ಮುಖ್ಯಮಂತ್ರಿಗಳ ಟೀಕೆಗಳು! - ಮೂರನೇ ಲೇಖನ
ಮುಖ್ಯಮಂತ್ರಿಗಳ ಮಾತುಗಳಲ್ಲಿ ಕೆಲವು ಸ್ವಾಗತಾರ್ಹವಾದ ಬದಲಾವಣೆಗಳಿವೆ ಎಂದು ನಾನು ಫೇಸ್ಬುಕ್‌ನಲ್ಲಿ 2025 ಜನವರಿ 7ರಂದು ಪ್ರಕಟಿಸಿದ ಎರಡನೇ ಲೇಖನದಲ್ಲಿ ಸೂಚಿಸಿದ್ದೆ.
ಮಹಾತ್ಮ ಗಾಂಧಿಯವರ ಮೇಲೆ ಶ್ರೀನಾರಾಯಣ ಗುರುದೇವರ ಪ್ರಭಾವ ಮತ್ತು ಕಾಕಿನಡಾ ಕಾಂಗ್ರೆಸ್ ಸಮ್ಮೇಳನದಲ್ಲಿ ಜಾತಿ ತಾರತಮ್ಯವನ್ನು ನಿಷೇಧಿಸುವ ನಿರ್ಣಯ ಪ್ರಸ್ತಾಪಿಸಿದ್ದರ ಹಿಂದಿನ ಗುರುವಿನ ಪ್ರಭಾವ ಹಾಗೂ ಟಿ.ಕೆ.ಮಾಧವನ್ ಅವರ ಕೊಡುಗೆಯ ಕುರಿತು ಮುಖ್ಯಮಂತ್ರಿಯು ಸೂಚಿಸಿದ್ದರು. ಇವೆಲ್ಲವೂ ಪಕ್ಷದ ಹಳೆಯ ನಿಲುವಿನಿಂದ ಆರೋಗ್ಯಕರವಾದ ಬೆಳವಣಿಗೆ ಎಂದು ಕಾಣಬಹುದು.
ಆದರೆ ಮುಖ್ಯಮಂತ್ರಿಗಳ ಕೆಲವು ಅಭಿಪ್ರಾಯಗಳಿಗೆ ನಾನು ಒಪ್ಪಿಗೆ ನೀಡಲು ಸಾಧ್ಯವಿಲ್ಲ. ಈ ಟೀಕೆಗಳನ್ನು ಗಮನಿಸೋಣ:
1. “ಶ್ರೀನಾರಾಯಣಗುರು ಸನಾತನಧರ್ಮದ ವಕ್ತಾರರೊ ಅಭ್ಯಾಸಿಯೊ ಆಗಿರಲಿಲ್ಲ, ಬದಲಿಗೆ, ಅವರು ಈ ಧರ್ಮವನ್ನು ಚೂರುಗಡಿದು ನವೀಕರಿಸಿ, ಹೊಸ ಕಾಲಕ್ಕೆ ತಕ್ಕ ನವಯುಗಧರ್ಮವನ್ನು ಸಾರಿದ ಸನ್ಯಾಸಿಯಾಗಿದ್ದರು. ಸನಾತನಧರ್ಮವನ್ನು ಅನುಸರಿಸುವ, ಅನುಮಾನದಿಂದ ನೋಡುವ ಮತ್ತು ಅದನ್ನು ಎದುರಿಸಿ(ಪ್ರಶ್ನಿಸಿ) ದಿಕ್ಕರಿಸುವ ಮೂರು ಪ್ರಭೇದಗಳು ಭಾರತದೊಳಗಿದ್ದವು. ಇದರಲ್ಲಿ ಮೂರನೆಯ ಪ್ರಭೇದವನ್ನು ಪ್ರತಿನಿಧಿಸಿದ್ದವರು ನಾರಾಯಣ ಗುರು.”
ಅದನ್ನು ಸನಾತನಧರ್ಮದ ಚೌಕಟ್ಟಿನಲ್ಲಿ ಸೇರಿಸಲು ಯತ್ನಿಸಿದರೆ ಅದು ಗುರುವಿಗೆ ಮಾಡುವ ಬಹಳ ದೊಡ್ಡ ಅಗೌರವವೆನಿಸಿಕೊಳ್ಳುತ್ತದೆ,” ಎಂದು ಮುಂದುವರೆಸಿದರು.
ಸಂಕ್ಷಿಪ್ತವಾಗಿ, ಇವು ಶ್ರೀ ಪಿಣರಾಯಿ ವಿಜಯನ್ ಅವರ ಪ್ರಮುಖ ಸನಾತನಧರ್ಮದ ವಿರುದ್ಧದ ಟೀಕೆಗಳು. ಈ ಆರೋಪಗಳಿಗೆಲ್ಲಾ ಒಂದೊಂದಾಗಿ ಉತ್ತರ ಮತ್ತು ವಿವರಗಳನ್ನು ನೀಡಬಹುದು. ಆದರೆ ಮುಖ್ಯಮಂತ್ರಿಗೆ ಉತ್ತರ ನೀಡುವುದು ಮಾತ್ರ ಈ ಲೇಖನಸರಣಿಯ ಉದ್ದೇಶ ಎಂದು ಊಹಿಸಬಾರದು. ಇಂದಿನ ಸಾಮಾನ್ಯ ಜನರಲ್ಲಿ ಬೇರು ಬಿಟ್ಟಿರುವ ಕೆಲವು ತಪ್ಪುಕಲ್ಪನೆಗಳನ್ನು ಮತ್ತು ದುಷ್ಟಪ್ರಚಾರಗಳನ್ನು ಸಾಧ್ಯವಾದಷ್ಟು ಪುರಾವೆಗಳು ಹಾಗು ಅಧಿಕೃತ ಸಂಗತಿಗಳ ಮೂಲಕ ಸರಿಪಡಿಸುವ ಪ್ರಯತ್ನವಿದು. ಸತ್ಯಾನ್ವೇಷಣೆಯಲ್ಲಿ ಆಸಕ್ತಿಯಿರುವವರೆಲ್ಲಾ ಈ ಚರ್ಚೆಗೆ ಸ್ವಾಗತ. ವಿವಿಧ ಅಭಿಪ್ರಾಯಗಳು ಮತ್ತು ಸಂಶಯಗಳಿಗೆ ಉತ್ತರ ನೀಡಲು ಸಿದ್ಧನಿದ್ದೇನೆ. ಆರೋಗ್ಯಕರ ಟೀಕೆಗಳನ್ನು ಸ್ವೀಕರಿಸುತ್ತೇನೆ.
ಶ್ರೀ ಪಿಣರಾಯಿ ವಿಜಯನ್ ಅವರ ಮೊದಲ ಟೀಕೆಯನ್ನು ತೆಗೆದುಕೊಳ್ಳೋಣ. ಅದು ಈ ಕೆಳಗಿನಂತಿದೆ:
(1) “ಶ್ರೀನಾರಾಯಣ ಗುರು ಸನಾತನಧರ್ಮದ ವಕ್ತಾರರೊ- ಅಭ್ಯಾಸಿಯೊ ಆಗಿರಲಿಲ್ಲ, ಬದಲಾಗಿ ಆ ಧರ್ಮವನ್ನು ಚೂರುಗಡಿದು ನವೀಕರಿಸಿ, ಹೊಸ ಕಾಲಕ್ಕೆ ತಕ್ಕಂತೆ ಒಂದು ನವಯುಗಧರ್ಮವನ್ನು ಸಾರಿದ ಸಂನ್ಯಾಸಿ ಶ್ರೇಷ್ಠನಾಗಿದ್ದರು. ಸನಾತನಧರ್ಮವನ್ನು ಅನುಸರಿಸುವ, ಸಂಶಯದಿಂದ ನೋಡುವ ಮತ್ತು ಸವಾಲು ಹಾಕಿ ಧಿಕ್ಕರಿಸುವ ಮೂರು ಪ್ರಭೇದಗಳು ಭಾರತದೊಳಗಿದ್ದವು. ಇದರಲ್ಲಿ ಮೂರನೆಯ ಪ್ರಭೇದವನ್ನು ಪ್ರತಿನಿಧಿಸಿದ್ದವರು ನಾರಾಯಣ ಗುರು.”
ಈ ಹೇಳಿಕೆ ವಾಸ್ತವಿಕವಾಗಿದೆಯೇ?
**ಗುರುದೇವರ ಅಪರೂಪದ ಕೊಡುಗೆಗಳು!**
**ಗುರುದೇವರ ದೇವಸ್ಥಾನ ಮಾದರಿಗಳು!**
ಹೀಗೆ ಪ್ರತಿಷ್ಠೆ ಮಾಡಿದ ‘ಹಿಂದಿನ ವರ್ಗ’ದವರಲ್ಲಿ ಶ್ರೀ ನಾರಾಯಣಗುರು ಮೊದಲನೆಯವರಲ್ಲ. ಓಮಲನ್ ಎಂಬ ಪುಲಯ ವರ್ಗಕ್ಕೆ ಸೇರಿದ ಯುವ ಯೋಗಿಯೂ ಮತ್ತು ಆರಾಟುಪುಝ ವೇಲಾಯುಧ ಪಣಿಕ್ಕರೂ ಗುರುದೇವರಿಗು ಮುಂಚೆಯೇ ಶಿವಲಿಂಗ ಪ್ರತಿಷ್ಠೆ ನಡೆಸಿರುವವರು. (ಆರಾಟುಪುಝ ವೇಲಾಯುಧ ಪಣಿಕ್ಕರ್ ದೇವಾಲಯ ನಿರ್ಮಾಣದ ಮೇಲ್ವಿಚಾರಣೆ ಮಾತ್ರ ವಹಿಸಿದ್ದರು) ಆದರೆ ಶುದ್ಧ ತಂತ್ರವಿಧಿ ಪ್ರಕಾರದ ದೇವಾಲಯ ಮಾದರಿಗಳನ್ನು ವ್ಯಾಪಕವಾಗಿ ನಿರ್ಮಿಸಿ, ಅವುಗಳೊಂದಿಗೆ ನವೋತ್ಥಾನ – ಸಾಮಾಜಿಕ ಪರಿಷ್ಕರಣೆ – ಶಿಕ್ಷಣ – ಉದ್ಯೋಗ – ಕೈಗಾರಿಕೆ – ಸೇವಾ ಯೋಜನೆಗಳನ್ನು ಪ್ರಾರಂಭಿಸಿದ್ದು ಶ್ರೀ ನಾರಾಯಣಗುರುವಿನ ದೇವಾಲಯ ಮಾದರಿಯ ವಿಶೇಷತೆಯಾಗಿದೆ. “ಕ್ಷಯಾತ್ ತ್ರಾಯತೇ ಇತಿ ಕ್ಷೇತ್ರ:” (ವ್ಯಕ್ತಿಯನ್ನೂ ಸಮಾಜವನ್ನೂ ಎಲ್ಲಾ ರೀತಿಯ ಕಷ್ಟಗಳಿಂದ ಮುಕ್ತಿ ನೀಡುವ ಸ್ಥಳವಾಗಿರಬೇಕು ದೇವಾಲಯ) ಎಂಬುದು ಆರ್ಷ ಧರ್ಮವು ಅನುಶಾಸಿಸುತ್ತದೆ, ಅದಕ್ಕೆ ಅನುಗುಣವಾಗಿ ಎಲ್ಲಾ ಯೋಜನೆಗಳನ್ನು ಅವರು ರೂಪಿಸಿದ್ದರು.
“ದೇವಾಲಯದಲ್ಲಿ ಆನೆ ಬೇಕಿಲ್ಲ, ಪಟಾಕಿಯೂ ಬೇಡ” ಎಂದು ಅವರು ಸೂಚಿಸಿದರು. ದೇವಾಲಯದ ಸಮೀಪದಲ್ಲಿನ ಮೃಗಬಲಿ, ಮದ್ಯನಿವೇದನೆ, ದೇವರ ಹೆಸರಲ್ಲಿ ಕುಣಿಯುವುದು ಮುಂತಾದ ಕ್ರಿಯೆಗಳನ್ನು ನಿಲ್ಲಿಸಿದರು. ಅನಾವಶ್ಯಕ ಹಾಗೂ ಆರ್ಭಟದ ವಿಧಿಗಳ ಬದಲಾಗಿ ಸರಳ ಹಾಗೂ ಭಕ್ತಿ ಭರಿತ ವ್ಯವಸ್ಥೆಯನ್ನು ರಚಿಸಿದರು. ದೇವಾಲಯಗಳ ಸಮೀಪದಲ್ಲಿಯೇ ಹೂದೋಟ, ಗ್ರಂಥಾಲಯ, ಶಾಲೆ, ಕೈಗಾರಿಕೆ-ಉದ್ಯೋಗ ಸಂಸ್ಥೆಗಳನ್ನು ನಿರ್ಮಿಸಿದರು. ಜಾತಿಶುದ್ಧಿಯ ಬದಲು ವ್ಯಕ್ತಿ – ಸಮಾಜ ಶುದ್ಧತೆಗೆ ಮಹತ್ವ ನೀಡಿ ಸ್ನಾನಘಟಕಗಳನ್ನು ವ್ಯವಸ್ಥಿತಗೊಳಿಸಿದರು.
ದೇವಾಲಯವನ್ನು ದೇವದರ್ಶನಕ್ಕಷ್ಟೇ ಬಳಸಬಾರದು ಎಂಬ ದೃಷ್ಟಿಕೋನವನ್ನು ಗುರುದೇವ ಹೊಂದಿದ್ದರು. ಅರುವಿಪುರಂ ದೇವಾಲಯದ ಸಮೀಪ ಸ್ಥಾಪಿಸಿದ್ದ ಕ್ಷೇತ್ರ ವಾವೂಟ್ಟುಯೋಗವು ನಂತರ ಎಸ್‌ಎನ್‌ಡಿಪಿ ಯೋಗವಾಗಿ ಪರಿವರ್ತಿತವಾಯಿತು. ಸಂಘಟನೆ ಮತ್ತು ಜಾಗೃತಿಗೆ ಅನುಕೂಲವಾಗುವಂತೆ ದೇವಾಲಯದ ಜೊತೆಗೆ ನಿರ್ವಹಣಾ ವ್ಯವಸ್ಥೆಗಾಗಿ ಅನೇಕ ಸಭೆಗಳನ್ನು ಸ್ಥಾಪಿಸಿದರು. ಅಲ್ಲೆಲ್ಲಾ ಸತ್ಸಂಗಗಳು, ಆಧ್ಯಾತ್ಮಿಕ ಉಪನ್ಯಾಸಗಳನ್ನು ನಡೆಸಲು ವ್ಯವಸ್ಥೆ ಮಾಡಿದರು. ದೇವಾಲಯದ ಆದಾಯದಿಂದ ಧರ್ಮಪ್ರಚಾರಕರಿಗೆ ತರಬೇತಿ ನೀಡಲು ಮತ್ತು ಧರ್ಮಪ್ರಚಾರಕ್ಕಾಗಿ ನಿಧಿ ಮೀಸಲಾಗಿಡುವಂತೆ ಗುರುದೇವ ಸೂಚಿಸಿದ್ದರು. ಗುರುದೇವರ ಈ ಸೂಚನೆಯ ಮಹತ್ವವನ್ನು ಈಗಲೂ ಹಲವರು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರೆಯೇ ಎಂಬುದು ಸಂಶಯ. ನೂತನ ಸನ್ಯಾಸ – ಸಂಸ್ಥಾನ – ಸಂಘಟನಾ ಮಾದರಿಗಳು, ಅನಾಚಾರ ನಿವಾರಣಾ ಪ್ರಯತ್ನಗಳು ಇವೆಲ್ಲವೂ ಅವರ ವಿಶೇಷ ಕೊಡುಗೆಗಳು ಎನ್ನುವುದು ಸತ್ಯ.
ಜೊತೆಗೆ, ಸನಾತನಧರ್ಮದ ಕಾಲಕ್ಕೆ ತಕ್ಕಂತಹ ವ್ಯಾಖ್ಯಾನಗಳು ಮತ್ತು ಅವನತಿ ನಿವಾರಣೆಗೆ ನಡೆದ ಕ್ರಿಯೆಗಳಲ್ಲಿ ಈ ಎಲ್ಲವೂ ಸೇರಿದ್ದವು. ಅವು ಕಾಲದ ಸವಾಲುಗಳನ್ನು ಅರ್ಥಮಾಡಿಕೊಂಡು ನಡೆದ ಹಿಂದೂಧರ್ಮ ಸಂರಕ್ಷಣೆಗಾಗಿ ಮಾಡಿದ ಕಾರ್ಯಚಟುವಟಿಕೆಗಳಾಗಿದ್ದವು. ಆಂತರಿಕ ಮತ್ತು ಬಾಹ್ಯವಾಗಿ ವ್ಯಾಪಿಸಿದ್ದ ಅಜ್ಞಾನದ ವಿರುದ್ಧ ಧೀರವಂತ ಹೋರಾಟವದು.
ಕೆಲವು ಪ್ರಶ್ನೆಗಳು:
ನಾಲ್ಕು ವೇದಗಳು ಭಿನ್ನಾಭಿಪ್ರಾಯಗಳಿಲ್ಲದೆ ಒಂದೇ ಸತ್ಯವನ್ನು ಹೊಗಳುತ್ತವೆ – ದುರವಸ್ಥಾ ಎನ್ನುವ ಕೃತಿಯಲ್ಲಿ ಕುಮಾರನ್ ಆಶಾನ್ ಸೂಚಿಸುತ್ತಾರೆ.
ಸನಾತನಧರ್ಮದ ಆರ್ಷಗುರುಪರಂಪರೆಗಳು, ವೇದೋಪನಿಷತ್ತುಗಳು, ಸಿದ್ಧರು ಬರೆದ ದಿವ್ಯಸ್ತೋತ್ರಗಳು, ಪರಬ್ರಹ್ಮ ಅಥವಾ ಪರಮೇಶ್ವರನ ಏಕತ್ವದರ್ಶನವು, ಸರ್ವವ್ಯಾಪಿ ಸಿದ್ಧಾಂತ, ಸರ್ವಾಂತರ್ಯಾಮಿ ಸಿದ್ಧಾಂತ, ಪ್ರಕೃತಿ-ಪುರುಷ ಅಭೇದದರ್ಶನ (ಅದ್ವೈತ ದರ್ಶನ) ಎಲ್ಲವೂ ಸ್ಪಷ್ಟವಾಗಿ ಘೋಷಿಸುತ್ತವೆ. ಇದಕ್ಕೆ ಸಾವಿರಾರು ಬೆಳಗಿನ ಉದಾರಣೆಗಳನ್ನು ಸೂಚಿಸುಲು ಸಾಧ್ಯತೆವಿದೆ.
ಎಲ್ಲಾ ಲೋಕಗಳಲ್ಲು ಪರಮೇಶ್ವರನು (ಪರಬ್ರಹ್ಮ) ವ್ಯಾಪಿಸಿದ್ದಾನೆ ಎಂಬ ಸಿದ್ಧಾಂತವೇ ಸರ್ವವ್ಯಾಪಿ ಸಿದ್ಧಾಂತ. ಸಚೇತನ ಮತ್ತು ಅಚೇತನ ವಸ್ತುಗಳಲ್ಲಿ (ಅಣುವಿನಿಂದಲೇ) ಆತ್ಮಸ್ವರೂಪದಲ್ಲಿ (ಜೀವನ್ ಅಲ್ಲ ಆತ್ಮ!) ನೆಲೆಸಿದೆ ಎನ್ನುವ ದರ್ಶನವೇ ಸರ್ವಾಂತರ್ಯಾಮಿ ಸಿದ್ಧಾಂತ. ಅಷ್ಟೇಯಲ್ಲ, ಜೀವಿಗಳಲ್ಲಿ (ಜೀವಯಿರುವ ಮತ್ತು ಜೀವಯಿಲ್ಲದ) – ಪ್ರಕೃತಿ ಮತ್ತು ಈಶ್ವರ ಎಲ್ಲವೂ ಒಂದೇ ಎನ್ನುವ ದರ್ಶನವೇ ಅದ್ವೈತ ವೇದಾಂತ ಸಾರ. ಅಂದರೆ ಮೂಲಭೂತವಾಗಿ(ಕೊನೆಯದಾಗಿ) ಈಶ್ವರನಲ್ಲದೆ ಬೇರೇನು ಅಲ್ಲ.
ತತ್ವಮಸಿ, ಪ್ರಜ್ಞಾನಂ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ಅಯಮಾತ್ಮ ಬ್ರಹ್ಮ, ಸೋಹಂ, ಹಂಸ, ಶಿವೋಹಂ- ಹೀಗೆ ಅನೇಕ ಪವಿತ್ರವಾಕ್ಯಗಳು!
ಸನಾತನಧರ್ಮ ಅಲ್ಲದೆ ಬೇರೆಲ್ಲೂ ಸಿಗದ ಈ ಉಜ್ವಲ ದರ್ಶನಗಳನ್ನು ಯಾರಿಗೆ ನಿರಾಕರಿಸಲು ಸಾಧ್ಯ? ಆದರೆ, ಅಂದಿನ ಸಾಂಪ್ರದಾಯವಾದಿಗಳು – ಜಾತಿವಿರೋಧಿವಾದಿಗಳು ಸನಾತನ ಧರ್ಮಕ್ಕೆ ಏನು ಮಾಡಿರುವರು?
(ಮುಂದುವರೆಯುತ್ತದೆ. . .)