ಮುಖ್ಯಮಂತ್ರಿಗಳ ಶಿವಗಿರಿ ಪ್ರಭಾಷಣದಲ್ಲಿನ ಸ್ವಾಗತಾರ್ಹವಾದ ಅಂಶಗಳು! – Part 2
(To Read Part 1 – Click Here)
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಶಿವಗಿರಿ ಭಾಷಣ ಸಂಪೂರ್ಣ ತಪ್ಪಾಗಿದೆ ಎಂದು ಕೆಲವರು ಪ್ರಚಾರಿಸುತ್ತಿದ್ದಾರೆ. ಅದನ್ನು ಹಾಗೆ ನೋಡಲು ಸಾಧ್ಯವಿಲ್ಲ. ಕಾರಣ, ವೇದಿಕೆಯಲ್ಲಿ 35 ನಿಮಿಷಗಳ ಕಾಲ ನಡೆದ ಅವರ ಉದ್ಘಾಟನಾ ಭಾಷಣವನ್ನು ನಾನು ಪೂರ್ಣವಾಗಿ ಕೇಳಿದ್ದೇನೆ, ಮತ್ತು ದೇಶಾಭಿಮಾನಿ (03/01/2025) ಪತ್ರಿಕೆಯಲ್ಲಿ “ಗುರುವಿನ ಆಶಯ: ನವಯುಗ ಮಾನವಿಕ ಧರ್ಮ” ಎಂಬ ಶೀರ್ಷಿಕೆಯಲ್ಲಿ ನೀಡಿದ ಮುಖ್ಯಭಾಗಗಳನ್ನೂ ಓದಿದ್ದೇನೆ.
ನಿಷ್ಪಕ್ಷಪಾತವಾಗಿ ಹೇಳಬೇಕಾದರೆ, ಈ ಭಾಷಣದಲ್ಲಿ ಸ್ವಾಗತಾರ್ಹವಾದ, ನಮ್ಮೆಲ್ಲರೂ ಒಪ್ಪಲೇಬೇಕಾದ ಹಲವು ವಿಷಯಗಳಿವೆ. ಅದೇ ರೀತಿ, ಅವರ ಕೆಲವು ವಾದಗಳಿಗೆ ಬಲವಾಗಿ ವಿರೋಧ ವ್ಯಕ್ತಪಡಿಸಬೇಕಾದ ಅಗತ್ಯವಿದೆ. ಕೇರಳದಲ್ಲಿ ವ್ಯಾಪಕವಾಗಿ ನೆಲೆನಿಲ್ಲಿಸಿರುವ ತಪ್ಪುಧಾರಣೆ ಅಥವಾ ಬ್ರೈನ್ ವಾಷಿಂಗ್ ಮೂಲಕ ಸಂಭವಿಸಿರುವ ಕೆಲವು ತಪ್ಪುಗಳಿವು ಎನ್ನುವುದು ವಾಸ್ತವತೆ. ಸತ್ಯಾಂಶಗಳನ್ನು ಬಳಸಿ ಈ ತಪ್ಪುಪ್ರಚಾರಗಳನ್ನು ಸರಿಪಡಿಸಲು ಪ್ರಯತ್ನಿಸೋಣ.
Points that Deserve Recognition:
ವಿವಾದಗಳ ಮಧ್ಯೆ ಶ್ರೀ ಪಿಣರಾಯಿ ವಿಜಯನ್ ಹೇಳಿದ ಕೆಲವು ಮುಖ್ಯ ವಿಷಯಗಳನ್ನು ಕೆಲವರು ಕಾಣುತ್ತಿಲ್ಲ.
“ಲೋಕದ ಹಲವು ಭಾಗಗಳಲ್ಲಿ ಮತದ ಹೆಸರಿನ ಚಿಂತನೆಗಳು ಉಗ್ರವಾದಕ್ಕೂ, ನಂತರ ಭಯೋತ್ಪಾದನೆಗೆ ತಲುಪುವ ವರದಿಗಳು ದಿನನಿತ್ಯವೂ ಬರುತ್ತಿವೆ.
ಜನಾಂಗೀಯ ವಿಭಜನೆಗಳಿಂದ ಮತ್ತು ಅದರ ಆಧಾರದ ಸಂಘರ್ಷಗಳಿಂದ ಲೋಕದ ಹಲವು ಭಾಗಗಳಲ್ಲಿ ದೊಡ್ಡ ರಕ್ತಪಾತಗಳಾಗುತ್ತಿವೆ. ಎಲ್ಲೆಡೆ ಹರಿದುಹೋಗುತ್ತಿರುವುದು ಮಾನವೀಯತೆ,” ಎಂದು ಅವರು ಹೇಳಿದ್ದಾರೆ.
ಸಂಪೂರ್ಣ ಸತ್ಯಸಂಧವಾದ ಈ ಹೇಳಿಕೆಗೆ ಯಾರಿಗೆ ವಿರೋಧವಿದೆ ?
ಆದರೆ, ಯಾವ ಮತದ ಹೆಸರಿನಲ್ಲಿ ನಡೆಯುವ ಚಿಂತನೆಗಳು ಇಂತಹ ಉಗ್ರವಾದ ಮತ್ತು ಭಯೋತ್ಪಾದನೆಗೆ ಜನರನ್ನು ಕೊಂಡೊಯ್ಯುತ್ತಿದೆ ಎಂಬುದನ್ನೂ ಸಹ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕಾಗಿತ್ತು. ಇಂದು ಆಚರಣೆಯಲ್ಲಿಲ್ಲದ / ಯಾರೂ ಪಾಲಿಸದ ಅಥವಾ ಅಸ್ತಿತ್ವದಲ್ಲಿಲ್ಲದ ವರ್ಣಾಶ್ರಮ ವ್ಯವಸ್ಥೆಯ ಹೆಸರಿಂದ ಸನಾತನಧರ್ಮವನ್ನು ಟೀಕಿಸುತ್ತಿರುವುದು ಸರಿಯೇ? ಆದರೆ, ಇಂದಿನ ಜಗತ್ತಿನ ನಿಜವಾದ ಬೆದರಿಕೆ – ಹೆಡೆ ಎತ್ತಿ ಕುಣಿಯುತ್ತಿರುವ ಮತ ಭಯೋತ್ಪಾದನೆಯ ಪ್ರಭಾವ ಕೇಂದ್ರಗಳಾಗಿರುವುದು ಯಾವೆಲ್ಲಾ ಮತಗಳ ಆಶಯಗಳು ಎಂದು ಸೂಚಿಸುವ ಸ್ಪಷ್ಟತೆ ಇರಬೇಕಿತ್ತು ಎನ್ನುವ ಅಭಿಪ್ರಾಯವಿದೆ.
ಗುರುದೇವ ಸಮಾಧಿ ಶತವರ್ಷ (2028) ಸಮೀಪಿಸುತ್ತಿರುವ ಈ ಆಧುನಿಕ ಕಾಲಘಟ್ಟದಲ್ಲೂ ಸಮಾಜಕ್ಕೆ ಮಾತ್ರವಲ್ಲ ಸರ್ಕಾರಕ್ಕೂ ಶ್ರೀ ನಾರಾಯಣ ಗುರುಗಳು ದಾರಿ ತೋರುತ್ತಿದ್ದಾರೆಂದು ಮುಖ್ಯಮಂತ್ರಿ ಹೇಳಿದರು.
ಈಗ ದೇಶಾಭಿಮಾನಿ ದಿನಪತ್ರಿಕೆಯ ಮುಖ್ಯ ಭಾಷಣದ ಶೀರ್ಷಿಕೆಯೇ (3/1/2025) “ಜಾತಿ- ಮತ ಬೇಧಗಳಿಲ್ಲದ ಕಾಲಾತೀತವಾದ ಗುರುದರ್ಶನಂ”. ಗುರು ಧರ್ಮವನ್ನು ಹೊಗಳುವ ಲೇಖನಗಳನ್ನು ಈಗ ಈ ಪ್ರಕಟಣೆಗಳಲ್ಲಿ ನೀಡಲಾಗುತ್ತಿದೆ!
( ಮುಂದುವರೆಯುವುದು…)