Author: ಒ. ಶ್ರುತಿ
ಅನುವಾದ: ಶ್ವೇತಾ ಜಲಗೇರಿ ಮತ್ತು ನಾಗೇಂದ್ರ. ವಿ.
Original price was: ₹300.00.₹250.00Current price is: ₹250.00.
(ನಾನು ಇಸ್ಲಾಂಗೆ ಹೇಗೆ ಮತಾಂತರವಾದದ್ದು ಮತ್ತು ಮರಳಿ ಸನಾತನ ಧರ್ಮಕ್ಕೆ ಬಂದದ್ದು)
ಕಾಸರಗೋಡು ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಶ್ರುತಿ, ಇಸ್ಲಾಂ ಮತದ ಜಾಲಕ್ಕೆ ಸಿಲುಕಿ ರಹಮತ್ ಆದ ಸುದ್ದಿಯು ಬಹಳ ವಿವಾದವಾಗಿತ್ತು, ದಾರಿತಪ್ಪಿ ಮತಾಂತರಗೊಂಡ ಸಾವಿರಾರು ಜನರಲ್ಲಿ ಒಬ್ಬರಾಗಿದ್ದವರು ಈ ಸ್ಕೂಲ್ ಅಧ್ಯಾಪಕಿ. ಈಶ್ವರನ ಅನುಗ್ರಹದಿಂದ ಆರ್ಷ ವಿದ್ಯಾ ಸಮಾಜಕ್ಕೆ ತಲುಪಿ ಸನಾತನ ಧರ್ಮವನ್ನು ಕಲಿಯುವ ಸೌಭಾಗ್ಯವು ಈ ಹೆಣ್ಣುಮಗಳಿಗೆ ದೊರಕಿತು. ತಪ್ಪನ್ನು ಅರ್ಥಮಾಡಿಕೊಂಡು ಹಿಂದೂ ಧರ್ಮಕ್ಕೆ ಮರಳಿ ಬಂದ ಶ್ರುತಿ ಸನಾತನ ಧರ್ಮದ ಪೂರ್ಣಸಮಯ ಪ್ರಚಾರಕಿಯಾಗಿದ್ದಾರೆ. ಆರ್ಷ ವಿದ್ಯಾ ಸಮಾಜದ ಮೊದಲ ಪ್ರಚಾರಕಿಯಾಗಿರುವ ಶ್ರುತಿ, ಸಾವಿರಾರು ಜನರಿಗೆ ಸರಿದಾರಿ ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶ್ರುತಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಯೂಟ್ಯೂಬ್ ವಿಡಿಯೋವನ್ನು ಇದುವರೆಗು 60 ಲಕ್ಷ ಜನರು ವೀಕ್ಷಿಸಿದ್ದಾರೆ. ಮತಾಂತರಗಳ ಹಿಂದಿರುವ ನಿಜವಾದ ಕಾರಣಗಳನ್ನು, ಪರಿಹಾರ ಮಾರ್ಗಗಳನ್ನು ಈ ಗ್ರಂಥದಲ್ಲಿ ಶ್ರುತಿ ಚರ್ಚಿಸಿದ್ದಾರೆ. ತನ್ನ ತಂದೆ-ತಾಯಿಯರು ಅನುಭವಿಸಿದ ದುಃಖ-ಅವಮಾನಗಳನ್ನು ಬೇರೆಯವರು ಅನುಭವಿಸಬಾರದೆಂದು, ಇನ್ನು ಮುಂದೆ ಯಾರು ತನ್ನ ಹಾಗೆ ದಾರಿತಪ್ಪಿತಕ್ಕೊಳಗಾಗಿ ಮತಾಂತರವಾಗಬಾರದೆಂದು ಶ್ರುತಿ ಬಯಸುತ್ತಾರೆ.
Reviews
There are no reviews yet.