Skip to content

Sanathana Dharma – Response to Pinarayi Vijayan and MV Govindan by Aacharyasri KR Manoj ji – Part 2

  • by

ಮುಖ್ಯಮಂತ್ರಿಗಳ ಶಿವಗಿರಿ ಪ್ರಭಾಷಣದಲ್ಲಿನ ಸ್ವಾಗತಾರ್ಹವಾದ ಅಂಶಗಳು! – Part 2

(
To Read Part 1 – Click Here)

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಶಿವಗಿರಿ ಭಾಷಣ ಸಂಪೂರ್ಣ ತಪ್ಪಾಗಿದೆ ಎಂದು ಕೆಲವರು ಪ್ರಚಾರಿಸುತ್ತಿದ್ದಾರೆ. ಅದನ್ನು ಹಾಗೆ ನೋಡಲು ಸಾಧ್ಯವಿಲ್ಲ. ಕಾರಣ, ವೇದಿಕೆಯಲ್ಲಿ 35 ನಿಮಿಷಗಳ ಕಾಲ ನಡೆದ ಅವರ ಉದ್ಘಾಟನಾ ಭಾಷಣವನ್ನು ನಾನು ಪೂರ್ಣವಾಗಿ ಕೇಳಿದ್ದೇನೆ, ಮತ್ತು ದೇಶಾಭಿಮಾನಿ (03/01/2025) ಪತ್ರಿಕೆಯಲ್ಲಿ “ಗುರುವಿನ ಆಶಯ: ನವಯುಗ ಮಾನವಿಕ ಧರ್ಮ” ಎಂಬ ಶೀರ್ಷಿಕೆಯಲ್ಲಿ ನೀಡಿದ ಮುಖ್ಯಭಾಗಗಳನ್ನೂ ಓದಿದ್ದೇನೆ.

ನಿಷ್ಪಕ್ಷಪಾತವಾಗಿ ಹೇಳಬೇಕಾದರೆ, ಈ ಭಾಷಣದಲ್ಲಿ ಸ್ವಾಗತಾರ್ಹವಾದ, ನಮ್ಮೆಲ್ಲರೂ ಒಪ್ಪಲೇಬೇಕಾದ ಹಲವು ವಿಷಯಗಳಿವೆ. ಅದೇ ರೀತಿ, ಅವರ ಕೆಲವು ವಾದಗಳಿಗೆ ಬಲವಾಗಿ ವಿರೋಧ ವ್ಯಕ್ತಪಡಿಸಬೇಕಾದ ಅಗತ್ಯವಿದೆ. ಕೇರಳದಲ್ಲಿ ವ್ಯಾಪಕವಾಗಿ ನೆಲೆನಿಲ್ಲಿಸಿರುವ ತಪ್ಪುಧಾರಣೆ ಅಥವಾ ಬ್ರೈನ್ ವಾಷಿಂಗ್ ಮೂಲಕ ಸಂಭವಿಸಿರುವ ಕೆಲವು ತಪ್ಪುಗಳಿವು ಎನ್ನುವುದು ವಾಸ್ತವತೆ. ಸತ್ಯಾಂಶಗಳನ್ನು ಬಳಸಿ ಈ ತಪ್ಪುಪ್ರಚಾರಗಳನ್ನು ಸರಿಪಡಿಸಲು ಪ್ರಯತ್ನಿಸೋಣ.

ಸ್ವಾಗತಾರ್ಹವಾದ ಹಾಗೂ ವಿರೋಧಿಸಬೇಕಾದ ಎರಡೂ ಅಂಶಗಳನ್ನು ಪ್ರತ್ಯೇಕವಾಗಿ ಇಲ್ಲಿ ದಾಖಲಿಸುತ್ತೇನೆ. ಸ್ವಾಗತಾರ್ಹ ನಿಲುವುಗಳು
Sree-Narayana-Guru-Read

Points that Deserve Recognition:

ವಿವಾದಗಳ ಮಧ್ಯೆ ಶ್ರೀ ಪಿಣರಾಯಿ ವಿಜಯನ್ ಹೇಳಿದ ಕೆಲವು ಮುಖ್ಯ ವಿಷಯಗಳನ್ನು ಕೆಲವರು ಕಾಣುತ್ತಿಲ್ಲ.

1) ಮತ ಭಯೋತ್ಪಾದನೆಯ ಕುರಿತಾದ ಮುಖ್ಯಮಂತ್ರಿಗಳ ಅಭಿಪ್ರಾಯ ಪ್ರಸ್ತುತವಾಗಿದೆ.

“ಲೋಕದ ಹಲವು ಭಾಗಗಳಲ್ಲಿ ಮತದ ಹೆಸರಿನ ಚಿಂತನೆಗಳು ಉಗ್ರವಾದಕ್ಕೂ, ನಂತರ ಭಯೋತ್ಪಾದನೆಗೆ ತಲುಪುವ ವರದಿಗಳು ದಿನನಿತ್ಯವೂ ಬರುತ್ತಿವೆ.

ಜನಾಂಗೀಯ ವಿಭಜನೆಗಳಿಂದ ಮತ್ತು ಅದರ ಆಧಾರದ ಸಂಘರ್ಷಗಳಿಂದ ಲೋಕದ ಹಲವು ಭಾಗಗಳಲ್ಲಿ ದೊಡ್ಡ ರಕ್ತಪಾತಗಳಾಗುತ್ತಿವೆ. ಎಲ್ಲೆಡೆ ಹರಿದುಹೋಗುತ್ತಿರುವುದು ಮಾನವೀಯತೆ,” ಎಂದು ಅವರು ಹೇಳಿದ್ದಾರೆ.

ಸಂಪೂರ್ಣ ಸತ್ಯಸಂಧವಾದ ಈ ಹೇಳಿಕೆಗೆ ಯಾರಿಗೆ ವಿರೋಧವಿದೆ ?

ಆದರೆ, ಯಾವ ಮತದ ಹೆಸರಿನಲ್ಲಿ ನಡೆಯುವ ಚಿಂತನೆಗಳು ಇಂತಹ ಉಗ್ರವಾದ ಮತ್ತು ಭಯೋತ್ಪಾದನೆಗೆ ಜನರನ್ನು ಕೊಂಡೊಯ್ಯುತ್ತಿದೆ ಎಂಬುದನ್ನೂ ಸಹ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕಾಗಿತ್ತು. ಇಂದು ಆಚರಣೆಯಲ್ಲಿಲ್ಲದ / ಯಾರೂ ಪಾಲಿಸದ ಅಥವಾ ಅಸ್ತಿತ್ವದಲ್ಲಿಲ್ಲದ ವರ್ಣಾಶ್ರಮ ವ್ಯವಸ್ಥೆಯ ಹೆಸರಿಂದ ಸನಾತನಧರ್ಮವನ್ನು ಟೀಕಿಸುತ್ತಿರುವುದು ಸರಿಯೇ? ಆದರೆ, ಇಂದಿನ ಜಗತ್ತಿನ ನಿಜವಾದ ಬೆದರಿಕೆ – ಹೆಡೆ ಎತ್ತಿ ಕುಣಿಯುತ್ತಿರುವ ಮತ ಭಯೋತ್ಪಾದನೆಯ ಪ್ರಭಾವ ಕೇಂದ್ರಗಳಾಗಿರುವುದು ಯಾವೆಲ್ಲಾ ಮತಗಳ ಆಶಯಗಳು ಎಂದು ಸೂಚಿಸುವ ಸ್ಪಷ್ಟತೆ ಇರಬೇಕಿತ್ತು ಎನ್ನುವ ಅಭಿಪ್ರಾಯವಿದೆ.

ಹಾಗೆಯೇ ಪ್ಯಾಲೆಸ್ಟೈನ್, ಅಫ್ಘಾನಿಸ್ತಾನ, ಮಣಿಪುರ ಮುಂತಾದ ಸ್ಥಳಗಳ ಪೈಕಿ ಬಾಂಗ್ಲಾದೇಶವನ್ನು ತೆಗೆದುಹಾಕಿರುವುದು ಸರಿಯಲ್ಲ.
Pinarayi Vijayan @ Shivagiri
2) ವಿಚಾರಗಳನ್ನು ಪರಿಶೀಲಿಸುವುದು ಹೇಗೆ?

“ಒಂದು ವಿಚಾರವನ್ನು ನಾವು ಅನುಸರಿಸಬೇಕಾದದ್ದು, ಅದು ಲೋಕಕ್ಕೆ ಬೆಳಕು ನೀಡಿದಾಗ ಮತ್ತು ಅದು ಮನುಷ್ಯ ಜೀವನವನ್ನು ಸುಧಾರಿಸಿದಾಗ ಮಾತ್ರ. ಅದೇ ವಿಚಾರದಿಂದಾಗಿ ಮನುಷ್ಯ ದುಃಖಕ್ಕೆ ಒಳಗಾದರೆ ಅಥವಾ ಬಳಲಲು ಶುರು ಮಾಡಿದರೆ, ಆ ವಿಚಾರವನ್ನು ನಾವು ಸ್ವಾಭಾವಿಕವಾಗಿ ದೂರ ಮಾಡಬೇಕು” ಎಂದು ಅವರು ಹೇಳಿದರು.

ಒಂದು ವಿಚಾರವನ್ನು ಪರಿಗಣಿಸಬೇಕಾದದ್ದು ಅದು ವ್ಯಕ್ತಿಗು ಮತ್ತು ಸಮಾಜಕ್ಕು ಎಷ್ಟರ ಮಟ್ಟಿಗೆ ಪ್ರಯೋಜನಕಾರಿಯಾಗಿದೆ ಎಂಬುದರ ಆಧಾರದಿಂದಾಗಿರಬೇಕು. ಇದೇ ಸನಾತನಧರ್ಮವು ದಾರ್ಶನಿಕರು ಮುಂದೆಡುವ ಪರೀಕ್ಷಾ ವಿಧಾನ. ಸನಾತನಧರ್ಮದ ಸತ್ಯ ನಿರ್ಣಯ ಮಾನದಂಡವೇ ಸ್ವಾಧ್ಯಾಯ ಸಂಪ್ರದಾಯದ ಈ ಪ್ರಾಯೋಜನಪರೀಕ್ಷೆ.
(ಅನುಬಂಧ ಚತುಷ್ಟಯ: ವಿಷಯ, ಸಂಬಂಧ, ಪ್ರಯೋಜನ, ಅಧಿಕಾರಿ) ಇದನ್ನೇ ಶ್ರೀ ಪಿಣರಾಯಿ ವಿಜಯನ್ ಹೇಳಿರುವುದು.

ಹೀಗೆ ಸತ್ಯಸಂಧವಾಗಿ ಮೌಲ್ಯಮಾಪನ ಮಾಡಿದರೆ, ಹಲವು ಮತಗಳಿಂದ ಮತ್ತು ರಾಜಕೀಯ ಸಿದ್ಧಾಂತಳಿಂದ ದೂರವಿರಬೇಕಾದ ಪರಿಸ್ಥಿತಿ ಬರುತ್ತದೆ ಎನ್ನುವುದು ಮತ್ತೊಂದು ವಾಸ್ತವತೆ.
3) ಶ್ರೀನಾರಾಯಣ ಗುರುವಿನ ಮಹತ್ವ, ಗುರು ಧರ್ಮದ ಸಮಕಾಲಿನ ಪ್ರಸ್ತುತತೆ ಮತ್ತು ಶಿವಗಿರಿ ತೀರ್ಥಯಾತ್ರೆಯ ಹಿರಿಮೆ ಮುಂತಾದವನ್ನು ಒಪ್ಪಿಕೊಂಡ ಶ್ರೀ ಪಿಣರಾಯಿ ವಿಜಯನ್:
ಶ್ರೀ ನಾರಾಯಣ ಗುರುದೇವರ, ಶಿವಗಿರಿಯ ಮತ್ತು ಶಿವಗಿರಿ ತೀರ್ಥಯಾತ್ರೆಯ ಪ್ರಸ್ತುತತೆ ಮತ್ತು ಮಹತ್ವವನ್ನು ಒಪ್ಪುತ್ತಲೆ ಮುಖ್ಯಮಂತ್ರಿ ಮಾತನಾಡಿದ್ದು
“ಕಾಲಾತೀತವಾದ ಗುರುಧರ್ಮವು ಲೋಕಕ್ಕೆ ಬೆಳಕು ನೀಡುತ್ತಿದೆ,”
ಎಂದು ಅವರು ಮುಂದುವರೆಯುತ್ತಾ. “ಹಾಗೆ ಎಷ್ಟೆಲ್ಲಾ ವಿಚಾರಗಳು ಕಾಲಕ್ಕೆ ತಕ್ಕಂತೆ ನವೀಕರಿಸಿದ ಕಾರಣ ಮರೆಯಾಗಿವೇ, ಆದರೆ ಶ್ರೀನಾರಾಯಣ ಗುರುವಿನ ಚಿಂತನೆಗಳು, ಅವರು ಹುಟ್ಟಿ ಬದುಕಿದ ಸಹಸ್ರಮಾನ ಯುಗವನ್ನು ದಾಟಿ ಲೋಕಕ್ಕೆಲ್ಲ ಬೆಳಕು ನೀಡುತ್ತಿವೆ. ಇದರಲ್ಲಿ ಶ್ರೀ ನಾರಾಯಣ ಗುರುವಿನ ಮಹತ್ವವಿದೆ.”
 
ಶಿವಗಿರಿ ತೀರ್ಥ ಯಾತ್ರೆ ಮಹತ್ವ
“ಆ ಯುಗ ಪುರುಷನ ಚಿಂತನೆಯೊಂದಿಗೆ ನಡೆಯುವ ಶಿವಗಿರಿ ತೀರ್ಥಯಾತ್ರೆಯು ಆ ರೀತಿಯಲ್ಲಿ ವೈಭವಗೊಳ್ಳುತ್ತಿದೆ. ಶಿವಗಿರಿ ತೀರ್ಥಯಾತ್ರೆ ಯಾಕೆ? ಗುರುವಿಗೆ ಈ ವಿಷಯದಲ್ಲಿ ಸ್ಪಷ್ಟತೆಯಿತ್ತು. ಶ್ರೀ ಬುದ್ಧನ ಅಷ್ಟಾಂಗ ಮಾರ್ಗದಂತಹ ಎಂಟು ವಿಷಯಗಳನ್ನು ಗುರು ಸೂಚಿಸಿದ್ದರು.

ವಿದ್ಯಾಭ್ಯಾಸ, ಶುಚಿತ್ವಂ, ಈಶ್ವರ ಭಕ್ತಿ, ಸಂಘಟನೆ, ಕೃಷಿ, ವ್ಯಾಪಾರ, ಕರಕೌಶಲ್ಯ, ತಾಂತ್ರಿಕ ತರಬೇತಿ ಹೀಗೆ ಎಂಟು ವಿಷಯಗಳು ಪ್ರತಿಯೊಬ್ಬ ಶಿವಗಿರಿ ತೀರ್ಥಯಾತ್ರಿಯ ಲಕ್ಷ್ಯವಾಗಿರಬೇಕೆಂದು ಗುರು ಹೇಳಿದಾಗ, ಅದು ಸ್ವ ಸಮುದಾಯದ ಅಭಿವೃದ್ಧಿ ಮಾತ್ರವಲ್ಲ ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಲಕ್ಷ್ಯವಾಗಿಸಿದ್ದರು ಎನ್ನುವುದು ಸ್ಪಷ್ಟ. ಜ್ಞಾನವನ್ನು ಪಡೆಯಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಲು ಗುರು ಉಪದೇಶಿಸಿದರು. ತಾಂತ್ರಿಕ ಜ್ಞಾನ ಪಡೆಯಬೇಕೆಂದು ಗುರುವೇ ಹೇಳಿದ್ದಾರೆ. ಎಷ್ಟು ದೊಡ್ಡ ದೂರದೃಷ್ಟಿ ಇದರಲ್ಲಿದೆ”.

ಮುಖ್ಯಮಂತ್ರಿಗಳ ಈ ವಿಚಾರಗಳನ್ನು ಟೀಕಿಸಲು ಅಂದವಾದ ರಾಜಕೀಯ ವಿರೋಧವಿರುವವರಿಗೆ ಮಾತ್ರ ಸಾಧ್ಯ. ಕೇರಳ ನಡೆಯುತ್ತಿರುವುದು ಗುರು ನಿರ್ದೇಶಿಸಿರುವ ಈ ದಾರಿಯಲ್ಲಿ ಎಂದು ಮತ್ತೆ ಮುಂದುವರೆಸಿದರು.
 
“ಈ ಹಾದಿಯಲ್ಲಿ ರಾಜ್ಯವು ಸಾಗುತ್ತಿದೆ ಎಂದು ಅಭಿಮಾನದಿಂದ ಹೇಳೋಣ. ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದರ್ಜೆಯ ಮಟ್ಟಕ್ಕೆ ಏರಿಸಿ ಕೃಷಿ ಸ್ವಾವಲಂಬನೆಯತ್ತ ದೇಶವನ್ನು ಕೊಂಡುಯುತ್ತ, ತ್ಯಾಜ್ಯ ವಿಲೇವಾರಿಯಲ್ಲಿ ವಿಶೇಷ ಅಭಿಯಾನವನ್ನು ಆರಂಭಿಸಿ, ವಿದ್ಯಾಭ್ಯಾಸ ಮತ್ತು ಉದ್ಯಮದ ನಡುವಿನ ಜೈವಿಕವಾದ ಬಂಧವನ್ನು ದೃಢಪಡಿಸುತ್ತಾ ಗುರು ತೋರಿಸಿದ ಮಾರ್ಗದಲ್ಲಿ ರಾಜ್ಯ ಮತ್ತು ಸರ್ಕಾರವು ಸಾಗುತ್ತಿರುವುದು. ಗುರುಗಳ ಸಂದೇಶವು ಮಾನವೀಯತೆಯ ಪ್ರೇಮವಾಗಿತ್ತು”.

ಅಂದರೆ, ರಾಜ್ಯವು ಮತ್ತು ಸರ್ಕಾರವು ಗುರು ನಿರ್ದೇಶನದ ಮಾರ್ಗದಲ್ಲಿದೆ ಎಂದು ಮುಖ್ಯಮಂತ್ರಿ ಹೇಳಿದರು!
EMS
4) EMSರನ್ನು ಪಿಣರಾಯಿ ಸರಿಪಡಿಸುತ್ತಿರುವುದು.

ಶ್ರೀ ಪಿಣರಾಯಿ ವಿಜಯನ್ ಅವರ ಪ್ರಸ್ತಾಪಗಳು ಹಿಂದಿನ CPM ಬುದ್ಧಿಜೀವಿಗಳ ನಿಲುವುಗಳಿಗೆ ವಿರುದ್ಧವಾಗಿವೆ. ಮಾರ್ಕ್ಸ್ ವಾದಿ ಸಿದ್ಧಾಂತದ ತಜ್ಞರಾಗಿದ್ದ ಶ್ರೀ EMS ನಂಬೂತಿರಿಪಾಡ್ ಅವರ ಅಭಿಪ್ರಾಯ ಇವೆಲ್ಲವನ್ನೂ ವಿರೋಧಿಸಿತ್ತು.

(A) EMS ಶಿವಗಿರಿಯ ಕಾರ್ಯಕ್ರಮಗಳನ್ನು ತಿರಸ್ಕರಿಸಿದ್ದರು × ಆದರೆ ಪಿಣರಾಯಿ ಉದ್ಘಾಟನೆಗೆ ಹಾಜರಾದರು.

ಶಿವಗಿರಿ ತೀರ್ಥಾಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀರ್ಥಯಾತ್ರೆ ಮಹಾ ಸಮ್ಮೇಳನವನ್ನು ಉದ್ಘಾಟಿಸಿದರು. ಆದರೆ, CPM ತಾತ್ವಿಕಾಚಾರ್ಯ ಆಗಿದ್ದ EMS ನಂಬೂತಿರಿಪಾಡ್ 29 ವರ್ಷಗಳ ಹಿಂದೆ ಶಿವಗಿರಿಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಳ್ಳಲೂ ತಯಾರಿದ್ದಿಲ್ಲ, 1995ರಲ್ಲಿ ಶಿವಗಿರಿ ಸಮ್ಮೇಳನಕ್ಕೆ ಮಠದ ಅಧಿಕಾರಿಗಳು ಆಹ್ವಾನಿಸಿದ್ದರು, ಆದರೆ ಆಹ್ವಾನವನ್ನು ಅವರು ನಿರಾಕರಿಸಿದ್ದರು. ಶಿವಗಿರಿ ತೀರ್ಥಯಾತ್ರೆ ಸಮ್ಮೇಳನಕ್ಕೆ ಆಹ್ವಾನಿಸಿ ಅದರಲ್ಲಿ ಭಾಗಿಯಾಗಿದ್ದವರಲ್ಲಿ ಕೇಂದ್ರ-ರಾಜ್ಯ ಆಡಳಿತಾಧಿಕಾರಿಗಳು, ರಾಜಕೀಯ ನಾಯಕರು, ಸಾಂಸ್ಕೃತಿಕ ನಾಯಕರೆಲ್ಲರು ಅದನ್ನು ಗೌರವವಾಗಿ ಕಂಡಾಗ ಅವರು ಉದ್ದೇಶಪೂರ್ವಕವಾಗಿ ಆಹ್ವಾನವನ್ನು ತಿರಸ್ಕರಿಸಿದ್ದರು.

(B) ಗುರು ದೇವರಿಗೆ ಪ್ರಸ್ತುತತೆಯಿಲ್ಲ ಎಂದು ಮತ್ತು ತೀರ್ಥಯಾತ್ರೆಯನ್ನು ಒಪ್ಪುವುದಿಲ್ಲ ಎಂದ EMS × ಆದರೆ, ಗುರುದೇವರ ಮತ್ತು ಶಿವಗಿರಿ ತೀರ್ಥಯಾತ್ರೆಯ ಪ್ರಸ್ತುತತೆ ಮತ್ತು ಮಹತ್ವವನ್ನು ಪಿಣರಾಯಿ ಹೇಳಿದರು.

ಶಿವಗಿರಿಯ ಆಹ್ವಾನವನ್ನು ಏಕೆ ಸ್ವೀಕರಿಸಲಿಲ್ಲವೆಂದು ವಿವರಿಸುತ್ತಾ EMS “ದೇಶಾಭಿಮಾನಿ ವಾರಪತ್ರಿಕೆಯಲ್ಲಿ” ಬರೆದಿದ್ದಾರೆ: “ಅವರ ( ಶ್ರೀ ನಾರಾಯಣ ಗುರುದೇವರು) ಸಂದೇಶಗಳಿಗೆ ಇನ್ನೂ ಪ್ರಸ್ತುತತೆ ಇದೆ ಎಂದು, ಕೇರಳದ ಮತ್ತಷ್ಟು ಬೆಳವಣಿಗೆಗೆ ಶ್ರೀ ನಾರಾಯಣ ಗುರುಗಳು ದಾರಿ ತೋರುವರೆಂದು ಹೇಳುವುದರಲ್ಲಿ ನನಗೆ ಸಮ್ಮತಿ ಇಲ್ಲ. ಶ್ರೀ ನಾರಾಯಣ ಸಂಸ್ಥೆಯ ತೀರ್ಥಯಾತ್ರೆಯ ಕಾರ್ಯಕ್ರಮಗಳ ಆಯೋಜಕರಾಗಿ ಅಥವಾ ವಕ್ತಾರರಾಗಿ ಸಾರ್ವಜನಿಕರ ಮುಂದೆ ನನ್ನಂತವರು ಬರುವುದು ಅವಿವೇಕವಾಗುತ್ತದೆ” (ದೇಶಾಭಿಮಾನಿ ವಾರಪತ್ರಿಕೆ, 1995 ಜನವರಿ 15-21″)

ಶ್ರೀ ನಾರಾಯಣ ಗುರುಗಳ ಸಂದೇಶಗಳಿಗೆ ಇನ್ನೂ ಪ್ರಸ್ತುತತೆ ಇದೆ ಎನ್ನುವ ನಿಲುವು ಕೇರಳದ ಪ್ರಗತಿಗೆ ಅವರ ಚಿಂತನೆಗಳು ಕೊಡುಗೆ ನೀಡುತ್ತವೆ ಎನ್ನುವ ದೃಷ್ಟಿಕೋನ ನನಗಿಲ್ಲವೆಂದು ಕೇರಳ ಕಂಡ ಅತ್ಯುತ್ತಮ ಮಾರ್ಕ್ಸ್ ವಾದಿ ಸಿದ್ಧಾಂತದ ತಜ್ಞ EMS 1995 ರಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಆದರೆ 30 ವರ್ಷಗಳ ಒಳಗೆ ಪಿಣರಾಯಿ ಈ ಎಲ್ಲಾ ಧೋರಣೆಗಳನ್ನು ಸರಿಪಡಿಸುತ್ತಿದ್ದಾರೆ.

ಗುರುದೇವ ಸಮಾಧಿ ಶತವರ್ಷ (2028) ಸಮೀಪಿಸುತ್ತಿರುವ ಈ ಆಧುನಿಕ ಕಾಲಘಟ್ಟದಲ್ಲೂ ಸಮಾಜಕ್ಕೆ ಮಾತ್ರವಲ್ಲ ಸರ್ಕಾರಕ್ಕೂ ಶ್ರೀ ನಾರಾಯಣ ಗುರುಗಳು ದಾರಿ ತೋರುತ್ತಿದ್ದಾರೆಂದು ಮುಖ್ಯಮಂತ್ರಿ ಹೇಳಿದರು.
ದೇಶಾಭಿಮಾನಿ ದಿನಪತ್ರಿಕೆ, ದೇಶಾಭಿಮಾನಿ ವಾರಪತ್ರಿಕೆ, ಚಿಂತಾ ವಾರಪತ್ರಿಕೆಗಳಲ್ಲಿ EMSರ ಈ ವಿಷಯದ ಬಗೆಗಿನ ಅಭಿಪ್ರಾಯಗಳನ್ನು ಪ್ರಕಟಿಸಿದ್ದವು.

ಈಗ ದೇಶಾಭಿಮಾನಿ ದಿನಪತ್ರಿಕೆಯ ಮುಖ್ಯ ಭಾಷಣದ ಶೀರ್ಷಿಕೆಯೇ (3/1/2025) “ಜಾತಿ- ಮತ ಬೇಧಗಳಿಲ್ಲದ ಕಾಲಾತೀತವಾದ ಗುರುದರ್ಶನಂ”. ಗುರು ಧರ್ಮವನ್ನು ಹೊಗಳುವ ಲೇಖನಗಳನ್ನು ಈಗ ಈ ಪ್ರಕಟಣೆಗಳಲ್ಲಿ ನೀಡಲಾಗುತ್ತಿದೆ!

ಇದೊಂದು ಶುಭ ಸೂಚನೆ. ಮೂರು ದಶಕಗಳ ಒಳಗೆ EMSರಿಂದ ಪಿಣರಾಯಿ ವಿಜಯನ್ನರವರೆಗೆ ತಲುಪುವವರೆಗೆ ಹಿಂದಿನ ರಾಜಕೀಯ ನಿಲುವುಗಳು/ ತಪ್ಪುಗಳು ಸರಿಯಾಗುತ್ತಿರುವುದು ಸ್ವಾಗತಾರ್ಹವಲ್ಲವೇ? ಮುಖ್ಯಮಂತ್ರಿಗಳ ಭಾಷಣದ ವಿವಾದದ ಮಧ್ಯೆ ಈ ಮಾನಸಿಕ ಪರಿವರ್ತನೆಗಳು ಚರ್ಚೆಯಾಗಬೇಕಲ್ಲವೇ??
Sree-narayana-guru-samadhi
5) “ಕೇರಳ ಕೇರಳವಾದದ್ದರ ಕಾರಣವೇ ಗುರುಧರ್ಮ” ಎಂದ ಪಿಣರಾಯಿ!
“ಗುರು ಜೀವಿಸಿ ಮನುಷ್ಯತ್ವವನ್ನು ಸಾರಿದ ಮಣ್ಣು ಇಲ್ಲಿ ಇರುವುದು ಎಂದೆ ಕೇರಳದಲ್ಲಿ ಜನಾಂಗೀಯ ದ್ವೇಷ ಭಯಾನಕವಾದ ಮಟ್ಟಕ್ಕೆ ಹೋಗುತ್ತಿಲ್ಲ” ಎಂದು ಮುಖ್ಯಮಂತ್ರಿ ಹೇಳಿದರು.

ಕೆಲವು ರಾಜಕಾರಣಿಗಳು ಯಾವಾಗಲೂ ತಾವು ಇಲ್ಲಿ ಶಕ್ತವಾಗಿರುವುದಕ್ಕೆ “ಕೇರಳ ಕೇರಳವಾಗಿ ಉಳಿದಿದೆ” ಎಂದು ಹೇಳಿಕೊಳ್ಳುತ್ತಿರುತ್ತಾರೆ. ಆದರೆ ಶ್ರೀ ನಾರಾಯಣ ಗುರುಗಳ ಚಿಂತನೆಗಳ ಇದರ ಹಿಂದೆ ಇರುವುದೆಂದು ಮುಖ್ಯಮಂತ್ರಿ ಒಪ್ಪುತ್ತಾರೆ. ಇದು ಸ್ವಾಗತ ಅರ್ಹವಾದ ವಿಷಯವಲ್ಲವೇ?
6) “ಗುರುವನ್ನು ಜಾತಿಯ ಮತದ ಬೇಲಿ ಹಾಕಿ ಅದರೊಳಗೆ ಪ್ರತಿಷ್ಠಾಪಿಸಲು ಯಾರಾದರೂ ಪ್ರಯತ್ನಿಸಿದರೆ ಅದಕ್ಕಿಂತ ದೊಡ್ಡ ಗುರುವಿನಿಂದನೆ ಇನ್ನೊಂದಿಲ್ಲ. ಗುರು ಯಾವುದರ ವಿರುದ್ಧ ಹೋರಾಡಿದರೊ ಅದರ ವಕ್ತಾರರಾಗಿ ಗುರುವನ್ನು ಬಿಂಬಿಸುವ ಶ್ರಮಗಳು ನಡೆಯುತ್ತವೆ. ಅದು ಆಗಬಾರದು” ಪಿಣರಾಯಿ ನೆನಪಿಸುತ್ತಾರೆ.

ನಾರಾಯಣ ಗುರು ಮತ್ತು ಗುರು ಧರ್ಮವನ್ನು ಉರುಳಿಸುವ ಪ್ರಯತ್ನಗಳ ವಿರುದ್ಧ ಎಚ್ಚರ ವಹಿಸಬೇಕೆಂಬ ಮುಖ್ಯಮಂತ್ರಿಯ ಎಚ್ಚರಿಕೆಯನ್ನು ನಾವು ಗಂಭೀರವಾಗಿ ಸ್ವೀಕರಿಸುತ್ತೇವೆ. ಅದಕ್ಕಾಗಿಯೇ ಈ ಲೇಖನ ಸರಣಿಯನ್ನು ಬರೆಯುತ್ತಿರುವುದು.

( ಮುಂದುವರೆಯುವುದು…)