Skip to content

ಒ.ಶ್ರುತಿ ಜಿ ರವರು ಬರೆದಿರುವ “ಏಕ್ ಪ್ರತ್ಯಾವರ್ತನ್ ಕಿ ಕಹಾನಿ” ಪುಸ್ತಕವನ್ನು 29 ಸೆಪ್ಟೆಂಬರ್ 2024 ರಂದು ಹೋಟೆಲ್ ತಾಜ್, ಸಾಂತಾ ಕ್ರೂಜ್, ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು.

  • by

ಒ.ಶ್ರುತಿ ಜಿ ರವರು ಬರೆದಿರುವ “ಏಕ್ ಪ್ರತ್ಯಾವರ್ತನ್ ಕಿ ಕಹಾನಿ” ಪುಸ್ತಕವನ್ನು 29 ಸೆಪ್ಟೆಂಬರ್ 2024 ರಂದು ಹೋಟೆಲ್ ತಾಜ್, ಸಾಂತಾ ಕ್ರೂಜ್, ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು.

ಈ ಪುಸ್ತಕವು ಹಿಂದಿ ಭಾಷಾಂತರವಾಗಿದ್ದು ಮೂಲ ಮಲಯಾಳಂ ಪುಸ್ತಕದ ಹೆಸರು ‘ಒರು ಪರಾವರ್ತನತಿಂಟೆ ಕಥಾ’, ಲೇಖಕರು ಒ.ಶ್ರುತಿ, ಆರ್ಷ ವಿದ್ಯಾ ಸಮಾಜದ ಮೊದಲ ಮಹಿಳಾ ಪ್ರಚಾರಕಿ.
 
Hindi-Book-Launch
ಸಂಪೂಜ್ಯ ಸ್ವಾಮಿ ಗೋವಿಂದದೇವ್ ಗಿರಿ ಜಿ ಮಹಾರಾಜ್ (ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಅಯೋಧ್ಯೆಯ ಖಜಾಂಚಿ ಮತ್ತು ಮಹರ್ಷಿ ವೇದವ್ಯಾಸ ಪ್ರತಿಷ್ಠಾನ, ಅಳಂದಿ, ಪುಣೆಯ ಸಂಸ್ಥಾಪಕರು) ರವರು ಪುಸ್ತಕವನ್ನು ಬಿಡುಗಡೆ ಮಾಡಿದರು.
ಆಚಾರ್ಯಶ್ರೀ ಕೆ.ಆರ್.ಮನೋಜ್ ಜಿ ರವರು ಆರ್ಷ ವಿದ್ಯಾ ಸಮಾಜದ ಪ್ರಸ್ತುತ ಪ್ರಾಮುಖ್ಯತೆ ಮತ್ತು ಕ್ರಿಯಾ ಯೋಜನೆಗಳ ಕುರಿತು ಮಾತನಾಡಿದರು.
ಶ್ರೀ ಅಶ್ವಿನಿ ಉಪಾಧ್ಯಾಯ (ಅಡ್ವೊಕೇಟ್, ಸುಪ್ರೀಂ ಕೋರ್ಟ್ ಆಫ್ ಇಂಡಿಯಾ) ರವರು ಹಿಂದು ಸಮಾಜ ಎದುರಿಸುತ್ತಿರುವ ಸವಾಲುಗಳ ಕುರಿತು ಉಪನ್ಯಾಸ ನೀಡಿದರು.
ಶ್ರೀ ಮನೋಜ್ ಶಂಭು ಸಿಂಹ ಜಿ (ಹಿಂದೂ ಜಾಗರಣ ಮಂಚ್, ಕೊಂಕಣ ಪ್ರಾಂತ ಸಂಯೋಜಕ್), ಶ್ರೀ ರಂಜಿತ್ ಜಾಧವ್ ಜಿ (ಬಜರಂಗದಳ, ಕೊಂಕಣ ಪ್ರಾಂತ ಸಂಯೋಜಕ್) ಮತ್ತು ಶ್ರೀ ಮೋಹನ್ ಕೃಷ್ಣ ಸಾಲೇಕರ್ ಜಿ (ವಿಎಚ್‌ಪಿ, ಕೊಂಕಣ ಪ್ರಾಂತ ಕಾರ್ಯದರ್ಶಿ) ಸಹ ಉಪಸ್ಥಿತರಿದ್ದರು.
ಕಾರ್ಯಕ್ರಮವು ಒ.ಶ್ರುತಿ ಜಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು ಮತ್ತು ಭಕ್ತಿ ಜಿರವರು ನಿರೂಪಣೆಯನ್ನು ಮಾಡಿದರು.
sanathana-dharma-uthkrushta-puraskar for Vishali Shetty

ಕಾರ್ಯಕ್ರಮದಲ್ಲಿ ಆರ್ಷ ವಿದ್ಯಾ ಸಮಾಜದ ಕಾರ್ಯ ಮತ್ತು ಯೋಜನೆಗಳನ್ನು ಪರಿಚಯಿಸುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ಒ.ಶ್ರುತಿ ಜಿ ತಮ್ಮ ಪುಸ್ತಕ ಮತ್ತು ತಮ್ಮ ಅನುಭವದ ಬಗ್ಗೆ ಮಾತನಾಡಿದರು.
ಈ ಪುಸ್ತಕವನ್ನು ದೀಪ್ತಿ ವಿ ಕುಶ್ವಾಹ್ ಮತ್ತು ವಿಶಾಲಿ ಶೆಟ್ಟಿ ಹಿಂದಿಗೆ ಅನುವಾದಿಸಿದ್ದಾರೆ.

ಪುಸ್ತಕ ಬಿಡುಗಡೆಯನ್ನು ದೊಡ್ಡಮಟ್ಟದಲ್ಲಿ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

ಪುಸ್ತಕದ ಕೆಲವು ವಿಶೇಷತೆಗಳು:

1. ಈ ಪುಸ್ತಕವು ಮತಾಂತರಕ್ಕೆ ಕಾರಣವಾಗುವ ಘಟನೆಗಳ ಬಗ್ಗೆ ಚರ್ಚಿಸುತ್ತದೆ – ನಾವು ನಮ್ಮೊಳಗೆ ಪರಿಹರಿಸಿಕೊಳ್ಳಬೇಕಾಗಿರುವ ಆಂತರಿಕ ದೌರ್ಬಲ್ಯಗಳು ಅಂದರೆ ಸನಾತನ ಧರ್ಮ, ಇತರೆ ಧರ್ಮಗಳು, ತತ್ವಗಳ ಬಗೆಗಿನ ಅಜ್ಞಾನ. ಹಿಂದಿನ ಮತ್ತು ಪ್ರಸ್ತುತ ಸಮಸ್ಯೆಗಳನ್ನು ಸರಿಯಾಗಿ ಅಧ್ಯಯನ ಮಾಡದೆಯಿರುವ ಸಮಸ್ಯೆ, ಇವುಗಳಿಗೆ ಪರಿಹಾರವನ್ನು ಕಾರ್ಯಗತಗೊಳಿಸುವ ವ್ಯವಸ್ಥೆಯಿಲ್ಲದ ಸಮಸ್ಯೆ, ಎಲ್ಲಾ ಧರ್ಮಗಳು ಒಂದೇ ಎಂಬ ಹಿಂದೂಗಳ ಕುರುಡು ತಪ್ಪು ಕಲ್ಪನೆ, ಅನೈಕ್ಯತೆ ಮತ್ತು ಅನೇಕ ಸಮಸ್ಯೆಗಳು.
2. ಇಸ್ಲಾಮಿಸ್ಟ್‌ಗಳ ಮತಾಂತರ ಕುತಂತ್ರಗಳನ್ನು ವಿವರಿಸುತ್ತದೆ.
3. ಒಬ್ಬ ವ್ಯಕ್ತಿ ಮತಾಂತರಗೊಂಡಾಗ ಆತನಲ್ಲಿ ಉಂಟಾಗುವ ವರ್ತನೆ, ರೂಪಾಂತರ – ಜನರು, ಕುಟುಂಬ, ಸಮಾಜ, ರಾಷ್ಟ್ರ ಮತ್ತು ಪ್ರಪಂಚದ ಕಡೆಗೆ ಪ್ರತಿಕೂಲ ವರ್ತನೆ – ಇವುಗಳನ್ನು ವೈಯಕ್ತಿಕ ಅನುಭವದ ಮೂಲಕ ಸ್ಪಷ್ಟಪಡಿಸಲಾಗಿದೆ.
4. ಉಗ್ರಗಾಮಿಗಳು ಮತ್ತು ಭಯೋತ್ಪಾದಕರನ್ನು ಸೃಷ್ಟಿಸುವ ಮತಾಂತರ ಕೇಂದ್ರಗಳಲ್ಲಿ ನಡೆಸಲಾಗುವ ಬ್ರೈನ್ ವಾಶ್ ಮತ್ತು ತರಬೇತಿಯನ್ನು ಬಹಿರಂಗಪಡಿಸುತ್ತದೆ.
5. ಹಿಂದೂ ಕುಟುಂಬಗಳ ಮತ್ತು ಸಮಾಜದ ಮೇಲೆ ಮತಾಂತದಿಂದಾಗುವ ಪರಿಣಾಮವನ್ನು ವಿವರಿಸುತ್ತದೆ.
6. ವ್ಯಕ್ತಿಯು ಸನಾತನ ಧರ್ಮಕ್ಕೆ ಹೇಗೆ ಮರಳಲು ಸಾಧ್ಯವಾಯಿತು ಎಂಬುದನ್ನು ವಿವರಿಸುತ್ತದೆ.
7. ಮತಾಂತರಗಳ ವಿರುದ್ಧ ಬಲವಾದ ಪ್ರತಿರೋಧವನ್ನು ಹೇಗೆ ನಿರ್ಮಿಸುವುದು?
8. ಮತಾಂತರಗೊಂಡ ವ್ಯಕ್ತಿಯನ್ನು ಮರಳಿ ಕರೆತರುವ ಮಾರ್ಗಗಳು ಯಾವುವು?
9. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೇನು?
O Sruthi - Hindi Book Launch
ಹಿಂದಿಯಲ್ಲದೆ, ಈ ಪುಸ್ತಕವನ್ನು ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಿಗೆ ಅನುವಾದಿಸಲಾಗಿದೆ. ಇಂಗ್ಲಿಷ್ ಮತ್ತು ಮಲಯಾಳಂ ಪುಸ್ತಕಗಳು 3 ಆವೃತ್ತಿಗಳನ್ನು ಪೂರ್ಣಗೊಳಿಸಿವೆ.
ಮರಾಠಿ ಪುಸ್ತಕವು ಜುಲೈ 14 ರಂದು ಬಿಡುಗಡೆಯಾದ 1 ತಿಂಗಳೊಳಗೆ ಐತಿಹಾಸಿಕ ಮಾರಾಟವಾಗಿದೆ.
ಶೀಘ್ರದಲ್ಲಿ ಈ ಪುಸ್ತಕವು ಬಿಡುಗಡೆಗೊಳ್ಳಲಿದೆ...

ಈ ಪುಸ್ತಕವನ್ನು ಖರೀದಿಸಲು, ವಾಟ್ಸಪ್: 7356613488