ಆಚಾರ್ಯ ಶ್ರೀ ಕೆ.ಆರ್. ಮನೋಜ್ ಜಿರವರು, ನವಂಬರ್ 29 2024ರಂದು – ಶ್ರೀ ಕೊಯಮತ್ತೂರು ಗುಜರಾತಿ ಸಮಾಜದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ, ಆರ್ಷ ವಿದ್ಯಾ ಸಮಾಜದ ಗುರಿ ಮತ್ತು ಚಟುವಟಿಕೆಗಳ ಕುರಿತು ಉಪನ್ಯಾಸ ನೀಡಿದರು. ಇಂದು ಸಮಾಜದ ಮೇಲೆ ದುಷ್ಟಪ್ರಭಾವ ಬೀರುತ್ತಿರುವ ಆರು ರೀತಿಯ ಬ್ರೈನ್ ವಾಷಿಂಗ್ ದುಷ್ಟ ಶಕ್ತಿಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ತಡೆದು ಎದುರಿಸಬೇಕು ಎನ್ನುವುದು ಉಪನ್ಯಾಸದ ಮುಖ್ಯಾಂಶವಾಗಿತ್ತು.
ಕಾರ್ಯಕ್ರಮದಲ್ಲಿ ಡಾ. ಅನಘಾ ಜಿರವರು, ತಮ್ಮ ಮತಾಂತರದ ಮತ್ತು ಸನಾತನಧರ್ಮಕ್ಕೆ ಮರಳಿದ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮವು ಒ. ಶ್ರುತಿ ಜಿರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ಬಳಿಕ ಶ್ರೀ ಜಯಕುಮಾರ್ ಜಿರವರು ಸ್ವಾಗತ ಭಾಷಣ ಮತ್ತು ಧನ್ಯವಾದ ಸಮರ್ಪಣೆಯನ್ನು ಮಾಡಿದರು.
ಶ್ರೀ ರಾಮನ್ ಜಿರವರು (ಮಾಜಿ ಆಡಳಿತಾಧಿಕಾರಿ, ಆರ್ಷ ವಿದ್ಯಾ ಗುರುಕುಲಂ) ಆಚಾರ್ಯ ಜಿರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಶ್ರೀ ರಾಜೇಶ್ ಮೋದಿ ಜಿರವರು (ಕಾರ್ಯದರ್ಶಿ, ಶ್ರೀ ಕೊಯಮತ್ತೂರು ಗುಜರಾತಿ ಸಮಾಜ) ಅವರ ಸನಾತನಧರ್ಮದ ಸೇವೆಯನ್ನು ಪರಿಗಣಿಸಿ ಸ್ಮರಣಚಿಹ್ನೆ ನೀಡಿದರು.