Member   Donate   Books   0

ಆರ್ಷ ವಿದ್ಯಾ ಸಮಾಜಂ ಆಸಕ್ತರನ್ನು ನಮ್ಮೊಂದಿಗೆ ಕೆಲಸ ಮಾಡಲು ಆಹ್ವಾನಿಸುತ್ತದೆ

AVS

ಆರ್ಷ ವಿದ್ಯಾ ಸಮಾಜಂ
ಆರ್ಷ ವಿದ್ಯಾ ಸಮಾಜದ ಸೇವೆ, ಸಬಲೀಕರಣ ಮತ್ತು ಸಂರಕ್ಷಣಾ ಚಟುವಟಿಕೆಗಳನ್ನು ಸಮಾಜದ ತಳಮಟ್ಟಕ್ಕೆ ತಲುಪಿಸುವ ದೌತ್ಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಆಸಕ್ತಿಯಿರುವ ಸಜ್ಜನರನ್ನು ಆಹ್ವಾನಿಸುತ್ತಿದ್ದೇವೆ!!!
ಎರಡು ರೀತಿಯ ಕಾರ್ಯಕರ್ತರನ್ನು ಹುಡುಕುತ್ತಿದ್ದೇವೆ:
ಪೂರ್ಣಾವಧಿ ಕಾರ್ಯಕರ್ತರು (FULL TIME WORKERS)
ಅರೆಕಾಲಿಕ ಕಾರ್ಯಕರ್ತರು (PART TIME WORKERS)
 
1. ಪೂರ್ಣಾವಧಿ ಕಾರ್ಯಕರ್ತರು (FULL TIME WORKERS)
ಪೂರ್ಣಾವಧಿ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು. ಆದರೆ ಅರೆಕಾಲಿಕವಾಗಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರ ಅರ್ಜಿಗಳನ್ನೂ ಸ್ವೀಕರಿಸಲಾಗುವುದು. ಅದನ್ನು ಮೆಸೇಜ್‌ನಲ್ಲಿ ಅಥವಾ ಗೂಗಲ್ ಫಾರ್ಮ್‌ನಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು.
18 ರಿಂದ 65 ವರ್ಷದೊಳಗಿನ ಯಾರು ಬೇಕಾದರೂ (ಸ್ತ್ರೀ-ಪುರುಷ ಭೇದವಿಲ್ಲದೆ) ಅರ್ಜಿ ಸಲ್ಲಿಸಬಹುದು!!
ಆಸಕ್ತಿ, ಅರ್ಹತೆ, ಜ್ಞಾನ, ಗುಣಗಳು ಮತ್ತು ಸಾಮರ್ಥ್ಯವನ್ನು ಪರಿಗಣಿಸಿ ಸ್ವಯಂಸೇವಕರು, ಎಜುಕೇಶನ್ ಅಂಡ್ ಸರ್ವಿಸ್ ಕೋಆರ್ಡಿನೇಟರ್‌ಗಳು (ESC), ಸಂಯೋಜಕರು ಮತ್ತು ಧರ್ಮ ಪ್ರಚಾರಕರಾಗಿ ನೇಮಕ ಮಾಡಲಾಗುವುದು.
ಅರ್ಜಿದಾರರನ್ನು ವಿಡಿಯೋ ಕಾನ್ಫರೆನ್ಸ್ ಅಥವಾ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
 
ತರಬೇತಿ:
ಆಯ್ಕೆಯಾದವರಿಗೆ ಒಂದು ತಿಂಗಳ ಕಾಲ ತಜ್ಞರಿಂದ ತರಬೇತಿ ನೀಡಲಾಗುವುದು. ಸದ್ಯಕ್ಕೆ ಹಿಂದಿ, ಇಂಗ್ಲಿಷ್, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತರಗತಿಗಳು ನಡೆಯಲಿವೆ. ತರಬೇತಿಯ ಅವಧಿಯಲ್ಲಿ ರಜೆ ಅನುಮತಿಸಲಾಗುವುದಿಲ್ಲ. ಆಹಾರ, ವಸತಿ ಮತ್ತು ಕೆಲಸದ ಸಂಬಂಧಿತ ಪ್ರಯಾಣದ ವೆಚ್ಚ ಉಚಿತವಾಗಿರುತ್ತದೆ.
 
ನೇಮಕಾತಿ:
ತರಬೇತಿಯ ಜೊತೆಗೆ ವಿವಿಧ ಪರೀಕ್ಷಾ ವಿಧಾನಗಳಲ್ಲಿ ಅತ್ಯುತ್ತಮ ಶಿಸ್ತು ಮತ್ತು ಕಾರ್ಯಕ್ಷಮತೆಯನ್ನು ಪ್ರದರ್ಶಿಸುವವರಿಗೆ ಮಾತ್ರ ನೇಮಕಾತಿ ನೀಡಲಾಗುವುದು!! ಅವರಿಗೆ ಸಜ್ಜನರ ಸಹಾಯ-ಸಹಕಾರದೊಂದಿಗೆ ಗೌರವಯುತ ಸೇವಾ ವೇತನ ವ್ಯವಸ್ಥೆಯನ್ನು (ದಕ್ಷಿಣೆ ಅಥವಾ ಗೌರವಧನ) ಕಲ್ಪಿಸಲಾಗುವುದು.
ಪೂರ್ಣಾವಧಿ ಕಾರ್ಯಕರ್ತರಾಗಿ ಅರ್ಜಿ ಸಲ್ಲಿಸುವವರಿಗೆ ಬೇಕಾದ ಮೂಲಭೂತ ಅರ್ಹತೆಗಳು:
 
ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ನಿಷ್ಠೆ ಮತ್ತು ಪ್ರತಿಬದ್ಧತೆ.
 
ಸಂಘಟನಾ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಮತ್ತು ಶಿಸ್ತಿನಿಂದ ಕೆಲಸ ಮಾಡುವ ಸಿದ್ಧತೆ.
 
ವೈಯಕ್ತಿಕ ಮತ್ತು ಸಾಮಾಜಿಕ ಗುಣಗಳು.
 
ವಿಶ್ವದ ಎಲ್ಲಿಯಾದರೂ ಕೆಲಸ ಮಾಡಲು ಸಾಧ್ಯವಾಗುವಂತಹ ಸಾಮಾನ್ಯ ದೈಹಿಕ ಮತ್ತು ಮಾನಸಿಕ ಆರೋಗ್ಯ.
 
ಮೂಲಭೂತ ಶಿಕ್ಷಣ.
ಕಂಪ್ಯೂಟರ್, Facebook, WhatsApp, Instagram ನಂತಹ ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಜ್ಞಾನ ಮತ್ತು ಭಾಷಾ ಪ್ರಾವೀಣ್ಯತೆ ಅಪೇಕ್ಷಣೀಯ.
2. ಅರೆಕಾಲಿಕ ಕಾರ್ಯಕರ್ತರು (PART TIME WORKERS)
ಮನೆಯಲ್ಲಿದ್ದೇ ಸನಾತನ ಧರ್ಮ ಸೇವೆಯನ್ನು ಮಾಡಲು ಆಸಕ್ತಿಯಿರುವ ಅರೆಕಾಲಿಕ ಕಾರ್ಯಕರ್ತರಿಗೂ ಸ್ವಾಗತ!
 
ಸೂಕ್ತ ಸಮಯ ಮತ್ತು ಅನುಕೂಲಕ್ಕೆ ಅನುಗುಣವಾಗಿ ಆರ್ಷ ವಿದ್ಯಾ ಸಮಾಜದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವವರನ್ನು (ಉದ್ಯೋಗಿಗಳು, ನಿವೃತ್ತ ವ್ಯಕ್ತಿಗಳು, ವಿದ್ಯಾರ್ಥಿಗಳು, ಗೃಹಿಣಿಯರು) ಆಹ್ವಾನಿಸುತ್ತಿದ್ದೇವೆ. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ನಿಮ್ಮ ಬಿಡುವಿನ ವೇಳೆಗೆ ಅನುಗುಣವಾಗಿ ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ನಿರ್ವಹಿಸಬಹುದಾದ ಜವಾಬ್ದಾರಿಗಳನ್ನು ನೀಡಲಾಗುವುದು.
 
ಆರ್ಷ ವಿದ್ಯಾ ಸಮಾಜವು ನಿಗದಿಪಡಿಸುವ ನಿಬಂಧನೆಗಳಿಗನುಗುಣವಾಗಿ ನೇಮಕಾತಿ ಇರುತ್ತದೆ!!
ಗೂಗಲ್ ರಿಜಿಸ್ಟ್ರೇಷನ್ ಫಾರ್ಮ್ ಲಿಂಕ್: https://forms.gle/kgGrCXHLireZcFv86
ಅರ್ಜಿ ಸಲ್ಲಿಸಲು ಮೇಲೆ ನೀಡಿರುವ ಗೂಗಲ್ ಫಾರ್ಮ್ ಭರ್ತಿ ಮಾಡಿ ಅಥವಾ ನಿಮ್ಮ ವಿವರವಾದ ಬಯೋಡೇಟಾವನ್ನು
7558926603 / 8943006350 ಎಂಬ ಸಂಖ್ಯೆಗೆ ಕಳುಹಿಸಿ!
 
ಧರ್ಮ ಸೇವಾ ಯಜ್ಞದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಸುಸ್ವಾಗತ…!!!
AVS-Coordinators
ಪ್ರೀತಿ ಮತ್ತು ಗೌರವಗಳೊಂದಿಗೆ,
ಆರ್ಷವಿದ್ಯಾ ಸಮಾಜಂ