೆದ ಕಾನ್ಫರೆನ್ಸ್‌ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೀಗೆ ಹೇಳಿದ್ದಾರೆ:
“ಶ್ರೀ ನಾರಾಯಣ ಗುರು ಸನಾತನ ಧರ್ಮದ ವಕ್ತಾರರೊ ಅಥವಾ ಅಭ್ಯಾಸಿಯೊ ಆಗಿರಲಿಲ್ಲ. ಅವರನ್ನು ಸನಾತನ ಧರ್ಮಿಯಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ.”

ಅದಾದ ನಂತರ, CPM ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ “ಸನಾತನ ಧರ್ಮ ಎಂದರೆ ಕೇವಲ ವರ್ಣಾಶ್ರಮ ವ್ಯವಸ್ಥೆ. ಇದು ಇಂದಿನ ಕಾಲದ ಅಶ್ಲೀಲತೆ” ಎಂದು ಹೇಳಿದ್ದಾರೆ:

ಸನಾತನ ಧರ್ಮ ಮತ್ತು ಶ್ರೀ ನಾರಾಯಣ ಗುರುಗಳ ಕುರಿತು ಆರೋಗ್ಯಕರ ಚರ್ಚೆಗಳನ್ನು ಸ್ವಾಗತಿಸಲಾಗುತ್ತದೆ. ಆದರೆ ಮುಂದುವರೆಯುವುದಕ್ಕು ಮುನ್ನ, ನನಗೆ ಕೆಲವು ಪ್ರಶ್ನೆಗಳನ್ನು ಕೇಳುವುದಕ್ಕಿದೆ:

1) ಭಾರತದ (ಕೇರಳ ಸೇರಿದಂತೆ) ಬಹುಮತ ಜನತೆ ಹಿಂದೂಗಳು. ಹಿಂದೂ ಧರ್ಮದ ನಿಜವಾದ ಹೆಸರು “ಸನಾತನ ಧರ್ಮ” ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಸರಿಯೇ?

ಗಮನವಿರಲಿ, ಇವರು ಹಿಂದೂ ಮತದಾರರಿಂದ ಆಯ್ಕೆಯಾಗಿರುವ ಸರ್ಕಾರದ ಮುಖ್ಯಸ್ಥರು. LDF ಒಕ್ಕೂಟಕ್ಕೆ ಮತ ಹಾಕಿದವರಲ್ಲಿ ಬಹುತೇಕರು ಹಿಂದುಗಳೇ ಮತ್ತು ಅವರೆಲ್ಲ ಹಿಂದೂ ಧಾರ್ಮಿಕ ಆಚರಣೆಗಳನ್ನು ನಂಬಿರುವವರು.

ಸರ್ಕಾರಿ ಜಮೀನಿನಲ್ಲಿ ನೆಟ್ಟಿದ್ದ ಶಿಲುಬೆಯನ್ನು ಜಿಲ್ಲಾಧಿಕಾರಿಗಳು ತೆಗೆಸಿದ್ದಾಗ, “ಶಿಲುಬೆ ಎನ್ನುವುದು ಕ್ರಿಶ್ಚಿಯನ್ನರ ಗುರುತು, ಅದನ್ನು ತೆಗೆಯುವಾಗ ಆ ವಿಶ್ವಾಸಿಗಳಿಗಾಗುವ ನೋವನ್ನು ಯೋಚಿಸಬೇಕಿತ್ತು” ಎಂದು ನೀವು ಹೇಳಿಕೆ ನೀಡಿದ್ದಿರಿ, ಹಾಗೆಯೇ ಸನಾತನ ಧರ್ಮದ ಬಗ್ಗೆಯೂ ಅವಹೇಳನಕಾರಿಯಾಗಿ ಹೇಳುವಾಗ, “ಹಿಂದೂಗಳು ಸಹ ತಮ್ಮ ಧರ್ಮದ ಬಗ್ಗೆ ಎದೆಗೆ ತಾಗುವಂಥ ನೋವು ಅನುಭವಿಸುತ್ತಾರೆ” ಎಂಬುದನ್ನು ಯಾಕೆ ಗಮನಿಸುತ್ತಿಲ್ಲ?

ನೀವು ಇಲ್ಲಿ ಹಿಂದೂಗಳಿಗೂ ಮುಖ್ಯಮಂತ್ರಿ ಅಲ್ಲವೇ? ಎಲ್ಲಾ ಹಿಂದುಗಳು ಸಂಘ ಪರಿವಾರದ ಸದಸ್ಯರೇ?

ಆಡಳಿತ ಪಕ್ಷದ ರಾಜ್ಯ ಕಾರ್ಯದರ್ಶಿ ಬಹಿರಂಗವಾಗಿ ಸನಾತನ ಧರ್ಮವನ್ನು ಅಶ್ಲೀಲ ಎಂದು ವಿಮರ್ಶಿಸುತ್ತಿದ್ದಾರೆ. ಒಂದು ಸಮುದಾಯವನ್ನು ಹೀಗೆ ಅವಮಾನಿಸುತ್ತಿರುವಾಗ ಮುಖ್ಯಮಂತ್ರಿಗಳು ಮತ್ತು ಪ್ರಮುಖ ನಾಯಕರು ಇದರಲ್ಲಿ ಯಾವುದೇ ತಪ್ಪು ಅಥವಾ ಅಪಾಯವನ್ನು ಕಾಣುತ್ತಿಲ್ಲವೇ? ಹಿಂದುಗಳಿಗೆ ಏನೇ ಹೇಳಿದರೂ ಅಥವಾ ಮಾಡಿದರು, ಅವರು ಅದಕ್ಕೆ ಏನು ಪ್ರತಿಕ್ರಿಯಿಸುವುದಿಲ್ಲ ಎಂಬ ಕಲ್ಪನೆಯಲ್ಲಿರುವಿರೆ? ಸನಾತನ ಧರ್ಮವನ್ನು ಅಶ್ಲೀಲ ಎಂದು ಕರೆದ ನಿಮ್ಮ ಪಕ್ಷದ ಕಾರ್ಯದರ್ಶಿ, ಮುಂದೆ ಬರುತ್ತಿರುವ ಚುನಾವಣೆಯಲ್ಲಿ ಮತದಾರರನ್ನು ಎದುರಿಸಬೇಕಾಗುತ್ತದೆ, ಹಿಂದುಗಳ ಸಮೇತ ಮತ್ತು ಮತ ಕೇಳಬೇಕಾಗುತ್ತದೆ ಎನ್ನುವುದನ್ನು ಮರೆತಿರುವರೇ?

 

2) ಇಂತಹ ವ್ಯಂಗ್ಯದಿಂದ ಏನನ್ನಾದರೂ ಸಾಧಿಸಲಾಗುತ್ತದೆಯೇ?
ಇದು ಪಕ್ಷ ಅಥವಾ ಸರ್ಕಾರಕ್ಕೆ ಪ್ರಯೋಜನವನ್ನು ತರುತ್ತದೆಯೇ? ಅಥವಾ ನಿಮಗೆ ಯಾರನ್ನಾದರೂ ಸಂತೋಷ ಪಡಿಸುವ- ತುಷ್ಟೀಕರಿಸುವ ಉದ್ದೇಶ ಇದೆಯೇ?

3) ಏಕೆ ಕೇವಲ ಒಂದೇ ಧರ್ಮದ ನಂಬಿಕೆಗಳ ಬಗ್ಗೆ ಈ ರೀತಿಯ ವಾಗ್ದಾಳಿ ಮಾಡಲಾಗುತ್ತಿದೆ?
ನಿಮಗೆ ಬೇರೆ ಧರ್ಮಗಳ(ಮತ) ನಂಬಿಕೆಗಳ ಬಗ್ಗೆ ಇದೇ ರೀತಿ ಹೇಳಲು ಧೈರ್ಯವಿದೆಯೆ?

ಆದರೆ, ಈ ಎರಡು ಸಾಮಾನ್ಯ ಆರೋಪಗಳ ಬಗ್ಗೆ ಚರ್ಚೆಯನ್ನು ಸ್ವಾಗತಿಸುತ್ತೇನೆ:

sreenarayanaguru-sanathana-dharma

1) ಶ್ರೀ ನಾರಾಯಣ ಗುರುವಿನ ತತ್ವಶಾಸ್ತ್ರಗಳು ಸನಾತನ ಧರ್ಮದೊಂದಿಗೆ ಸಂಬಂಧ ಹೊಂದಿಲ್ಲವೆ?

2) ಸನಾತನ ಧರ್ಮ ಎಂಬುದು ಕೇವಲ ವರ್ಣಾಶ್ರಮ ವ್ಯವಸ್ಥೆಯೆ?

ಈ ಆರೋಪಗಳು ಗಂಭೀರ ಚರ್ಚೆಗೆ ಒಳಗಾಗಬೇಕು. ಅದನ್ನು ಮಾಡೋಣ.

1) ಶ್ರೀ ನಾರಾಯಣ ಗುರುವಿನ ತತ್ವಶಾಸ್ತ್ರಗಳು ಸನಾತನ ಧರ್ಮದೊಂದಿಗೆ ಸಂಬಂಧ ಹೊಂದಿಲ್ಲವೆ ?
ಒಬ್ಬ ವ್ಯಕ್ತಿಯನ್ನು ಅವನ ಜೀವನದ ಮತ್ತು ವಿಚಾರಧಾರೆಗಳ ಮೂಲಕ ತೀರ್ಮಾನಿಸಬೇಕು.

ಶ್ರೀ ನಾರಾಯಣ ಗುರು ಪ್ರಾಣಪ್ರತಿಷ್ಠೆ ಮಾಡಿದ ದೇವಾಲಯಗಳು, ಅವರ ತತ್ವಶಾಸ್ತ್ರಗಳು- ಬರಹಗಳು, ಅವರು ಸ್ಥಾಪಿಸಿದ ವ್ಯವಸ್ಥೆ ಮತ್ತು ಸಂಘಟನೆಗಳು ಇವೆಲ್ಲವನ್ನೂ ನೋಡಿದರೆ, ಅವರು ಸನಾತನ ಧರ್ಮವನ್ನು ಪ್ರಚಾರ ಮಾಡುತ್ತಿದ್ದರು ಎಂದು ತಿಳಿಯುತ್ತದೆ. ಶ್ರೀ ನಾರಾಯಣ ಗುರುಗಳು ಸ್ವತಃ ಆ ತತ್ವಶಾಸ್ತ್ರವನ್ನು ಅನುಸರಿಸುತ್ತಾ ಜೀವಿಸಿದ್ದವರು.

ಮುಖ್ಯಮಂತ್ರಿ ಮತ್ತು ಪಕ್ಷದ ಕಾರ್ಯದರ್ಶಿಯಿಂದ ಆದ ಈ ದೋಷದ ಕಾರಣ, ಮೂಲಭೂತವಾದ ತತ್ವಗಳು, ಅವು ಬಹಳ ಕಾಲದ ನಂತರ ಉಲ್ಬಣಗೊಂಡರುವವು, ಅವು ಸನಾತನ ಧರ್ಮವನ್ನು ಪ್ರತಿನಿಧಿಸುತ್ತವೆ ಎಂಬ ತಪ್ಪುಧಾರಣೆ ಇಲ್ಲಿದೆ. ಇದು ಅವರ ವೈಯಕ್ತಿಕ ದೋಷವಲ್ಲವಿರಬಹುದು. ಇಲ್ಲಿ ಮಹತ್ವದ ತಪ್ಪು ಅರ್ಥ, ಅಥವಾ ಉದ್ಧೇಶಿತ ತಪ್ಪು ಮಾಹಿತಿ ಮತ್ತು ಬೋಧನೆ ತಂತ್ರಗಳು ಜಾರಿಯಲ್ಲಿದೆ. ಅನೇಕ ಜನರು ಈ ರೀತಿಯ ಬ್ರೈನ್‌ವಾಶಿಂಗ್‌ನ ಬಲಿಯಾಗಿದ್ದಾರೆ.

ಆದರೆ ಶ್ರೀ ನಾರಾಯಣ ಗುರುವಿಗೆ “ಸನಾತನ ಧರ್ಮ” ಎನ್ನುವುದು ಪವಿತ್ರ ವಾಕ್ಯ ಮತ್ತು ಶ್ರೇಷ್ಠ ತತ್ವಶಾಸ್ತ್ರವಾಗಿತ್ತು. “ಸನಾತನ” ಎಂಬ ಪದವು ಪರಮೇಶ್ವರನ ಸಮಾನಾರ್ಥಕ ಮತ್ತು “ಸನಾತನ ಧರ್ಮ” ಎಂದರೆ ಸರ್ವೇಶ್ವರನು (ಪರಮೇಶ್ವರ) ಅನುಗ್ರಹಿಸಿದ ಧರ್ಮ. ಈ ಪದಗಳು ಗುರುವಿಗೆ ಅತ್ಯಂತ ಪ್ರೀತಿಯ ಪದಗಳಾಗಿದ್ದವು.

ಪಳ್ಳಾತ್ತುರುತ್ತಿ ಎಸ್‌ಎನ್‌ಡಿಪಿ ಸಭೆಗೆ ಗುರುವಿನ ಕೊನೆಯ ಸಂದೇಶವು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ:
“ಸನಾತನ ಧರ್ಮಕ್ಕೆ ಬನ್ನಿ” – ಶ್ರೀ ನಾರಾಯಣ ಗುರುದೇವ

ಶ್ರೀ ನಾರಾಯಣ ಗುರು ಪಳ್ಳಾತ್ತುರುತ್ತಿ ಎಸ್‌ಎನ್‌ಡಿಪಿ ಸಭೆಗೆ ಕೊಟ್ಟ ಕೊನೆಯ ಸಂದೇಶದಲ್ಲಿ ಮತಾಂತರವಾಗಲು ಬಯಸುತ್ತಿರುವವರು ಸನಾತನ ಧರ್ಮವನ್ನು ಒಪ್ಪಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಇದು ಎಲ್ಲಾ ಮಾನವರನ್ನು ಸಮನಾಗಿ ಕಾಣುವ ತತ್ವಶಾಸ್ತ್ರವೆಂದು ಅವರು ಬೋಧಿಸಿದ್ದರು.

ಇದರಿಂದ, ಶ್ರೀ ನಾರಾಯಣ ಗುರುಗಳು ಸನಾತನ ಧರ್ಮವು ಎಲ್ಲಾ ಮಾನವರನ್ನು ಒಂದುಗೂಡಿಸುವ ತತ್ವಶಾಸ್ತ್ರವೆಂದು ದೃಢವಾಗಿ ಅರ್ಥಮಾಡಿಕೊಂಡಿದ್ದವರೆಂದು ತಿಳಿಯುತ್ತದೆ. ಜೊತೆಗೆ ಸನಾತನ ಧರ್ಮವು ಗುರು ಪರಂಪರೆಗಳಿಗೆ ಸೇರಿರುವುದು ಎನ್ನುವುದರಲ್ಲಿ ಅವರಿಗೆ ಯಾವುದೇ ಸಂದೇಹವಿರಲಿಲ್ಲ. “ಸನಾತನ ಧರ್ಮಕ್ಕೆ ಬನ್ನಿ” ಎಂಬ ಸಂದೇಶವನ್ನು ಕೊಡುವ ಪ್ರೇರಣೆಯನ್ನು ಅವರು ಆ ತತ್ವಶಾಸ್ತ್ರದಿಂದ ಪಡೆದಿದ್ದರು.

ಎಸ್‌ಎನ್‌ಡಿಪಿ ಯೋಗಂನಲ್ಲಿ ಮತಾಂತರಗಳ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದ್ದ ಸಮಯವದು. ಆ
1926ರ ಎಸ್‌ಎನ್‌ಡಿಪಿ ಯೋಗಂನ ವಾರ್ಷಿಕ ಸಭೆಯಲ್ಲಿ, ಮತಾಂತರಕ್ಕೆ ಸಂಬಂಧಿಸಿದ ವಿಚಾರಗಳು ಚರ್ಚೆಯಲ್ಲಿದ್ದಾಗ, ಗುರುದೇವರು ಈ ಸಂದೇಶವನ್ನು ನೀಡಿದರು (ಪಳ್ಳಾತ್ತುರುತ್ತಿಯಲ್ಲಿ ಗುರುದೇವರ ಕೊನೆಯ ಸಂದೇಶ)
“ನಮಗೆ, ನಿಮ್ಮ ಸಂಘಟನೆ ಮತ್ತು ಧಾರ್ಮಿಕ ಸುಧಾರಣೆಗಳ ಸಂಬಂಧ ಗಂಭೀರ ಚಿಂತನೆಗಳನ್ನು ಮಾಡುತ್ತಿರುವ ವಿಷಯವನ್ನು ಕೇಳಿ ತುಂಬಾ ಸಂತೋಷವಾಗಿದೆ. ಆದರೆ, ಸಂಘಟನೆಯ ಉದ್ದೇಶವು ಕೇವಲ ಒಂದು ಜಾತಿಯವರನ್ನು ಒಳಗೊಂಡ ಸಮುದಾಯವನ್ನು ರೂಪಿಸುವುದಾಗಿರಬಾರದು. ಧಾರ್ಮಿಕ ಸುಧಾರಣೆ ಎಂದರೆ ಒಂದು ಮತದ ಗುಂಪನ್ನು ಬಿಟ್ಟು ಇನ್ನೊಂದು ಮತವನ್ನು ಸೇರುವುದು ಆಗಿರಬಾರದು. ನಮ್ಮ ಸಮುದಾಯ ಸಂಘಟನೆಯು ಎಲ್ಲರನ್ನು ಒಂದುಗೂಡಿಸಿ, ಎಲ್ಲರೂ ಒಂದೇ ಎಂದು ಸಾಬೀತು ಮಾಡಬೇಕು.” ಮತಧರ್ಮಗಳು ವೈಯಕ್ತಿಕ ನಂಬಿಕೆಯ ಸ್ವಾತಂತ್ರ್ಯವನ್ನು ನೀಡಬೇಕು, ಎಲ್ಲಾ ಸಂಸ್ಕೃತಿಯ ವಿಚಾರಗಳನ್ನು ಒಪ್ಪಿಕೊಳ್ಳುವಂತವರಾಗಿ, ಮನುಷ್ಯರಿಗೆ ಉನ್ನತ ಚಿಂತನೆಗಳತ್ತ ಮಾರ್ಗದರ್ಶನ ನೀಡಿ”.

“ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಮನುಕುಲಕ್ಕೆ” – ಇದೇ ಸನಾತನ ಧರ್ಮ.
ಗುರುವಿನ ಪ್ರಕಾರ, ಈ ಸನಾತನ ಧರ್ಮವನ್ನು ಅಂಗೀಕರಿಸುವುದು ಅತ್ಯುತ್ತಮ ಮಾರ್ಗ. ಅಸಮಾನತೆ ಮತ್ತು ಕಷ್ಟಗಳನ್ನು ನಿವಾರಿಸಲು ಮತಾಂತರವಾಗಬೇಕೆಂದು ನಂಬಿರುವವರು “ಸನಾತನ ಧರ್ಮ”ವನ್ನು ತಮ್ಮ ಧರ್ಮವೆಂದು ಒಪ್ಪಿಕೊಳ್ಳಬೇಕು. ಆಗ ಅದು ಮತಾಂತರ ಮತ್ತು ಅವರ ಸ್ವಾತಂತ್ರ್ಯದ ಘೋಷಣೆಯಾಗುತ್ತದೆ”.
(ಕುಮಾರನ್ ಅಶಾನ್ ಅವರು ಬರೆದಿರುವ ಬಯೋಗ್ರಫಿಯಲ್ಲಿ ಸ್ವಾಮಿ ಆರ್ಷಜ್ಞಾನಾನಂದರಿಂದ ಬರೆಯಲ್ಪಟ್ಟ ವಿಭಾಗದಲ್ಲಿ, ಗುರುದೇವರು ಹೇಳಿರುವುದು)

ಮೂರ್ಕೋತ್ ಕುಮಾರನ್ ರವರು ಬರೆದಿರುವ ಮಲಯಾಳಂ ಬಯೋಗ್ರಫಿಯಲ್ಲಿ, ‘ಶ್ರೀ ನಾರಾಯಣ ಗುರು ಸ್ವಾಮಿ: ಪವಿತ್ರ ಹಿಂದೂ ಧರ್ಮದ ವೈಶಿಷ್ಟ್ಯಪೂರ್ಣ ಪುತ್ರ’ (ಪುಟ 79) ಎಂದು ಗುರುದೇವರನ್ನು ವಿವರಿಸಲಾಗಿದೆ.

To know more about Aarsha Vidya Samajam, please visit: www.arshaworld.org

(ಮುಂದುವರೆಯುತ್ತದೆ…)